For Quick Alerts
ALLOW NOTIFICATIONS  
For Daily Alerts

ಯುಗಾದಿ ಗಮ್ಮತ್ತಿಗೆ ಬಿಸಿ ಬಿಸಿ ಹೂರಣದ ಹೋಳಿಗೆ

By Deepak M
|

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ, ಬೇಂದ್ರೆಯವರ ಕವಿವಾಣಿ ಯುಗಾದಿಯ ರಾಷ್ಟ್ರಗೀತೆ ನಮ್ಮ ಕನ್ನಡಿಗರ ಪಾಲಿಗೆ!. ಯುಗಾದಿ ಎಂದರೆ ಸಡಗರ, ಸಂಭ್ರಮ, ಸವಿ ಸವಿ, ಸಿಹಿ ಸಿಹಿ, ಸ್ವಲ್ಪ ಬೇವಿನ ಕಹಿ ಎಲ್ಲವು ಸಹ ಸೇರಿರುತ್ತದೆ. ಹೊಸ ವರ್ಷಕ್ಕೆ ಮುನ್ನುಡಿ ಬರೆಯುವ ಈ ಯುಗಾದಿಯ ಸಂಭ್ರಮಕ್ಕೆ ಒಬ್ಬಟ್ಟು ಅಥವಾ ಹೋಳಿಗೆಗಳ ಸವಿ ಇಲ್ಲದಿದ್ದರೆ ಅಸಲಿಗೆ ಯುಗಾದಿ ಆಚರಿಸಿದ ಸಂಭ್ರಮವೇ ಇರುವುದಿಲ್ಲ. ಯುಗಾದಿಗೆ ಬೇವು ಬೆಲ್ಲ ಎಷ್ಟು ಮುಖ್ಯವೋ ಒಬ್ಬಟ್ಟು ಸಹ ಅಷ್ಟೇ ಮುಖ್ಯ.

ಯುಗಾದಿಯ ಅವಿಭಾಜ್ಯ ಅಂಗ ಈ ಹೋಳಿಗೆಗಳು. ಇದನ್ನು ಪುರನ್ ಪುರಿ, ಒಬ್ಬಟ್ಟು, ಹೋಳಿಗೆ, ಬೊಬ್ಬಟ್ಟು ಎಂಬಿತ್ಯಾದಿ ಹೆಸರುಗಳಿಂದ ಸಹ ಕರೆಯುತ್ತಾರೆ. ನಿಮ್ಮ ಯುಗಾದಿಯ ಸಂಭ್ರಮ ಮತ್ತಷ್ಟು ಇಮ್ಮಡಿಗೊಳ್ಳಲು, ನಿಮ್ಮ ಬಾಯಿ ಇನ್ನಷ್ಟು ಸಿಹಿ ಮಾಡಲು ನಾವು ನಿಮಗೆ ಇಂದು ಭಾರತೀಯ ಸಾಂಪ್ರದಾಯಿಕ ಸಿಹಿ ಖಾದ್ಯಗಳಲ್ಲಿ ಒಂದಾದ ಹೋಳಿಗೆಯ ಕುರಿತಾಗಿ ನಿಮಗೆ ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ದೇಶದ ಎಲ್ಲೆಡೆ ಈ ಹೋಳಿಗೆಗೆ ಬೆಲ್ಲ, ಕಡಲೆ ಬೇಳೆ ಇಲ್ಲವೇ ತೊಗರಿ ಬೇಳೆಯಿಂದ ಹೂರಣವನ್ನು ತಯಾರಿಸಿಕೊಳ್ಳುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ತುರಿಯನ್ನು ಬೆಲ್ಲದೊಂದಿಗೆ ಸೇರಿಸಿಕೊಂಡು, ಹೂರಣವನ್ನು ತಯಾರಿಸುತ್ತಾರೆ. ಬನ್ನಿ ಈ ಕಾಯಿ ಹೋಳಿಗೆಯನ್ನು ಹೇಗೆ ತಯಾರಿಸುವುದು ಎಂದು ನಾವು ಸಹ ತಿಳಿದುಕೊಳ್ಳೋಣ..... ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು

10 ಕಾಯಿ ಹೋಳಿಗೆಗಳನ್ನು ತಯಾರಿಸಲು ರೆಸಿಪಿ
*ತಯಾರಿಕೆಗೆ ತಗುಲುವ ಸಮಯ: 60 ನಿಮಿಷಗಳು
*ಅಡುಗೆಗೆ ತಗುಲುವ ಸಮಯ- 5 ನಿಮಿಷಗಳು

ಪದಾರ್ಥಗಳು
1. ಹಿಟ್ಟು, ಸಾಮನ್ಯವಾಗಿ ಮೈದಾ- 2 ಕಪ್‌ಗಳು
2. ಸೆಮೊಲಿನಾ- 2 ಟೀ.ಚಮಚ
3. ಅರಿಶಿನ ಪುಡಿ- ಒಂದು ಚಿಟಿಕೆ
4. ಬೆಲ್ಲ- 1 ½ ಕಪ್‌
5. ತೆಂಗಿನಕಾಯಿ- 2 ಕಪ್‌ (ತುರಿದಂತಹುದು)
6. ಏಲಕ್ಕಿ- 2-3 (ಪುಡಿ ಮಾಡಲಾದುದು)
7. ತುಪ್ಪ- 2 ಟೀ.ಚಮಚ
8. ನೀರು- 1 ಕಪ್‌

