For Quick Alerts
ALLOW NOTIFICATIONS  
For Daily Alerts

ಮೊಟ್ಟೆರಹಿತ ಕೇಕ್: ಒಮ್ಮೆ ಮಾಡಿ, ಸವಿದು ನೋಡಿ

|

ಸಾಮಾನ್ಯವಾಗಿ ಸಸ್ಯಾಹಾರಿಗಳು ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಆಹಾರವನ್ನು ಅನುಮಾನದ ದೃಷ್ಟಿಯಿಂದಲೇ ನೋಡುತ್ತಾರೆ. ಅದರಲ್ಲಿಯೂ ಸಿಹಿತಿನಿಸುಗಳ ಬಗ್ಗೆ ಅನುಮಾನ ವಿಪರೀತವಾಗುತ್ತದೆ. ಏಕೆಂದರೆ ಹಲವರು ಮೊಟ್ಟೆಯನ್ನೂ ಸೇವಿಸುವುದಿಲ್ಲವಾದುದರಿಂದ ಎಷ್ಟೋ ಸಿಹಿಗಳಲ್ಲಿರುವ ಮೊಟ್ಟೆಯ ಕಾರಣ ಆ ಸಿಹಿತಿಂಡಿಯನ್ನೂ ತಿನ್ನುವಂತಿಲ್ಲ. ಹುಟ್ಟುಹಬ್ಬದ ಆಚರಣೆಯ ಕೇಕ್ ಸಹಾ ಅಷ್ಟೇ, ಇದರಲ್ಲಿರುವ ಕೆನೆ ಮತ್ತು ಮೊಟ್ಟೆಯ ಕಾರಣ ಇದು ಎಷ್ಟು ಸ್ವಾದಿಷ್ಟವಾಗುತ್ತದೆಯೋ ಅದೇ ಕಾರಣಕ್ಕೆ ಕೆಲವರು ಇದನ್ನು ಸೇವಿಸಲಾರರು.

ಹಾಗಾದರೆ ಇವರಿಗೆ ಕೇಕ್ ಸವಿಯುವ ಅವಕಾಶವೇ ಇಲ್ಲವೇ? ಇದೆ, ಮೊಟ್ಟೆ ಬಳಸದೇ ಅಷ್ಟೇ ರುಚಿಕರವಾದ ಮತ್ತು ಆರೋಗ್ಯಕರ ಕೇಕ್ ಒಂದನ್ನು ಮನೆಯಲ್ಲಿಯೇ ತಯಾರಿಸಬಹುದು. ಉಳಿದವರಿಗೆ ಮೊಟ್ಟೆಯ ಕೇಕ್ ತಿಂದೂ ತಿಂದೂ ರುಚಿಕೆಟ್ಟಿದ್ದರೆ ಬದಲಾವಣೆಗಾಗಿಯಾದರೂ ಈ ಮೊಟ್ಟೆರಹಿತ ಕೇಕ್ ಸವಿಯಬಹುದು. ಇದುವರೆಗೆ ಪ್ರಯತ್ನಿಸಿಲ್ಲದ ಚಾಕಲೇಟ್ ಕೇಕ್‌ನ ರುಚಿ ಸಹಾ ನೋಡಬಹುದು. ಬನ್ನಿ, ಈ ಕೇಕ್ ತಯಾರಿಸುವ ವಿಧಾನವನ್ನು ನೋಡೋಣ. ಮಾಡಲು ಸುಲಭ ಈ ಎಗ್ ಲೆಸ್ ಕೇಕ್ !

*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: -15 ನಿಮಿಷಗಳು
*ತಯಾರಿಕಾ ಸಮಯ: - 30 ನಿಮಿಷಗಳು

Easy Eggless Chocolate Cake Recipe

ಅಗತ್ಯವಿರುವ ಸಾಮಾಗ್ರಿಗಳು:
*ಘನೀಕರಿಸಿದ ಹಾಲು (Condensed milk) ಒಂದರಿಂದ ಎರಡು ಕಪ್
*ಸಕ್ಕರೆ : ಒಂದು ಕಪ್
*ಬೆಣ್ಣೆ: ಎರಡು ಕಪ್ (ಉಪ್ಪು ಇಲ್ಲದ್ದು (unsalted))
*ಕೋಕೋ ಪುಡಿ : ಒಂದು ಕಪ್
*ವೆನಿಲ್ಲಾ ಎನ್ಸೆನ್ಸ್ : ಎರಡರಿಂದ ಮೂರು ದೊಡ್ಡ ಚಮಚ
*ಬೇಕಿಂಗ್ ಪೌಡರ್: ಅರ್ಧ ದೊಡ್ಡ ಚಮಚ
*ಬೇಕಿಂಗ್ ಸೋಡಾ : ಅರ್ಧ ದೊಡ್ಡ ಚಮಚ
*ಉಪ್ಪು-ರುಚಿಗನುಸಾರ.
*ಮೈದಾಹಿಟ್ಟು : ಎರಡೂವರೆ ಕಪ್ ಬಾಳೆಹಣ್ಣಿನ ಚಾಕಲೇಟ್ ಚಿಪ್ಸ್ ಕೇಕ್ ರೆಸಿಪಿ

