For Quick Alerts
ALLOW NOTIFICATIONS  
For Daily Alerts

ಬೀಟ್‍ರೂಟ್ ಹಲ್ವಾ: ಒಮ್ಮೆ ಮಾಡಿ ಸವಿದು ನೋಡಿ

|

ಭಾರತದಲ್ಲಿರುವ ಅಸಂಖ್ಯಾತ ಸಂಸ್ಕೃತಿಗಳ ಕಾರಣ ವರ್ಷದ ಪ್ರತಿದಿನವೂ ಒಂದಲ್ಲಾ ಒಂದು ಹಬ್ಬ ಅಥವಾ ವಿಶೇಷವಿದ್ದೇ ಇರುತ್ತದೆ. ಅದರಲ್ಲೂ ಪ್ರಮುಖವಾದ ಹಬ್ಬಗಳು ಬಂತೆಂದರೆ ಇಡಿಯ ದೇಶದ ಚಿತ್ರಣವೇ ಬದಲಾಗುತ್ತದೆ. ಅದರಲ್ಲೂ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಮೆರೆಯಲು ಹಿಂದೂ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ. ಇನ್ನೇನು ಒಂದರ ಹಿಂದೊಂದು ಹಬ್ಬಗಳು ಸಾಲಾಗಿ ಬರುವುದರಿಂದ ಮನೆಯಿಂದ ದೂರವಿದ್ದವರು ತಮ್ಮ ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿ ಎಲ್ಲರೊಡನೆ ಬೆರೆತು ಹಬ್ಬ ಆಚರಿಸುವ ಕಾರಣ ಪ್ರತಿ ಮನೆಯಲ್ಲಿ ಸಂಭ್ರಮ ಮತ್ತು ಸಂತೋಷ ತುಂಬಿ ತುಳುಕುತ್ತದೆ.

ದೀಪಾವಳಿ, ದಸರಾ, ಲಕ್ಷೀಪೂಜೆ ಮತ್ತು ನವರಾತ್ರಿ ಹಬ್ಬಗಳು ಇವುಗಳಲ್ಲಿ ಪ್ರಮುಖವಾಗಿವೆ. ಆದರೆ ಒಂಬತ್ತು ದಿನಗಳ ಕಾಲ ಆಚರಿಸಲ್ಪಡುವ ನವರಾತ್ರಿ ಎಲ್ಲಾ ಹಬ್ಬಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ವಾಸ್ತವವಾಗಿ ನವರಾತ್ರಿಯನ್ನು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಮೊದಲನೆಯದು ಚೈತ್ರಮಾಸದಲ್ಲಿ (ಸುಮಾರು ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ) ಮತ್ತು ಎರಡನೆಯದಾಗಿ ಅಶ್ವಿನಿ ಮಾಸದಂದು (ಸೆಪ್ಟೆಂಬರ್ ಅಕ್ಟೋಬರ್ ತಿಂಗಳುಗಳಲ್ಲಿ) ಆಚರಿಸಲಾಗುತ್ತದೆ.

ವಸಂತ ಮಾಸದ ನವರಾತ್ರಿ ಈಗಲೇ ಆರಂಭವಾಗಿದ್ದು ಗೃಹಿಣಿಯರಿಗೆ ರುಚಿಯಾದ ಭಕ್ಷ್ಯಗಳನ್ನು ಸಿದ್ಧಪಡಿಸುವ ಕೆಲಸ ಆರಂಭವಾಗಿದೆ. ಅಡುಗೆಯ ಜಾಣ್ಮೆಯನ್ನು ಹಬ್ಬಕ್ಕೆ ಮನೆಗೆ ಬರುವ ಅತಿಥಿಗಳ ಎದುರು ಪ್ರದರ್ಶಿಸಿ ಅವರಲ್ಲಿ ತೃಪ್ತಿಯ ಮಂದಹಾಸವನ್ನು ಮೂಡಿಸುವುದು ನಿಮ್ಮ ಕೆಲಸವಾಗಿದೆ. ಹಬ್ಬದ ಸಂಭ್ರಮದಲ್ಲಿ ನೀವು ಪಾಲ್ಗೊಂಡು ಬಾಯಿ ಸಿಹಿ ಮಾಡುವ ಸರಳವಾದ ಸಿಹಿಯನ್ನು ನೀವು ತಡಕಾಡುತ್ತಿದ್ದೀರಿ ಎಂದಾದಲ್ಲಿ ಇಲ್ಲಿದೆ ವಿಶೇಷ ಖಾದ್ಯ ಬೀಟ್‌ರೂಟ್ ಹಲ್ವಾ. ಕೆಲವೇ ನಿಮಿಷಗಳಲ್ಲಿ ಸ್ವಾದಿಷ್ಟವಾಗಿ ತಯಾರಿಸಬಹುದಾದ ಈ ಹಲ್ವಾ ನಿಮಗೆ ಹೆಚ್ಚಿನ ತ್ರಾಸನ್ನು ಉಂಟು ಮಾಡುವುದಿಲ್ಲ,ಮುಂದೆ ಓದಿ..

