For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಹಬ್ಬದ ಸ್ಪೆಷಲ್-'ತುಪ್ಪದ ಕೊಬ್ಬರಿ ಹೋಳಿಗೆ'

By Vani Naik
|

ಶ್ರಾವಣ ಮಾಸ ಬಂತೆಂದರೆ ಸಾಕು, ಹಬ್ಬಗಳ ಸಾಲೇ ಶುರು ಆಗುತ್ತದೆ. ಹಬ್ಬ ಹರಿ ದಿನಗಳಲ್ಲಿ ಪೂಜೆ ಪುಣಸ್ಕಾರದ ಜೊತೆ ವೈವಿದ್ಯಮಯ ಅಡುಗೆಗಳನ್ನು ಮಾಡುವುದು ಒಂದು ವಾಡಿಕೆಯಾಗಿದೆ. ಅದರಲ್ಲೂ ಸಿಹಿ ತಿನಿತಿನುಸುಗಳನ್ನು ಮಾಡುವುದು ಅತ್ಯಾವಶ್ಯಕ. ಯಾವುದನ್ನು ಮಾಡಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲದಲ್ಲಿ ಸಿಲುಕಿಕೊಂಡು ಬಿಡುತ್ತೇವೆ. ನೋಡು ನೋಡುತ್ತಿದ್ದಂತೆಯೇ ವರಮಹಾಲಕ್ಷ್ಮಿ ಹಬ್ಬವೂ ಬಂದೇ ಬಿಟ್ಟಿದೆ! ಎಲ್ಲರೂ ಪೂಜೆ ತಯಾರಿಕೆಯಲ್ಲಿ ಬ್ಯೂಸಿ ಆಗಿ ಬಿಟ್ಟಿದ್ದಾರೆ.

ಪ್ರತಿಯೊಬ್ಬರ ಮನೆಯಲ್ಲಿ ಹೆಂಗಸರು ಮಹಾಲಕ್ಷ್ಮಿ ಪೂಜೆಯನ್ನು ಅವರವರ ಶಕ್ತಾನುಸಾರ ವೈಭವವಾಗಿ ಮಾಡುತ್ತಾರೆ. ಇಂಥ ವಿಶೇಷವಾದ ದಿನದಂದು ಬಂಧು-ಬಳಗದವರು ಮನೆಗೆ ಬರುವುದು ಸರ್ವೇ ಸಾಮಾನ್ಯ. ಪೂಜೆಯ ಪ್ರಯುಕ್ತ ಹೂವು ಹಣ್ಣುಗಳನ್ನು ತಂದು ಲಕ್ಷ್ಮೀ ದೇವಿಗೆ ಅಲಂಕಾರ ಮಾಡಿ, ಹಣ್ಣು, ಕಾಯಿ, ಸಿಹಿತಿನಿಸುಗಳನ್ನು ನೈವೇದ್ಯವಾಗಿ ಸಮರ್ಪಣೆ ಮಾಡುತ್ತಾರೆ.

Mouthwatering Ghee coconut holige recipe

ಇಂತಹ ಶುಭ ಸಂದರ್ಭಗಳಲ್ಲಿ, ವಿಶೇಷವಾದ ಸಿಹಿತಿನಿಸನ್ನು ಮಾಡಿ ದೇವರಿಗೆ ಅರ್ಪಿಸಿ ಬಂಧುಬಳಗದವರಿಗೂ ಪ್ರಸಾದದ ರೂಪವಾಗಿ ಕೊಡುತ್ತಾರೆ. ಹಾಗಾಗಿ ನಾವು ಮಾಡುವ ಸಿಹಿ ತಿನಿಸು ಕೂಡ ವಿಶೇಷವಾಗಿರಬೇಕೆಂದು, ತುಪ್ಪದ ಕೊಬ್ಬರಿ ಹೋಳಿಗೆಯ ರೆಸಿಪಿಯ ಬಗ್ಗೆ ತಿಳಿದುಕೊಳ್ಳೋಣ. ಹಾಗಾದರೆ ತುಪ್ಪದ ಕೊಬ್ಬರಿ ಹೋಳಿಗೆಯನ್ನು ಮಾಡುವ ಬಗೆ ಹೇಗೆ, ಇದಕ್ಕೆ ಬೇಕಾಗುವ ಸಾಮಗ್ರಿಗಳೇನೇನು ಎಂಬುದನ್ನು ತಿಳಿಯೋಣ. ಶೇಂಗಾ ಹೋಳಿಗೆ ಅಥವಾ ಕಡಲೆಕಾಯಿ ಹೋಳಿಗೆ

ತುಪ್ಪದ ಕೊಬ್ಬರಿ ಹೋಳಿಗೆ
*ಸಿದ್ಧತಾ ಸಮಯ : 15 ನಿಮಿಷ
*ತಯಾರಿಸಲು ಬೇಕಾಗುವ ಅವಧಿ : 10 - 15 ನಿಮಿಷ

