For Quick Alerts
ALLOW NOTIFICATIONS  
For Daily Alerts

ಶಿವರಾತ್ರಿಗಾಗಿ ಬಾಯಲ್ಲಿ ನೀರೂರಿಸುವ ವಿಶೇಷ ಸಿಹಿತಿಂಡಿಗಳು

|

ಶಿವರಾತ್ರಿಯ ಪವಿತ್ರ ದಿನವನ್ನು ಶಿವ ಮತ್ತು ಪಾರ್ವತಿಯ ಮದುವೆಯ ದಿನವನ್ನಾಗಿ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಭಾರತದಾದ್ಯಂತ ಅತ್ಯಂತ ಜನಪ್ರಿಯ ಹಬ್ಬ

ಇದಾಗಿದೆ. ಎಲ್ಲಾ ಹಬ್ಬಗಳಲ್ಲಿ ಸಿಹಿತಿಂಡಿ ಕಡ್ಡಾಯವಾದ ಖಾದ್ಯವಾಗಿದೆ. ಆದ್ದರಿಂದಲೇ ಶಿವರಾತ್ರಿಗಾಗಿ ತಯಾರಿಸುವ ಸಿಹಿತಿಂಡಿಗಳು ವಿಶೇಷ ರುಚಿಯನ್ನು ಹೊಂದಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿಕರವಾದ ಮತ್ತು ಸ್ವಲ್ಪ ವಿಭಿನ್ನವಾದ ಪಾನಕ!

ಶಿವರಾತ್ರಿಗಾಗಿ ತಯಾರಿಸುವ ಎಲ್ಲಾ ಖಾದ್ಯಗಳು ಸಸ್ಯಾಹಾರವಾಗಿರುತ್ತವೆ, ಮತ್ತು ಈ ಶಿವರಾತ್ರಿಗಾಗಿ ಹೆಚ್ಚುವರಿ ಖಾದ್ಯಗಳೆಲ್ಲವೂ ಸಿಹಿತಿಂಡಿಗಳಾಗಿವೆ. ಮೊದಲು ಇದನ್ನು ದೇವರಿಗೆ ಅರ್ಪಿಸಿ ನಂತರ ಪ್ರಸಾದ ರೂಪದಲ್ಲಿ ನಾವು ಸೇವಿಸುತ್ತೇವೆ. ತಮ್ಮ ವೃತವನ್ನು ಸಂಪನ್ನಗೊಳಿಸಲು ಸಹ ವೃತಾಧಾರಿಗಳು ಈ ಸಿಹಿತಿಂಡಿಗಳನ್ನು ಸೇವಿಸಬಹುದಾಗಿದೆ.

ಶಿವರಾತ್ರಿಯಂದು ಭಾಂಗ್ ಸೇವಿಸುವ ಪದ್ಧತಿ ಕೂಡ ಚಾಲ್ತಿಯಲ್ಲಿದೆ. ಶಿವನು ಒಬ್ಬ ತಪಸ್ವಿಯಾಗಿರುವುದರಿಂದ ಭಾಂಗ್‌ನ ಮತ್ತು ಬರಿಸುವ ಪರಿಣಾಮಕ್ಕಾಗಿ ಶಿವನು ಇದರ ಮೇಲೆ ಮೋಹವನ್ನು ಹೊಂದಿರುವರು.

ಆದ್ದರಿಂದಲೇ ಶಿವನನ್ನು ಒಲಿಸುವ ಸಲುವಾಗಿ ಭಾಂಗ್ ರೆಸಿಪಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಹೆಚ್ಚಿನ ಶಿವರಾತ್ರಿ ಸಿಹಿತಿಂಡಿಗಳು ಭಾಂಗ್‌ನ ಅಂಶವನ್ನು ಒಳಗೊಂಡಿರುತ್ತವೆ.

ಶಿವರಾತ್ರಿಗಾಗಿ ಹೆಚ್ಚು ಜನಪ್ರಿಯವಾದ ಕೆಲವೊಂದು ಸಿಹಿತಿಂಡಿಗಳನ್ನು ನೀಡುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವರಾತ್ರಿ ಸ್ಪೆಶಲ್: ರುಚಿಕರವಾಗಿರುವ ಸಾಬಕ್ಕಿ ರೆಸಿಪಿ

ಹಿಸುಕಿದ ಸಾಬಕ್ಕಿ:

ಹಿಸುಕಿದ ಸಾಬಕ್ಕಿ:

ಹಿಸುಕಿದ ಸಾಬಕ್ಕಿ ರೆಸಿಪಿಯ ಮೂಲ ಬಂಗಾಳವಾಗಿದೆ. ಶಿವರಾತ್ರಿ ವೃತಕ್ಕೆ ಅನುಸಾರವಾಗಿ ಈ ಡಿಶ್‌ನಲ್ಲಿ ಉಪ್ಪಿರುವುದಿಲ್ಲ. ಹೆಚ್ಚಿನ ಶಿವರಾತ್ರಿ ರೆಸಿಪಿಗಳು ಕಲ್ಲುಪ್ಪಿನಿಂದ ತಯಾರಿಸಲಾಗುತ್ತದೆ. ಆದರೆ ವೃತಕ್ಕಾಗಿ ಹಿಸುಕಿದ ಸಾಬಕ್ಕಿ ರೆಸಿಪಿಯನ್ನು ತಯಾರಿಸುವುದರಿಂದ ಉಪ್ಪು ಹಾಕುವುದಿಲ್ಲ.

ವೃತದ ಹಲ್ವಾ:

ವೃತದ ಹಲ್ವಾ:

ಹುರುಳಿ ಹಿಟ್ಟು, ಕಲ್ಲುಪ್ಪು, ವಾಟರ್ ಚೆಸ್ಟ್‌ನಟ್ ಹುಡಿಯನ್ನು ಹಾಕಿ ಕೆಲವೊಂದು ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ. ವೃತದ ಸಮಯದಲ್ಲಿ ಈ ಸಾಮಾಗ್ರಿಗಳನ್ನು ಬಳಸಿ ತಯಾರಿಸಿದ ತಿಂಡಿಗಳನ್ನು ಸೇವಿಸಬಹುದು. ಅದಕ್ಕಾಗಿ ನಾವು ಹುರುಳಿ ಹಿಟ್ಟು ಮತ್ತು ಚೆಸ್ಟ್‌ನಟ್ ಹುಡಿಯಿಂದ ತಯಾರಿಸಲಾದ ವಿಶೇಷ ಖಾದ್ಯವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ನೀವು ವೃತವನ್ನು ಆಚರಿಸಿ ಇಲ್ಲವೇ ಆಚರಸದಿರಲಿ ವೃತದ ಹಲ್ವಾವನ್ನು ನೀವು ಸೇವಿಸಬಹುದು.

ಕಾಜು ಬರ್ಫಿ:

ಕಾಜು ಬರ್ಫಿ:

ಈ ವಿಶೇಷವಾದ ಕಾಜು ಬರ್ಫಿಗಳನ್ನು ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ತೆತ್ತು ನೀವು ಕೊಂಡುಕೊಳ್ಳಬೇಕಾಗಿಲ್ಲ. ಶಿವರಾತ್ರಿ ಹತ್ತಿರ ಬರುತ್ತಿದೆ ಈ ಸಿಹಿಯನ್ನು ತಯಾರಿಸಲು ಇದೊಂದು ಸದೈವಕಾಶ. ಸರಿಯಾದ ಸಕ್ಕರೆ ಪಾಕದ ಮೂಲಕ ಗಟ್ಟಿಯಾದ ಸೂಕ್ತವಾದ ಬರ್ಫಿಗಳನ್ನು ತಯಾರಿಸುವುದು ಒಂದು ತಂತ್ರವಾಗಿದೆ.

ಮಾವಾ ಮಲ್ಪುವಾ:

ಮಾವಾ ಮಲ್ಪುವಾ:

ಮಲ್ಪುವಾ ಒಂದು ಭಾರತೀಯ ಸಾಂಪ್ರದಾಯಿಕ ಸಿಹಿತಿಂಡಿಯಾಗಿದೆ. ಹುರಿದ ಪ್ಯಾನ್‌ಕೇಕ್ ಅನ್ನು ಸಕ್ಕರೆ ಪಾಕದಲ್ಲಿ ಅದ್ದಿ ಇದನ್ನು ತಯಾರಿಸಲಾಗುತ್ತದೆ. ನಿಮ್ಮ ಶಿವರಾತ್ರಿ ವೃತವನ್ನು ಮುಕ್ತಾಯಗೊಳಿಸಲು ಇದು ಉತ್ತಮವಾಗಿದೆ.

ಕಪ್ಪು ಎಳ್ಳಿನ ಲಾಡು:

ಕಪ್ಪು ಎಳ್ಳಿನ ಲಾಡು:

ಕಪ್ಪು ಎಳ್ಳನ್ನು ಹೆಚ್ಚಾಗಿ ಲಾಡು ತಯಾರಿಸಲು ಬಳಸಲಾಗುತ್ತದೆ. ಇದನ್ನು ಶಿವರಾತ್ರಿ ಆಚರಣೆಯಂದು ಹಿಂದೂ ಧಾರ್ಮಿಕ ನಿಯಮಗಳಿಗನುಸಾರವಾಗಿ ತಯಾರಿಸಲಾಗುತ್ತದೆ. ಕರಗಿಸಿದ ಬೆಲ್ಲದೊಂದಿಗೆ ಮಿಶ್ರ ಮಾಡಿದ ಕಪ್ಪು ಎಳ್ಳಿನಿಂದ ಈ ಲಾಡುಗಳನ್ನು ತಯಾರಿಸಲಾಗುತ್ತದೆ.