Navratri special: Mouthwatering Beetroot halwa recipe

ತಯಾರಿಕೆಗೆ ತಗುಲುವ ಸಮಯ: 10 ನಿಮಿಷ

ಅಡುಗೆಗೆ ತಗುಲುವ ಸಮಯ: 30 ನಿಮಿಷ

ಬೀಟ್‍ರೂಟ್ ಹಲ್ವಾ ಮಾಡಲು ಬೇಕಾದ ಪದಾರ್ಥಗಳು:

*ಬೀಟ್‍ರೂಟ್ - 4

*ಹಾಲು - 2 ಕಪ್

*ಸಕ್ಕರೆ - 1/2 ಕಪ್ ಅಥವಾ ರುಚಿಗೆ ತಕ್ಕಷ್ಟು

*ಏಲಕ್ಕಿ ಪುಡಿ - 1 ಟೀ ಚಮಚ

*ತುಪ್ಪ - 3 ಟೇಬಲ್ ಚಮಚ

*ಗೋಡಂಬಿ - ಸ್ವಲ್ಪ

*ಒಣ ದ್ರಾಕ್ಷಿ - ಸ್ವಲ್ಪ

*ಬಾದಾಮಿ - ಒಂದು ಹಿಡಿ

*ಕೋವಾ - 100 ಗ್ರಾಂ (ಐಚ್ಛಿಕ)

*ಮಂದಗೊಳಿಸಿದ ಹಾಲು - ನಿಮ್ಮ ರುಚಿಗೆ ತಕ್ಕಷ್ಟು (ಐಚ್ಛಿಕ)

ತಯಾರಿಸುವ ವಿಧಾನ

1. ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಹ್ಯಾಂಡ್ ಗ್ರೇಟರಿನಿಂದ ಸಿಪ್ಪೆಯನ್ನು ಸುಲಿಯಿರಿ.

2. ತುಪ್ಪವನ್ನು ಆಳವಾದ ತಳವಿರುವ ಬಾಣಲೆಯಲ್ಲಿ ಹಾಕಿಕೊಂಡು ಕಾಯಿಸಿ.

3. ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ. ಇದರಿಂದ ಅವುಗಳು ಗರಿಗರಿಯಾಗುತ್ತವೆ.

4. ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ.

5. ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ.

6. ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ.

7. ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಗಾತ್ರದ ಹುರಿಯಲ್ಲಿ ಬೇಯಿಸಿ ಮತ್ತು ಆಗಾಗ ಚೆನ್ನಾಗಿ ಕಲೆಸಿ ಕೊಡಿ. 8. ಇದರ ರುಚಿ ಮತ್ತಷ್ಟು ಹೆಚ್ಚಾಗಲು ಮಂದಗೊಳಿಸಿದ ಹಾಲನ್ನು ಬೆರೆಸಿ.

9. ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗು ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸುತ್ತ ಇರಿ.

10. ಹುರಿಯನ್ನು ಆರಿಸಿ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ.

11. ಈಗ ಬೀಟ್‍ರೂಟ್ ಹಲ್ವಾ ಬಡಿಸಲು ಸಿದ್ಧವಾಗಿದೆ. ಆರೋಗ್ಯಕರವಾದ ಹಲ್ವಾವನ್ನು ನಿಮ್ಮ ಅತಿಥಿಗಳಿಗೆ ಬಡಿಸಿ

English summary

Navratri special: Mouthwatering Beetroot halwa recipe

Beetroot, which is also called chukandar in Hindi, is a dark red vegetable. The beetroot tastes sweet and is soft to eat. Like wise Beetroot Halwa is also a delicious Indian sweet made with beetroots.It is easy to prepare and tastes great.Even those who hate beetroots will love this delicious halwa.
Story first published: Saturday, October 17, 2015, 23:19 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more