For Quick Alerts
ALLOW NOTIFICATIONS  
For Daily Alerts

ಸಿಹಿ ಬಯಸುವ ನಾಲಗೆಗೆ ಹೆಸರುಬೇಳೆ ಪಾಯಸ!

By Super
|

ಶ್ರಾವಣ ಮಾಸದಲ್ಲಿ ಸಿಹಿಖಾದ್ಯಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಪ್ರತಿ ಮನೆಯಲ್ಲಿ ಈ ಮಾಸದಲ್ಲಿ ವಿವಿಧ ಸಿಹಿಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಅಲ್ಲದೇ ಅತಿಥಿಗಳು ಮತ್ತು ಮನೆಯವರಿಗೆ ಪ್ರತಿ ಬಾರಿ ಹೊಸ ಹೊಸ ಸಿಹಿಗಳನ್ನು ತಯಾರಿಸುವುದು ಮನೆಯವರಿಗೆ ಒಂದು ಕಠಿಣ ಸವಾಲಾಗಿದೆ.

ಆದರೆ ಹೆಚ್ಚಿನ ಸಿಹಿಗಳು ಒಂದೇ ಹೆಚ್ಚು ಸಮಯವನ್ನು ಕಬಳಿಸುವಂತಹದ್ದಾಗಿರುತ್ತವೆ ಅಥವಾ ಅನಾರೋಗ್ಯಕರವಾಗಿರುತ್ತದೆ. ಸುಲಭವೂ ಆರೋಗ್ಯಕರವೂ ಆದ ಸಿಹಿಯನ್ನು ಹುಡುಕುತ್ತಿರುವಿರಾದರೆ ಇದೋ ಇಲ್ಲಿದೆ ಹೆಸರುಬೇಳೆ ಪಾಯಸ! ಹೆಸರುಬೇಳೆ ಸುಲಭವಾಗಿ ಬೇಯುವ ಬೇಳೆಯಾದುದರಿಂದ ಮತ್ತು ಇದರಲ್ಲಿ ಹೇರಳವಾದ ಪೋಷಕಾಂಶಗಳಿರುವುದರಿಂದ ಮನೆಯವರ ಮನಗೆಲ್ಲುವುದು ಖಚಿತ. ಶರೀರದ ಉಷ್ಣತೆಯನ್ನು ಕಡಿಮೆಗೊಳಿಸಲು ಹೆಸರುಬೇಳೆ ಉತ್ತಮವಾದುದರಿಂದ ಬೇಸಿಗೆಯಲ್ಲಿಯೂ ತಯಾರಿಸಬಹುದಾದ ಸುಲಭ ಸಿಹಿಯಾಗಿದೆ.

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು ಕ್ಯಾರೆಟ್ ಹೆಸರು ಬೇಳೆಯ ಪಾಯಸ

Healthy Moong Dal Sweet Recipe

ಅಗತ್ಯವಿರುವ ಸಾಮಾಗ್ರಿಗಳು:
*ಹೆಸರು ಬೇಳೆ: ಎರಡು ಕಪ್
*ಕಾಯಿತುರಿ: ಒಂದು ಕಪ್
*ಬೆಲ್ಲ: ಒಂದು ಕಪ್
*ಏಲಕ್ಕಿ : ನಾಲ್ಕರಿಂದ ಐದು
*ಹಾಲು: ಒಂದು ಕಪ್
*ಒಣದ್ರಾಕ್ಷಿ: ಹತ್ತು
*ಗೋಡಂಬಿ : ಹತ್ತು (ಬಿಳಿಯದ್ದು)
*ತುಪ್ಪ: ಐದು ದೊಡ್ಡಚಮಚ

ವಿಧಾನ:
1) ಕುಕ್ಕರ್‌ನಲ್ಲಿ ತುಪ್ಪ ಹಾಕಿ ಚಿಕ್ಕ ಉರಿಯಲ್ಲಿ ಹೆಸರುಬೇಳೆಯನ್ನು ಹುರಿಯಿರಿ.
2) ಕೊಂಚ ಕೆಂಬಣ್ಣ ಬಂದ ಬಳಿಕ ಮೂರು ಕಪ್ ನೀರು ಸೇರಿಸಿ ಬಿಸಿಯಾದ ತಕ್ಷಣ ಮುಚ್ಚಳ ಮುಚ್ಚಿ ಮೂರು ಸೀಟಿ ಬರಿಸಿ. ಕೂಡಲೇ ಕುಕ್ಕರ್ ತಣಿಸಿ ಮುಚ್ಚಳ ತೆರೆಯಿರಿ. (ತೆರೆಯದಿದ್ದರೆ ಹೆಸರು ಬೇಳೆ ಹೆಚ್ಚು ನೀರಾಗಿಬಿಡುತ್ತದೆ)
3) ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್ ಬೆಲ್ಲವನ್ನು ಕೊಂಚ ನೀರಿನೊಂದಿಗೆ ಮಿಶ್ರಣ ಮಾಡಿ ಕರಗಿಸಿ
4) ಮಿಕ್ಸಿಯಲ್ಲಿ ಕಾಯಿತುರಿ, ಏಲಕ್ಕಿ ಮತ್ತು ನೀರು ಹಾಕಿ ಕಡೆಯಿರಿ.
5) ಈಗ ಕುಕ್ಕರ್‌ನಲ್ಲಿ ಬೆಲ್ಲದ ನೀರು ಮತ್ತು ಕಡೆದ ಕಾಯಿತುರಿ ಸೇರಿಸಿ ಮಿಶ್ರಣ ಮಾಡಿ
6) ಇನ್ನು ಹಾಲು ಸೇರಿಸಿ. (ಕೊಂಚ ಗಾಢವಾಗಬೇಕೆಂದಿದ್ದರೆ ಎರಡು ಕಪ್ ಸೇರಿಸಿ)
7) ಚಿಕ್ಕ ಪಾತ್ರೆಯೊಂದರಲ್ಲಿ ಕೊಂಚ ತುಪ್ಪ ಹಾಕಿ ಗೋಡಂಬಿ ಮತ್ತು ಗೋಡಂಬಿಯನ್ನು ಹುರಿಯಿರಿ.
8) ಇದನ್ನು ಪಾಯಸಕ್ಕೆ ಹಾಕಿ ತಿರುವಿ.
9) ಬಿಸಿಬಿಸಿಯಿರುವಂತೆಯೇ ಅತಿಥಿಗಳಿಗೆ ಬಡಿಸಿ.

English summary

Healthy Moong Dal Sweet Recipe

It's time to eat the sweet dishes. Yes, the festive time that is the shravana season that has begun. This is the time you indulge in eating different sweets. As the festive season begins we too shall welcome it with some sweet dishes. Today, we shall see how to prepare moong dal sweet. This is the healtiest sweet dish of moong dal as it is very good for health.
Story first published: Monday, August 17, 2015, 12:44 [IST]
X
Desktop Bottom Promotion