For Quick Alerts
ALLOW NOTIFICATIONS  
For Daily Alerts

ಗರಿಗರಿಯಾದ ಬಾದಾಮಿ-ಚೀಸ್ ಬಿಸ್ಕತ್

By Arshad
|

ಜಗತ್ತಿನ ಅತ್ಯಂತ ಸಂಭ್ರಮದ ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಒಂದು ವಾರವಷ್ಟೇ ಉಳಿದಿದೆ. ಈ ವಿಶೇಷ ಸಂದರ್ಭವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳದಿದ್ದರೆ ಹೇಗೆ? ಸ್ವಾದಿಷ್ಟ ಕೇಕ್ ಮತ್ತು ಬಿಸ್ಕತ್ ಗಳ ವಿನಃ ಹಬ್ಬದ ಪೂರ್ಣ ಸ್ವಾದವನ್ನು ಆಸ್ವಾದಿಸಲಾಗದು. ಆದರೆ ಹಬ್ಬದ ಹೊತ್ತಿನಲ್ಲಿ ಬಿಸ್ಕತ್ ತಯಾರಿಸುತ್ತಾ ಸಮಯ ವ್ಯರ್ಥ ಮಾಡಿದರೆ ಹಬ್ಬದ ಸವಿಯನ್ನು ಕಳೆದುಕೊಂಡಂತಾಗುತ್ತದೆ ಅಲ್ಲವೇ. ಆದರೆ ಇಂದು ನೀಡಿರುವ ಬಾದಾಮಿ ಚೀಸ್ ಬಿಸ್ಕತ್ ರೆಸಿಪಿ ನಿಮ್ಮ ಹೆಚ್ಚಿನ ಸಮಯವನ್ನು ಬಳಸದೇ ರುಚಿಕರ ಮತ್ತು ಗರಿಮುರಿಯಾಗಿ ನಿಮ್ಮ ಅತಿಥಿಗಳ ಜಿಹ್ವಾಚಾಪಲ್ಯವನ್ನು ತಣಿಸಲಿವೆ. ಅಷ್ಟೇ ಅಲ್ಲ, ಕೊಂಚ ಬದಲಾವಣೆಗಳೊಂದಿಗೆ ಹೆಚ್ಚಿನ ಶ್ರಮವಿಲ್ಲದೇ ವಿವಿಧ ಪ್ರಕಾರದ ಬಿಸ್ಕತ್ತುಗಳನ್ನೂ ನೀಡಲು ಸಾಧ್ಯ. ರುಚಿರುಚಿಯಾದ ಗರಿಗರಿಯಾದ ಮೈದಾ ಬಿಸ್ಕತ್

ಹೆಸರೇ ಸೂಚಿಸುವಂತೆ ಈ ಬಿಸ್ಕತ್ತಿನಲ್ಲಿ ಬಾದಾಮಿ ಹಾಗೂ ಚೀಸ್ ಗಳಿರುವುದರಿಂದ ಸಾಂಪ್ರಾದಾಯಿಕ ಬಿಸ್ಕತ್ತಿಗೆ ವಿಶಿಷ್ಟ ರುಚಿ ಮತ್ತು ಅನುಭವವನ್ನು ನೀಡಲಿದೆ. ಇದು ಅತ್ಯಂತ ಆರೋಗ್ಯಕರ, ರುಚಿಕರ ಹಾಗೂ ಗರಿಗರಿಯಾಗಿದ್ದು ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಮೆಚ್ಚುವಂತಹದ್ದಾಗಿದೆ. ಈ ಕ್ರಿಸ್ಮಸ್ ಹಬ್ಬದ ಸಂಭ್ರವಮನ್ನು ಈ ಬಿಸ್ಕತ್ ಖಂಡಿತಾ ಹೆಚ್ಚಿಸಲಿದೆ. ಬನ್ನಿ, ಈ ಬಿಸ್ಕತ್ ತಯಾರಿಸುವ ಬಗೆಯನ್ನು ಕಲಿಯೋಣ:

Christmas Special: Almond Cheese Biscuit Recipe

*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು.