ವಿಧಾನ:
1) ಒಂದು ಪಾತ್ರೆಯಲ್ಲಿ ಒಂದು ಕಪ್ ಘನೀಕರಿಸಿದ ಹಾಲು, ಸಕ್ಕರೆ ಮತ್ತು ಮುಕ್ಕಾಲು ಕಪ್ ಬೆಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
2) ಹಿಟ್ಟು ಶೋಧಿಸುವ ಜರಡಿಯಲ್ಲಿ ನಾಲ್ಕರಿಂದ ಐದು ದೊಡ್ಡಚಮಚ ಕೋಕೋಪುಡಿ, ಅರ್ಧ ದೊಡ್ಡಚಮಚ ಬೇಕಿಂಗ್ ಪೌಡರ್, ಅರ್ಧ ದೊಡ್ಡ ಚಮಚ ಬೇಕಿಂಗ್ ಸೋಡಾ, ಸ್ವಲ್ಪ ಉಪ್ಪು ಮತ್ತು ಎರಡೂವರೆ ಕಪ್ ಮೈದಾ ಹಾಕಿ ಸಾಣಿಸಿ.
3) ಈ ಹಿಟ್ಟನ್ನು ಹಾಲಿರುವ ಪಾತ್ರೆಗೆ ಹಾಕಿ ಗಂಟುಗಳಿಲ್ಲದಂತೆ ಚೆನ್ನಾಗಿ ಕಲಸಿ.
4) ಇದಕ್ಕೆ ವೆನಿಲ್ಲಾ ಎಸೆನ್ಸ್ ಹಾಕಿ ಮತ್ತೊಮ್ಮೆ ಕಲಸಿ. ಇದು ತೀರಾ ಒಣಗಿರಬಾರದು, ಕೊಂಚ ಹಸಿಹಸಿಯಾಗಿಯೇ ಇರಬೇಕು. ಅಗತ್ಯಬಿದ್ದರೆ ಸ್ವಲ್ಪ, ಅಂದಾಜು ಅರ್ಧ ಕಪ್ ಹಾಲನ್ನು ಸೇರಿಸಬಹುದು.
5) ಈಗ ಪ್ರೆಶರ್ ಕುಕ್ಕರ್‌‪ನ ತಳಭಾಗದಲ್ಲಿ ಅರ್ಧ ಕಪ್ ಉಪ್ಪು ಹಾಕಿ ತಳವಷ್ಟೂ ಆವರಿಸುವಂತೆ ಹರಡಿ.
6) ಕೇಕ್ ತಯಾರಿಸುವ ಪಾತ್ರೆ (cake tin) ಯ ಒಳಭಾಗದಲ್ಲಿ ಪೂರ್ಣವಾಗಿ ಆವರಿಸುವಂತೆ ಉಳಿದ ಬೆಣ್ಣೆಯನ್ನು ಸವರಿ. ಈ ಪಾತ್ರೆಯ ತಳಭಾಗದಲ್ಲಿ ಬಟರ್ ಪೇಪರ್ ಒಂದನ್ನು ಹರಡಿ. (ಈ ಪಾತ್ರೆ ಕುಕ್ಕರಿನ ಒಳಗೆ ಸುಲಭವಾಗಿ ಕುಳಿತುಕೊಳ್ಳುತ್ತದೆ ಎಂದು ಮೊದಲೇ ಖಾತರಿಪಡಿಸಿಕೊಳ್ಳಿ)
7) ಈಗ ಹಸಿಯಾಗಿರುವ ಮಿಶ್ರಣವನ್ನು ನಿಧಾನವಾಗಿ ಕೇಕ್ ಪಾತ್ರೆಯ ನಡುಭಾಗದಲ್ಲಿ ಸುರಿದು ತುಂಬುವಂತೆ ಮಾಡಿ. ಮಿಶ್ರಣ ಪೇಪರಿನ ತಳಭಾಗಕ್ಕೆ ಹರಿಯದಂತೆ ಜಾಗ್ರತೆ ವಹಿಸಿ. ಈ ಪಾತ್ರೆಯನ್ನು ಕುಕ್ಕರಿನ ಒಳಗೆ ಇರಿಸಿ.
8) ಈಗ ಫ್ರೆಶರ್ ಕುಕ್ಕರನ್ನು ಚಿಕ್ಕ ಉರಿಯಲ್ಲಿ ಅರ್ಧ ಗಂಟೆ ಬೇಯಿಸಿ. ಕುಕ್ಕರಿನ ಮೇಲಿನ ಸೀಟಿ (pressure regulator or vent weight) ಸರ್ವಥಾ ಹಾಕಕೂಡದು! (ಇದು ಅತ್ಯಂತ ಅಪಾಯಕಾರಿ)
9) ಸುಮಾರು ಅರ್ಧ ಗಂಟೆಯ ಬಳಿಕ ಉರಿ ನಂದಿಸಿ ಇನ್ನೂ ಹತ್ತು ನಿಮಿಷ ಹಾಗೇ ಬಿಡಿ.
10) ಬಳಿಕ ಮುಚ್ಚಳ ತೆರೆದು ಬಿಸಿಯಿರುವಂತೆಯೇ ಅತಿಥಿಗಳಿಗೆ ಬಡಿಸಿ.
ಈ ಮೊಟ್ಟೆರಹಿರ ಕೇಕ್ ನಿಮಗಿಷ್ಟವಾದರೆ ನಮಗೆ ಖಂಡಿತಾ ತಿಳಿಸಿ. ಇತರರಿಗೆ ಉಪಯೋಗವಾಗಬಹುದಾದ ಮಾಹಿತಿಯಿದ್ದರೆ ಸಹಾ ಹಂಚಿಕೊಳ್ಳಿ.

English summary

Easy Eggless Chocolate Cake Recipe

Want to try something different? Something that is yummy and chocolatey? Then, today's recipe is just for you. We shall prepare eggless chocolate cake today. Hmmm, this cake just as the name says- irresistible. For all those who don't eat egg, you can surely try and make this chocolate eggless cake. This is a very easy recipe, and your family and your friends will love to eat it. So why wait, let's start cooking eggless chocolate cake.
Story first published: Tuesday, September 29, 2015, 13:04 [IST]
X
Desktop Bottom Promotion