For Quick Alerts
ALLOW NOTIFICATIONS  
For Daily Alerts

ಓಣಂ 2019 ಸ್ಪೆಷಲ್: ಸ್ವಾದಿಷ್ಟ ಅಡಾ ಪಾಯಸಂ

By manu
|

ಕೇರಳ ರಾಜ್ಯದ ಅತ್ಯಂತ ಮಹತ್ವದ ಹಬ್ಬ ಎಂದರೆ ಓಣಂ. ವಿವಿಧ ಬಣ್ಣದ ಹೂಗಳ ದಳಗಳನ್ನು ವಿನ್ಯಾಸಗೊಳಿಸಿ ರಚಿಸುವ ರಂಗೋಲಿ ಎಷ್ಟು ಮನೆ ಸೆಳೆಯುತ್ತದೆಯೋ ಅದಕ್ಕಿಂತ ಹೆಚ್ಚು ಓಣಂ ವಿಶೇಷ ಖಾದ್ಯಗಳು ನಾಲಿಗೆಯ ರುಚಿಯನ್ನು ತಣಿಸುತ್ತವೆ. ಈ ಬಾರಿ ಸೆಪ್ಟೆಂಬರ್ 1 ರಿಂದ 13ರವರೆಗೆ ಓಣಂ ಹಬ್ಬವನ್ನು ಆಚರಿಸುತ್ತಿದ್ದು, 11ರಂದು ಪ್ರಮುಖವಾದ ದಿನ ತಿರು ಓಣಂ ಅನ್ನು ಆಚರಿಸಲಾಗುತ್ತಿದೆ. ಓಣಂ ಹಬ್ಬದ ವಿಶೇಷವಾದ ಅಡಾ ಪಾಯಸಂ ತಯಾರಿಸುವ ಬಗೆಯನ್ನು ಇಂದು ನೀಡಲಾಗಿದೆ.

onam

ಓಣಂ ಹಬ್ಬದ ವಿಶೇಷವೆಂದರೆ ಸಿಹಿತಿಂಡಿಗಳು. ಭಾರತದ ಯಾವುದೇ ಹಬ್ಬದಲ್ಲಿ ಸಿಹಿತಿಂಡಿಗಳು ಅನಿವಾರ್ಯ ಅಂಗಾಗಳಾಗಿವೆ. ಆದರೆ ಓಣಂ ಹಬ್ಬದಲ್ಲಿ ಹಲವು ವಿಧದ ಸಿಹಿತಿಂಡಿಗಳನ್ನು ತಯಾರಿಸುವುದು ವಿಶೇಷವಾಗಿದೆ. ಅದರಲ್ಲಿ ಅಡಾ ಪಾಯಸಂ ಪ್ರಮುಖವಾಗಿದೆ.

ಅಡಾ ಪಾಯಸಂ ತಯಾರಿಸಲು ಹೆಚ್ಚಿನ ಶ್ರಮ ಪಡಬೇಕಾಗಿಲ್ಲ. ಮನೆಯಲ್ಲಿ ಲಭ್ಯವಿರುವ ಸುಲಭ ಸಾಮಾಗ್ರಿಗಳಿಂದ ತಯಾರಿಸಲಾಗುವ ಈ ಪಾಯಸ ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಲು ಸಾಧ್ಯ. ಈ ಸ್ವದಿಷ್ಟ ಪಾಯಸ ಮಾಡುವ ವಿಧಾನವನ್ನು ಈಗ ನೋಡೋಣ.

ಎಲೆ ಅಡಾ-ಓಣಂ ಸ್ಪೆಷಲ್

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಮುಕ್ಕಾಲು ಗಂಟೆ (ಹೆಚ್ಚಿನ ಸಮಯ ಕುದಿಯಲು ಬಳಸಿಕೊಳ್ಳುತ್ತದೆ)

ಅಗತ್ಯವಿರುವ ಸಾಮಾಗ್ರಿಗಳು:
*ಅಡಾ ಪಟ್ಟಿಗಳು - ಸುಮಾರು ನೂರೈವತ್ತು ಗ್ರಾಂ ನ ಒಂದು ಪ್ಯಾಕೆಟ್ (ಸಿದ್ಧ ರೂಪದಲ್ಲಿ ಸಿಗುತ್ತದೆ)
*ಹಾಲು - ಎರಡು ಲೀಟರ್
*ಗೋಡಂಬಿ -ಎಂಟರಿಂದ ಹತ್ತು
*ಒಣದ್ರಾಕ್ಷಿ-ಎಂಟರಿಂದ ಹತ್ತು
*ತುಪ್ಪ- ಒಂದು ಕಪ್
*ಕೇಸರಿ-ಒಂದು ಚಿಟಿಕೆ
*ಸಕ್ಕರೆ - ಎರಡು ಕಪ್ ಓಣಂ ವಿಶೇಷ: ನಾಲಿಗೆಯ ರುಚಿತಣಿಸುವ 20 ರೆಸಿಪಿ