ಅಗತ್ಯವಿರುವ ಸಾಮಾಗ್ರಿಗಳು
*ಗೋಧಿ ಹಿಟ್ಟು: ಎರಡು ಕಪ್
*ಚೀಸ್ (ತುರಿದದ್ದು) ಒಂದು ಕಪ್
*ಬಾದಾಮಿ: ಒಂದು ಕಪ್ (ಚಿಕ್ಕದಾಗಿ ತುಂಡರಿಸಿದ್ದು)
*ಸಕ್ಕರೆ ಪುಡಿ : ಕಾಲು ಕಪ್
*ಅಡುಗೆ ಸೋಡಾ: ಕಾಲು ಚಿಕ್ಕ ಚಮಚ
*ಬೆಣ್ಣೆ: ಅರ್ಧ ಕಪ್ (ಕರಗಿಸಿದ್ದು)
*ಹಾಲು: ಅರ್ಧ ಕಪ್

ವಿಧಾನ:
1) ಒಂದು ಪಾತ್ರೆಯಲ್ಲಿ ಗೋಧಿಹಿಟ್ಟು, ಬೆಣ್ಣೆ, ಸಕ್ಕರೆ ಮತ್ತು ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
2) ಇದಕ್ಕೆ ತುರಿದ ಚೀಸ್ ಮತ್ತು ಬಾದಾಮಿ ಹಾಕಿ ಎಲ್ಲವೂ ಚೆನ್ನಾಗಿ ಮಿಳಿತಗೊಳ್ಳುವಂತೆ ನಾದಿ
3) ಅಗತ್ಯವಿರುವಷ್ಟು ಹಾಲು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರಣಗೊಳಿಸಿ. ಹಿಟ್ಟು ಗಟ್ಟಿಯಾಗದಷ್ಟು, ಮತ್ತು ತೀರಾ ತೆಳುವಾಗದಷ್ಟು ಮಾತ್ರ ಹಾಲು ಬಳಸಿ.
4) ಈ ಹಿಟ್ಟನ್ನು ಸುಮಾರು ಅರ್ಧದಿಂದ ಒಂದಿಂಚು ದಪ್ಪವಿರುವಂತೆ ಲಟ್ಟಿಸಿ ಬಿಸ್ಕತ್ ಆಕಾರದಲ್ಲಿ ಕತ್ತರಿಸುವ ಉಪಕರಣದಿಂದ ಬಿಸ್ಕತ್ತಿನ ಬಿಲ್ಲೆಗಳನ್ನಾಗಿಸಿ.
5) ಈ ಬಿಲ್ಲೆಗಳನ್ನು ಬಿಸ್ಕತ್ ಬೇಯಿಸುವ ತಟ್ಟೆಯಲ್ಲಿ ಅಗಲವಾಗಿ ಹರಡಿ (ಬೇಕಿಂಗ್ ಟ್ರೇ)
6) ಈ ತಟ್ಟೆಯನ್ನು ಮೊದಲೇ ಬಿಸಿಮಾಡಿಟ್ಟಿದ್ದ ಅವನ್ ನಲ್ಲಿ 180 ಡಿಗ್ರಿ ತಾಪಮಾನದಲ್ಲಿ ಸುಮಾರು ಹದಿನೈದರಿಂದ ಹದಿನೆಂಟು ನಿಮಿಷ ಬೇಯಿಸಿ.
7) ಬಳಿಕ ತಟ್ಟೆಯನ್ನು ಹೊರತೆಗೆದು ಬಿಸ್ಕತ್ತುಗಳನ್ನು ಅದರಲ್ಲಿಯೇ ತಣಿಯಲು ಬಿಡಿ.
8) ಕೊಂಚ ಬಿಸಿಯಿರುವಂತೆಯೇ ಅತಿಥಿಗಳಿಗೆ ಬಡಿಸಿ ಹಬ್ಬದ ಸಂಭ್ರವನ್ನು ಹೆಚ್ಚಿಸಿ.
ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಈ ಬಿಸ್ಕತ್ ಹೇಗೆನಿಸಿತು, ಅತಿಥಿಗಳು, ಮಕ್ಕಳು ಇಷ್ಟಪಟ್ಟರೇ ಎಂದು ನಮಗೆ ತಿಳಿಸಿ.

English summary

Christmas Special: Almond Cheese Biscuit Recipe

There is just a week more to go for the most colouful and joyous festival. Yes that's Chritmas!! So, on this special occasion, we are sharing our secret on how to prepare yummy cream biscuits. Well, that sounds just wonderful! Biscuits are very easy to prepare and take less time in preparing as well. Varieties of biscuit recipes can be prepared.
X
Desktop Bottom Promotion