For Quick Alerts
ALLOW NOTIFICATIONS  
For Daily Alerts

ನಾಗರ ಪಂಚಮಿಗೆ ಶೇಂಗಾ ಉಂಡೆ ರೆಸಿಪಿ

|
Shenga Unde Recipe
ಶ್ರಾವಣ ಮಾಸ ಬಂತು ಅಂದರೆ ಹಬ್ಬಗಳ ಸಂಭ್ರಮ ಪ್ರಾರಂಭವಾಗುತ್ತದೆ, ಒಂದರ ನಂತರ ಒಂದು ಹಬ್ಬಗಳು ಬರಲಾರಂಭಿಸುತ್ತದೆ. ಪ್ರತಿಯೊಂದು ಹಬ್ಬದಲ್ಲೂ ಕೆಲವೊಂದು ಅಡುಗೆಗಳು ವಿಶೇಷವಾಗಿರುತ್ತದೆ.ಗಣೇಶನ ಹಬ್ಬಕ್ಕೆ ಕಡುಬು ಪ್ರಮುಖವಾದರೆ ನಾಗರ ಪಂಚಮಿ ಹಬ್ಬದ ಸಂಭ್ರಮದಲ್ಲಿ ಕಡುಬು, ಶೇಂಗಾ ಉಂಡೆ, ತಂಬಿಟ್ಟು ಹೀಗೆ ಬರೀ ಸಾತ್ವಿಕ ಅಡುಗೆಗಳನ್ನೇ ತಯಾರಿಸಲಾಗುವುದು.

ಅದರಲ್ಲೂ ಶೇಂಗಾ ಉಂಡೆಯನ್ನು ಹೆಚ್ಚಿನವರ ಮನೆಯಲ್ಲಿ ತಯಾರಿಸಲಾಗುವುದು. ಈ ಶೇಂಗಾ ಉಂಡೆ ತಯಾರಿಸಲು ಸುಲಭವಾಗಿದ್ದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಪಂಚಮಿಗೆ ನೀವು ಕೂಡ ಶೇಂಗಾ ಉಂಡೆ ಮಾಡಲು ಬಯಸುವುದಾದರೆ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು
ಹುರಿದ ಶೇಂಗಾ ( ತರಿ ತರಿಯಾಗಿ ಪುಡಿ ಮಾಡಿರಬೇಕು)- 2 ಕಪ್
ಓಲೆ ಬೆಲ್ಲದ ಪುಡಿ 1 ಕಪ್
ಹುರಿಗಡಲೆ ಹಿಟ್ಟು 1/2 ಕಪ್
ಒಣ ಕೊಬ್ಬರಿ
3 ಚಮಚ ತುಪ್ಪ
ಏಲಕ್ಕಿ ಪುಡಿ.

ಮಾಡುವ ವಿಧಾನ:

1. ಬೆಲ್ಲದ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ ಬೆಲ್ಲದ ಪಾನಕ ಮಾಡಬೇಕು. ಪಾನಕ ಸ್ವಲ್ಪ ಗಟ್ಟಿಯಾಗಿರಲಿ.

2. ಈಗ ಕುದಿಯುತ್ತಿರುವ ಬೆಲ್ಲದ ಪಾನಕಕ್ಕೆ ಶೇಂಗಾ ಪುಡಿ ಹಾಗೂ ಹುರಿಗಡಲೆ ಹಿಟ್ಟು, ತುರಿದ ಒಣ ಕೊಬ್ಬರಿ ಮತ್ತು ಏಲಕ್ಕಿ ಪುಡಿಗಳನ್ನು ಸೇರಿಸಿ ಮಿಶ್ರಮಾಡಬೇಕು. ನಂತರ ತುಪ್ಪವನ್ನು ಹಾಕಿ ಕಲೆಸಬೇಕು.

3. ಈ ಮಿಶ್ರಣ ಬಿಸಿಯಾಗಿದ್ದಾಗಲೇ ಉಂಡೆಗಳನ್ನು ಕಟ್ಟಬೇಕು.

English summary

Shenga Unde Recipe For Nagara Pannchami | Variety Of Snacks Recipe | ನಾಗರ ಪಂಚಮಿಗೆ ಶೇಂಗಾ ಉಂಡೆ ರೆಸಿಪಿ | ಅನೇಕ ಬಗೆಯ ತಿಂಡಿ ರೆಸಿಪಿ

During Nagara Panchami Festival time will prepare only sweet and vegetarian food. During this time prepare shenga unde, tambittu, kadubu so on. This year nagara panchami if you want to prepare Shenga Unde Here is recipe you try it.
X
Desktop Bottom Promotion