ಥಂಡೈ:

ಥಂಡೈ:

ನಿಮ್ಮ ಶಿವರಾತ್ರಿ ಮತ್ತು ಹೋಳಿ ಆಚರಣೆಗಾಗಿ ಹೇಳಿ ಮಾಡಿಸಿದ ಡಿಶ್ ಆಗಿದೆ. ಭಾಂಗ್ ಬಳಸಿ ಈ ಪೇಯವನ್ನು ತಯಾರಿಸಲಾಗುತ್ತದೆ. ಮೂಲತಃ ಥಂಡೈ ರೆಸಿಪಿಯನ್ನು ಹಾಲು, ಡ್ರೈ ಫ್ರುಟ್ಸ್ ಬಳಸಿ

ಸಿದ್ಧಪಡಿಸಲಾಗುತ್ತದೆ.

ಕೇಸರಿ ಪೇಡಾ:

ಕೇಸರಿ ಪೇಡಾ:

ಹಾಲು ಪ್ರತಿಯೊಂದು ಸಿಹಿಗೂ ವಿಶೇಷ ರುಚಿ ಮತ್ತು ಸುವಾಸನೆಯನ್ನು ನೀಡುತ್ತದೆ. ಈ ಕೇಸರಿ ಪೇಡಾವನ್ನು ಕ್ರೀಮಿ ಹಾಲು ಮತ್ತು ಕೇಸರಿಯಿಂದ ತಯಾರಿಸಲಾಗುತ್ತದೆ.

ಭಾಂಗ್ ಬಾದಾಮಿ ಬರ್ಫಿ:

ಭಾಂಗ್ ಬಾದಾಮಿ ಬರ್ಫಿ:

ಇಂದು, ಭಾಂಗ್ ಸೇರಿಸಿದ ಬಾದಾಮಿ ಬರ್ಫಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಶಿವರಾತ್ರಿಗಾಗಿ ರುಚಿಯುಳ್ಳ ಭಾಂಗ್ ಬಾದಾಮಿ ಬರ್ಫಿಯನ್ನು ನಾವು ಆಯ್ಕೆಮಾಡುತ್ತಿದ್ದೇವೆ.

ರಬ್ರಿ:

ರಬ್ರಿ:

ಬನಾರಸ್‌ನ ವಿಶೇಷ ಸಿಹಿಯಾಗಿದೆ ರಬ್ರಿ. ಇದು ಮೂಲತಃ ದಪ್ಪ ಹಾಲು ಮತ್ತು ಡ್ರೈ ಫ್ರುಟ್ಸ್ ಹಾಗೂ ಕೇಸರಿಯನ್ನು ಬೆರೆಸಿ ತಯಾರಿಸಲಾಗುತ್ತದೆ. ಬನಾರಸ್ ಅನ್ನು ಶಿವನ ಪವಿತ್ರ ಸ್ಥಳವೆಂದು ಕರೆಯುತ್ತಾರೆ.

ಭಾಂಗ್ ಪೇಡಾ:

ಭಾಂಗ್ ಪೇಡಾ:

ಶಿವರಾತ್ರಿ ಮತ್ತು ಹೋಳಿಗಾಗಿ ತಯಾರಿಸಲಾಗುವ ವಿಶೇಷ ಭಾರತೀಯ ಸಿಹಿತಿಂಡಿಯಾಗಿದೆ ಭಾಂಗ್ ಪೇಡಾ. ನಿಮಗೆ ಬೇಕಾಗಿರುವುದು ಹಾಲಿನ ಹುಡಿ, ಸುಗಂಧಯುಕ್ತ ಮಸಾಲೆಗಳಾದ ಏಲಕ್ಕಿ ಮತ್ತು ಭಾಂಗ್. ಸಕ್ಕರೆ ಮತ್ತು ಭಾಂಗ್‌ನ ಮಿಶ್ರಣ ಈ ಸಿಹಿತಿಂಡಿಯನ್ನು ಶಿವರಾತ್ರಿಗಾಗಿ ವಿಶೇಷಗೊಳಿಸುತ್ತದೆ.

English summary

Sweet Recipes For Maha Shivratri

Shivratri is the auspicious occasion that celebrates the marriage of Lord Shiva and Devi Parvati. It is one of the integral parts of the Hindu calendar. Shivratri is also a very popular festival across India. And all Indian festivals provide the perfect excuse to indulge your sweet tooth.
X
Desktop Bottom Promotion