ತಯಾರಿಸಲು ಬೇಕಾಗುವ ಸಾಮಗ್ರಿಗಳು:
*ಮೈದಾ ಹಿಟ್ಟು : 2 ಕಪ್
*ಚಿರೋಟಿ ರವೆ : 1 ಕಪ್
*ಒಣಕೊಬ್ಬರಿ : 1 ಬಟ್ಟಲು
*ಸಕ್ಕರೆ : 1 ಬಟ್ಟಲು
*ಎಲಕ್ಕಿ ಪುಡಿ : ಸ್ವಲ್ಪ
*ತುಪ್ಪ : 1 ಬಟ್ಟಲು
*ಹಾಲು : 1 ಬಟ್ಟಲು

ಮಾಡುವ ವಿಧಾನ
*ಮೊದಲಿಗೆ ಒಂದು ಬೌಲ್ ನಲ್ಲಿ ಮೈದಾ ಹಿಟ್ಟು ಮತ್ತು ಚಿರೋಟಿ ರವೆಯನ್ನು ಹಾಕಿ ಮಿಕ್ಸ್ ಮಾಡಬೇಕು. ನಂತರ 3 ಚಮಚ ತುಪ್ಪವನ್ನು ಹಾಕಿ ಕೈಯಾಡಿಸಬೇಕು. ನಂತರ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು. ಕಣಕವನ್ನು ಮುಚ್ಚಿಟ್ಟು ಅರ್ಧ ಗಂಟೆಯ ಕಾಲ ನೆನೆಯಲು ಬಿಡಬೇಕು. ಇದಕ್ಕೆ ಹೂರಣ ಬೇಕಾಗುವುದರಿಂದ ಅದನ್ನು ತಯಾರಿಸುವ ಬಗೆಯನ್ನು ತಿಳಿಯೋಣ.
*ಹೆರದಿಟ್ಟುಕೊಂಡ ಒಣಕೊಬ್ಬರಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ, ಮೊದಲೇ ಪುಡಿ ಮಾಡಿಟ್ಟುಕೊಂಡ ಬೂರ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಬೇಕು. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಹಾಲನ್ನು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಬೇಕು.
*ಅರ್ಧ ಗಂಟೆ ನೆಂದ ಕಣಕವನ್ನು ತೆಗೆದುಕೊಂಡು ದುಂಡಾಕಾರದಲ್ಲಿ ಲಟ್ಟಿಸಿ, ಅದರ ಮಧ್ಯೆ ಹೂರಣದ ಉಂಡೆಗಳನ್ನು ಇಟ್ಟು ಮಡಿಸಿ, ಪುನಃ ಒಂದು ಬಾಳೆ ಎಲೆಯ ಮೇಲೆ ಅಥವಾ ಬಟರ್ ಪೇಪರ್ ಮೇಲೇ ತುಪ್ಪವನ್ನು ಕೈಗೆ ಸವರಿಕೊಂಡು ದುಂಡಾಕಾರವಾಗಿ ತಟ್ಟಬೇಕು. ನಂತರ ಕಾಯ್ದ ತವದ ಮೇಲೇ ಹಾಕಿ ಎರಡೂ ಬದಿಯಲ್ಲಿ ಬೇಯಿಸಬೇಕು. ಹೀಗೆ ಮಾಡಿದ್ದಲ್ಲಿ ಬಿಸಿಬಿಸಿಯಾದ, ರುಚಿರುಚಿಯಾದ ತುಪ್ಪದ ಕೊಬ್ಬರಿ ಹೋಳಿಗೆ ಸಿದ್ಧವಾಗುತ್ತದೆ.
*ತುಪ್ಪವನ್ನು ಇಷ್ಟ ಪಡುವವರು ತುಪ್ಪದಲ್ಲಿ ಡಿಪ್ ಮಾಡಿ ಕೂಡ ತಿನ್ನಬಹುದು. ಬಿಸಿಬಿಸಿಯಾಗಿ ಇದ್ದಾಗ ತಿಂದರೆ ಇದರ ರುಚಿ ಮತ್ತಷ್ಟು ಹೆಚ್ಚುತ್ತದೆ. ಒಣ ಕೊಬ್ಬರಿಯನ್ನು ಬಿಸಿ ಮಾಡಿ ಮಿಕ್ಸಿಗೆ ಹಾಕಿದ್ದಲ್ಲಿ ಎರಡರಿಂದ ಮೂರು ದಿನಗಳ ಕಾಲ ಇಟ್ಟು ತಿನ್ನಬಹುದು. ಮಕ್ಕಳಿಗೂ ಇಷ್ಟವಾಗುವ ಈ ರೆಸಿಪಿಯನ್ನು ನೀವು ಮಾಡಿ ಸವಿದು ಆನಂದಿಸಿ.

English summary

Mouthwatering Ghee coconut holige recipe

Try this new type of Ghee coconut holige recipe sweet dish on occasions like Pooja, naming ceremony, varamahalakshmi festival etc...have a look
Story first published: Thursday, August 11, 2016, 20:10 [IST]
X
Desktop Bottom Promotion