ಮಾಡುವ ವಿಧಾನ
*ಒಂದು ಪಾತ್ರೆಯಲ್ಲಿ ಸುಮಾರು ಒಂದು ಲೀಟರ್ ನೀರನ್ನು ಕುದಿಸಿ. ಕುದಿ ಬಂದ ಬಳಿಕ ಒಲೆಯಿಂದ ಕೆಳಗಿಳಿಸಿ ಅಡಾಪಟ್ಟಿಗಳನ್ನು ಹಾಕಿ ಕೊಂಚ ಕಾಲ ನೆನೆಯಲು ಬಿಡಿ. ಬಳಿಕ ಈ ನೀರನ್ನು ಸೋಸಿ ನೆನೆದ ಅಡಾಪಟ್ಟಿಗಳನ್ನು ತಣ್ಣೀರಿನಲ್ಲಿ ಮುಳುಗಿಸಿ ಹೊರತೆಗೆಯಿರಿ.
*ಒಂದು ದಪ್ಪತಳದ ದೊಡ್ಡ ಪಾತ್ರೆಯಲ್ಲಿ ಎರಡು ಲೀಟರ್ ಹಾಲು ಹಾಕಿ ಕುದಿಸಿ. ಕುದಿ ಬಂದ ಬಳಿಕ ಉರಿಯನ್ನು ಚಿಕ್ಕದಾಗಿಸಿ ನೆನೆದ ಅಡಾಪಟ್ಟಿಗಳನ್ನು ಹಾಕಿ ಆಗಾಗ ತಿರುವುತ್ತಿರಿ. ಅಡಾ ಪಟ್ಟಿಗಳು ಪೂರ್ಣವಾಗಿ ಬೇಯುವವರೆಗೆ ತಿರುವಿರಿ.
*ಬಳಿಕ ಸಕ್ಕರೆ ಹಾಕಿ ತಿರುವುದನ್ನು ಮುಂದುವರೆಸಿ
*ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಒಂದು ದೊಡ್ಡ ಚಮಚ ಹಾಲನ್ನು ಬಿಸಿಮಾಡಿ ಕೇಸರಿಯನ್ನು ಹಾಕಿ ಮಿಶ್ರಣ ಮಾಡಿ. ಇದನ್ನು ಪಾಯಸಕ್ಕೆ ಹಾಕಿ ತಿರುವಿ.
*ಇನ್ನೊಂದು ಪಾತ್ರೆಯಲ್ಲಿ ಒಂದು ದೊಡ್ಡ ಚಮಚ ತುಪ್ಪ ಹಾಕಿ ಬಿಸಿಮಾಡಿ. ತುಪ್ಪ ಬಿಸಿಯಾಗುತ್ತಿದ್ದಂತೆಯೇ ಗೋಡಂಬಿ, ಒಣದ್ರಾಕ್ಷಿ ಹಾಕಿ ಹುರಿಯಿರಿ.
*ಗೋಡಂಬಿ ಕೆಂಪಗಾದ ಬಳಿಕ ಪಾಯಸಕ್ಕೆ ಹಾಕಿ ತಿರುವಿ.
*ಪಾಯಸ ಕೊಂಚ ದಪ್ಪಗಾದ ಬಳಿಕ ಉಳಿದ ತುಪ್ಪ ಹಾಕಿ ತಿರುವಿ. ತುಪ್ಪ ಕರಗುತ್ತಿದ್ದಂತೆಯೇ ಉರಿ ಆರಿಸಿ ಮುಚ್ಚಳ ಮುಚ್ಚಿ ಕೊಂಚ ಕಾಲ ಹಾಗೇ ಬಿಡಿ.
*ಬಿಸಿಬಿಸಿಯಿರುವಂತೆಯೇ ಅತಿಥಿಗಳಿಗೆ ಬಡಿಸಿ ಓಣಂ ಹಬ್ಬದ ಸಂತೋಷವನ್ನು ನೂರ್ಮಡಿಗೊಳಿಸಿ.

English summary

Onam 2019 Special: Delicious Ada Payasam

Onam is one of the most celebrated festival in Kerala. People in Kerala wait to celebrate onam with lot of joy and happiness. This year onam falls on 28th August. As we are just a week away from onam, we shall teach you the best recipes that is prepared for onam. So, let's take a look at how to prepare ada payasam for onam.
X
Desktop Bottom Promotion