For Quick Alerts
ALLOW NOTIFICATIONS  
For Daily Alerts

ಕರಾಚಿ ಹಲ್ವಾ: ಒಮ್ಮೆ ಮಾಡಿ ಸವಿದು ನೋಡಿ

By Arshad
|

ಸಿಹಿತಿಂಡಿ ಎಂದರೆ ಯಾರಿಗೆ ಇಷ್ಟವಿಲ್ಲ? ಅದರಲ್ಲೂ ಹಲ್ವಾ ಹೆಸರು ಕೇಳಿದರೇ ಬಾಯಿಯಲ್ಲಿ ನೀರೂರುತ್ತದೆ. ಆದರೆ ಕರ್ನಾಟಕದ ಹಲ್ವಾ ಕೊಂಚ ಗಟ್ಟಿಯಾಗಿರುತ್ತದೆ. ಕೇರಳದ ಹಲ್ವಾ ಮೃದುವಾಗಿದ್ದರೂ ಅಲ್ಲಿಂದ ಊರಿಗೆ ತರುವವರೆಗೆ ಕೆಡದೇ ಇರುವ ಸಾಧ್ಯತೆ ಕಡಿಮೆ. ಮಾಮೂಲಿಯ ಕ್ಯಾರೆಟ್ ಹಲ್ವ, ಕೊಬ್ಬರಿ, ಕುಂಬಳ, ಗೋಡಂಬಿ ಹಲ್ವಾ ಎಲ್ಲವನ್ನೂ ಮಾಡಿನೋಡಿ ಬೇಜಾರಾಗಿಬಿಟ್ಟಿದೆಯೇ?

ಹಾಗಿದ್ದಾಗ ಕೊಂಚ ಭಿನ್ನವಾದ ಮತ್ತು ರುಚಿಕರವಾದ ಹಲ್ವಾ ತಯಾರಿಸಬೇಕೆಂದಿದ್ದರೆ ಈ ಬಾರಿ ಕರಾಚಿ ಹಲ್ವಾ ತಯಾರಿಸಲು ಮನಸ್ಸು ಮಾಡಿ. ಇದು ಸುಲಭ ಮತ್ತು ಕಡಿಮೆ ಸಮಯದಲ್ಲಿ ತಯಾರಾಗುತ್ತದೆ ಹಾಗೂ ಇದರ ರುಚಿ ಎಲ್ಲರ ಮನಗೆಲ್ಲುತ್ತದೆ. ಇದೇ ಕಾರಣಕ್ಕೆ ಥಟ್ಟನೇ ಮನೆಗೆ ಅತಿಥಿಗಳು ಆಗಮಿಸಿದಾಗ, ಊರಿಗೆ ಕೊಂಡು ಹೋಗುವಾಗ, ಮನೆಯಿಂದ ಮಕ್ಕಳು ಊರಿನಿಂದ ಹೊರಹೋಗುವಾಗ ಕಟ್ಟಿಕೊಡಲು ಅತ್ಯಂತ ಪ್ರಶಸ್ತವಾದ ಸಿಹಿತಿಂಡಿಯಾಗಿದೆ.

ಇದಕ್ಕೆ ವಿಶೇಷ ಸಾಮಾಗ್ರಿಗಳ ಅವಶ್ಯಕತೆ ಇಲ್ಲದ ಕಾರಣ ವಿಶೇಷವಾಗಿ ಅಂಗಡಿಗೆ ಹೋಗಿ ತರಬೇಕೆಂದೂ ಇಲ್ಲದ ಕಾರಣ ಯಾವಾಗ ಮನಸ್ಸಾಯಿತೋ ಆಗೆಲ್ಲಾ ತಯಾರಿಸಬಹುದು. ಕೊಂಚ ಹೆಚ್ಚಿನ ಆಕರ್ಷಣೆಗಾಗಿ ಆಹಾರದ ಬಣ್ಣವನ್ನು ಉಪಯೋಗಿಸಬಹುದು. ಭಿನ್ನ ಬಣ್ಣಗಳನ್ನು ಉಪಯೋಗಿಸುವ ಮೂಲಕ ಅತಿಥಿಗಳು ಇದು ಹೇಗೆ ತಯಾರಿಸಿದ್ದಿರಬಹುದು ಎಂದು ಯೋಚಿಸುವಂತೆಯೂ ಮಾಡಬಹುದು. ಬನ್ನಿ, ಈ ಹಲ್ವಾ ತಯಾರಿಸುವ ಬಗೆಯನ್ನು ಈಗ ನೋಡೋಣ:

Special Karachi Halwa Recipe

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಹತ್ತು ನಿಮಿಷಗಳು

ಸಾಮಾಗ್ರಿಗಳು: ಮೆಕ್ಕೆಜೋಳದ ಹಿಟ್ಟು (ಕಾರ್ನ್ ಫ್ಲೋರ್) ಒಂದು ಕಪ್
*ಸಕ್ಕರೆ: ಎರಡು ಕಪ್
*ತುಪ್ಪ: ಅರ್ಧ ಕಪ್
*ಲಿಂಬೆರಸ: ಒಂದು ಚಿಕ್ಕ ಚಮಚ
*ಗೋಡಂಬಿ : ಒಂದು ಕಪ್
*ಒಣದ್ರಾಕ್ಷಿ: ಅರ್ಧ ಕಪ್
*ಕೇಸರಿ: ನಾಲ್ಕರಿಂದ ಐದು ಎಸಳುಗಳು
*ಆಹಾರದ ಬಣ್ಣ: (ಕೆಂಪು, ಹಸಿರು ಇತ್ಯಾದಿ) - ಅರ್ಧ ಚಿಕ್ಕ ಚಮಚ

ತಯಾರಿಕಾ ವಿಧಾನ:
1) ಮೊದಲು ಸಕ್ಕರೆಯ ಪಾಕ ತಯಾರಿಸಿಕೊಳ್ಳಿ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ನೀರು ಹಾಕಿ ಸಕ್ಕರೆ ಹಾಕಿ. ಸಕ್ಕರೆಯ ಪ್ರಮಾಣದಷ್ಟೇ ನೀರು ಇರುವಂತಿರಲಿ, ಇದರಿಂದ ಪಾಕ ದಪ್ಪನಾಗುತ್ತದೆ.
2) ಇನ್ನೊಂದು ಪಾತ್ರೆಯಲ್ಲಿ ಜೋಳದ ಹಿಟ್ಟು ಹಾಕಿ ಕೊಂಚ ನೀರನ್ನು ಸೇರಿಸಿ ನಾದಿ. ಇದು ಒಂದು ನಯವಾದ ಲೇಪನದಂತಾಗಬೇಕು. ಹಿಟ್ಟೆಲ್ಲಾ ಚೆನ್ನಾಗಿ ಮಿಶ್ರಣವಾಗಿದೆ, ಗಂಟುಗಳಿಲ್ಲ ಎಂದು ಖಾತ್ರಿಪಡಿಸಿಕೊಂಡ ಬಳಿಕ ಸಕ್ಕರೆ ಪಾಕದ ಪಾತ್ರೆಗೆ ಸೇರಿಸಿ ಮಿಶ್ರಣ ಮಾಡಿ. 3) ಈ ಮಿಶ್ರಣವನ್ನು ನಿಧಾನವಾಗಿ ಕೊಂಚ ಕಾಲ ಸತತವಾಗಿ ತಿರುವುತ್ತಿರಿ. ಈ ಪಾಕ ಗಟ್ಟಿಯಾಗುವರೆಗೆ ತಿರುವಿ. ಬಳಿಕ ತುಪ್ಪ, ಆಹಾರದ ಬಣ್ಣ ಮತ್ತು ಲಿಂಬೆರಸ ಸೇರಿಸಿ ಇನ್ನಷ್ಟು ಮಿಶ್ರಣ ಮಾಡಿ. (ಒಂದು ವೇಳೆ ಲಿಂಬೆಹುಳಿ ಇಷ್ಟವಿಲ್ಲದಿದ್ದರೆ ಅಗತ್ಯವಿಲ್ಲ, ಆಹಾರದ ಬಣ್ಣವೂ ಐಚ್ಛಿಕ)
4) ಕಡೆಯದಾಗಿ ಕೇಸರಿ ಸೇರಿಸಿ ಮಿಶ್ರಣ ಮಾಡಿ. ಬಳಿಕ ಗೋಡಂಬಿ ದ್ರಾಕ್ಷಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಒಂದು ತಟ್ಟೆಯ ಮೇಲೆ ವೃತ್ತಾಕಾರದಲ್ಲಿ ಹರಡಿ ತಣಿಯಲು ಬಿಡಿ. ಬಳಿಕ ನಿಮ್ಮ ಆಯ್ಕೆಯ ಆಕಾರದಲ್ಲಿ ಕತ್ತರಿಸಿ ಅತಿಥಿಗಳಿಗೆ ಮತ್ತು ಮನೆಯ ಸದಸ್ಯರಿಗೆ ಬಡಿಸಿ. ಈ ರೆಸಿಪಿ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಜಾಗವನ್ನು ಬಳಸಿ.

English summary

Special Karachi Halwa Recipe

If you have a sweet tooth and want to try a different sweet recipe, we suggest you try some halwa. It is amazingly soft and just melts when you take a bite at it. The most common halwa recipes are the carrot halwa, cashew halwa, pumpkin halwa and many more.But, today, we shall share with you an easy and tasty karachi halwa recipe. have a look
X
Desktop Bottom Promotion