For Quick Alerts
ALLOW NOTIFICATIONS  
For Daily Alerts

ಸ್ಪೆಷೆಲ್ ಅಡುಗೆ-ಸೋರೆಕಾಯಿಯ ಖೀರ್

|

ಸೋರೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಸೂಪ್ ಮಾಡಿ ಕುಡಿದರೆ ದೇಹದಲ್ಲಿರುವ ಬೊಜ್ಜು ಕರಗುತ್ತದೆ. ಈ ಆರೋಗ್ಯಕರ ತರಕಾರಿಯಿಂದ ಅನೇಕ ಭಕ್ಷ್ಯಗಳನ್ನು ತಯಾರಿಸಬಹುದು. ಇಲ್ಲಿ ನಾವು ಇದರಿಂದ ತಯಾರಿಸುವ ಖೀರ್ ಬಗ್ಗೆ ಹೇಳಿದ್ದೇವೆ.

ಸೋರೆಕಾಯಿ ಖೀರ್ ಸವಿಯಲು ತುಂಬಾ ರುಚಿಕರವಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

Lauki Kheer: Sweet But Healthy Dessert

ಬೇಕಾಗುವ ಸಾಮಾಗ್ರಿಗಳು
1 ಕಪ್ ತುರಿದ ಸೋರೆಕಾಯಿ
ಹಾಲು 1 ಲೀಟರ್
ಸಕ್ಕರೆ 1 ಕಪ್
ತುಪ್ಪ 2 ಚಮಚ
ಪಿಸ್ತಾ ಅಥವಾ ಬದಾಮಿ 10
ಗೋಡಂಬಿ 10
ಏಲಕ್ಕಿ ಬೀಜ ಅರ್ಧ ಚಮಚ
ಬಾಳೆಹಣ್ಣು
ಎಸೆನ್ಸ್ (kewar water) (ಕೇವರ್ ಇಲ್ಲದಿದ್ದರೆ ನಿಮಗೆ ಇಷ್ಟವಿರುವ ಎಸೆನ್ಸ್ ಬಳಸಬಹುದು)

ತಯಾರಿಸುವ ವಿಧಾನ

* ಸೋರೆಕಾಯಿಯನ್ನು ಸಿಪ್ಪೆ ಸುಲಿದು ತುರಿಯಬೇಕು. ನಂತರ ಪ್ರೆಷರ್ ಕುಕ್ಕರ್ ನಲ್ಲಿ ಹಾಕಿ 2 ವಿಷಲ್ ಬರುವವರೆಗೆ ಬೇಯಿಸಬೇಕು.

* ನಂತರ ಒಂದು ಪಾತ್ರೆಗೆ ಹಾಕಿ ತಣ್ಣಗಾಗಲು ಇಡಬೇಕು. ನಂತರ ಅದನ್ನು ಸೌಟ್ ನಿಂದ ಕುಟ್ಟಿ ಪೇಸ್ಟ್ ರೀತಿ ಮಾಡಬಹುದು.

* ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ತುಪ್ಪ ಹಾಕಿ, ತುಪ್ಪ ಬಿಸಿಯಾದಾಗ ಏಲಕ್ಕಿ ಹಾಕಿ ಪಿಸ್ತಾ ಅಥವಾ ಬಾದಾಮಿ, ಗೋಡಂಬಿ ಹಾಕಿ ಹುರಿಯಿರಿ. ನಂತರ 2 ನಿಮಿಷ ಹುರಿದು ಬದಿಯಲ್ಲಿ ತೆಗೆದಿಡಿ.

* ಈಗ ಅದೇ ಬಾಣಲಿಗೆ ಬೇಯಿಸಿದ ಸೋರೆಕಾಯಿ ಹಾಕಿ ಕಡಿಮೆ ಉರಿಯಲ್ಲಿ 3-4 ನಿಮಿಷ ಹುರಿಯಿರಿ.

* ಈಗ ಪಾತ್ರೆಗೆ ಹಾಲನ್ನು ಹಾಕಿ ಹಾಲು ಅರ್ಧವಾಗುವವರೆಗೆ ಕಡಿಮೆ ಉರಿಯಲ್ಲಿ ಕುದಿಸಿ. ನಂತರ ನಂತರ ಸೋರೆಕಾಯಿ ಪೇಸ್ಟ್ ಅನ್ನು ಹಾಕಿ, ಸಕ್ಕರೆ ಹಾಕಿ ಸೌಟ್ ನಿಂದ ತಿರುಗಿಸಿ 3-4 ನಿಮಿಷ ಕುದಿಸಿ ಇದನ್ನು ಬಾದಾಮಿ, ಗೋಡಂಬಿ, ಬಾಳೆ ಹಣ್ಣಿನಿಂದ ಅಲಂಕರಿಸಿದರೆ ಸೋರೆಕಾಯಿಯ ಖೀರ್ ರೆಡಿ.

ಸಲಹೆ: ಇದಕ್ಕೆ ಸ್ವಲ್ಪ ಸಿಹಿ ಹಾಕಿದರೆ ಮಧುಮೇಹ ಇರುವವರೂ ಈ ಪಾಯಸವನ್ನು ಸವಿಯಬಹುದು.

English summary

Lauki Kheer: Sweet But Healthy Dessert | Variety Of Sweet Recipe | ಸೋರೆಕಾಯಿಯ ಖೀರ್ ರೆಸಿಪಿ | ಅನೇಕ ಬಗೆಯ ಸಿಹಿ ತಿಂಡಿಯ ರೆಸಿಪಿ

Lauki kheer is a healthy dessert because it cuts out the carbohydrate content. Bottle gourd is not fattening like rice and has lots of vital nutrients.
X
Desktop Bottom Promotion