ವಿಧಾನ
1. ಒಂದು ಬಟ್ಟಲಿನಲ್ಲಿ, ಮೈದಾ ಅಥವಾ ನೀವು ಆರಿಸಿಕೊಂಡ ಹಿಟ್ಟನ್ನು ಹಾಕಿಕೊಳ್ಳಿ, ಇದಕ್ಕೆ ಸೆಮೊಲಿನಾ, ಅರಿಶಿನ ಪುಡಿ ಬೆರೆಸಿಕೊಂಡು ಸ್ವಲ್ಪ ನೀರು ಹಾಕಿ ಮೆತ್ತಗೆ ಆಗುವಂತೆ ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟು ಮೆತ್ತಗೆ ಆದ ಮೇಲೆ ಅದನ್ನು 30 ನಿಮಿಷ ಪಕ್ಕದಲ್ಲಿ ಇಡಿ.
2. ಇದೇ ಸಮಯದಲ್ಲಿ ½ ಕಪ್ ನೀರನ್ನು ಆಳ ತಳವಿರುವ ಬಾಣಲೆಯಲ್ಲಿ ಹಾಕಿಕೊಂಡು, ಅದಕ್ಕೆ ಬೆಲ್ಲವನ್ನು ಬೆರೆಸಿ. ಇದನ್ನು ಆಗಾಗ ಕಲೆಸಿಕೊಡಿ, ಇಲ್ಲವಾದರೆ ತಳ ಅಂಟಿಕೊಳ್ಳುತ್ತದೆ.
3. ಈಗ ಈ ಪಾತ್ರೆಗೆ ತುರಿದ ತೆಂಗಿನಕಾಯಿಯನ್ನು ಹಾಕಿ ಮತ್ತು ಚೆನ್ನಾಗಿ ಬೆರೆಸಿ. ಬೆಲ್ಲವು ಗಟ್ಟಿಯಾಗಿ ಪಾಕದಂತೆ ಕಾಣುವವರೆಗೆ ಇದನ್ನು ಬೇಯಿಸಿ.
4. ಆಮೇಲೆ ಉರಿ ಆರಿಸಿ ಬಾಣಲೆ ತಣ್ಣಗಾಗಲು ಬಿಡಿ.
5. ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ, ಅದನ್ನು ಸ್ವಲ್ಪ ಲಟ್ಟಿಸಿ, ಅದರ ಒಳಗೆ ಈ ಬೆಲ್ಲ ಮತ್ತು ಕಾಯಿತುರಿಯ ಹೂರಣವನ್ನು ಇರಿಸಿ. ಹಿಟ್ಟನ್ನು ಸರಿಯಾಗಿ ಮುಚ್ಚಿ ಉಡೆಯಂತೆ ಇರಲಿ.
6. ಹೆಂಚು ಅಥವಾ ತವಾವನ್ನು ಬಿಸಿಯಾಗಲು ಇಡಿ. ಒಂದು ಪ್ಲಾಸ್ಟಿಕ್ ಕವರ್‌ಗೆ ಸ್ವಲ್ಪ ಎಣ್ಣೆಯನ್ನು ಸವರಿಕೊಂಡು, ಆ ಕವರಿನಿಂದ ಉಂಡೆಯನ್ನು ಮೆತ್ತಗೆ ಉಜ್ಜಿ, ಈಗ ಅದು ಚಪಾತಿಯ ಆಕಾರಕ್ಕೆ ಬರುತ್ತದೆ.
7. ಬಿಸಿಯಾಗಿರುವ ತವಾದ ಮೇಲೆ ಸ್ವಲ್ಪ ತುಪ್ಪವನ್ನು ಸುರಿದು, ಈ ಹೋಳಿಗೆಯನ್ನು ಅದರ ಮೇಲೆ ಹಾಕಿ ಬೇಯಿಸಿ. ಚೆನ್ನಾಗಿ ಬೆಂದಿದೆ ಎಂದ ಮೇಲೆ ಅಂದರೆ ಹೋಳಿಗೆಯ ಮೇಲೆ ಅಲ್ಲಲ್ಲಿ ಕಂದು ಬಣ್ಣದ ಬೆಂದ ಕಲೆಗಳು ಕಂಡ ಮೇಲೆ ಇಳಿಸಿ, ತುಪ್ಪದ ಜೊತೆಗೆ ಬಿಸಿ ಬಿಸಿ ಸೇವಿಸಲು ನೀಡಿ. ಯುಗಾದಿಯ ಸಿಹಿ ಕಾಯಿ ಹೋಳಿಗೆ ನಿಮಗೂ ರುಚಿಯೆನಿಸಿತೆ.

English summary

Coconut Puran Poli: Ugadi special Sweet Recipe

Puran poli is a traditional Indian sweet dish which is prepared during the Ugadi festival. Although it is a special Maharashtrian sweet dish, the thin stuffed sweet is also prepared on the occasion of Ugadi. It is also known as puran puri or bobbattu or obbattu. This authentic taste of the coconut puran poli makes it a tasty sweet dish for Ugadi. Take a look at the coconut puran poli recipe.
X
Desktop Bottom Promotion