For Quick Alerts
ALLOW NOTIFICATIONS  
For Daily Alerts

'ಚಾಕೊಲೇಟ್ ಬರ್ಫಿ' ಬಾಯಿ ಸಿಹಿ ಮಾಡಿಕೊಳ್ಳಿ!

By Jaya subramanya
|

ದೀಪಾವಳಿ ಹಬ್ಬವು ನಾಡಿನೆಲ್ಲೆಡೆ ಸಂಭ್ರಮವನ್ನು ತರುತ್ತಿದೆ. ದೀಪಗಳ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಾಡಿನ ಜನತೆ ಖುಷಿಯಿಂದ ಕಾಯುತ್ತಿರುತ್ತಾರೆ. ಹಬ್ಬದಲ್ಲಿ ಸಿಹಿ ತಯಾರಿಗೆ ಕಡ್ಡಾಯವಾಗಿ ಆಗಲೇಬೇಕು ತಾನೇ? ಅದೂ ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆ ಅಂತೆಯೇ ಅತಿಥಿಗಳು ಮನೆಗೆ ಬರುವವರಿದ್ದಾರೆ ಎಂದಾದಲ್ಲಿ ಸಿಹಿಯನ್ನು ತಯಾರಿಸದೇ ಇರಲು ಸಾಧ್ಯವೇ ಇಲ್ಲ.

chocolate barfi recipe

ಹಾಗಿದ್ದರೆ ನಿಮಗೆ ಥಟ್ಟನೆ ಸಿದ್ಧಪಡಿಸಲು ಸಹಕಾರಿಯಾಗಿರುವ ಸಿಹಿ ರೆಸಿಪಿಯನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ. ಅದೂ ಬಾಯಲ್ಲಿ ನೀರೂರಿಸುವ ಮಕ್ಕಳಾದಿಯಾಗಿ ದೊಡ್ಡವರಿಗೂ ಇಷ್ಟವಾಗುವ ಚಾಕೊಲೇಟ್ ಬರ್ಫಿಯಾಗಿದೆ. ಈ ದೀಪಾವಳಿಗಾಗಿ ವಿಶೇಷವಾಗಿ ನೀವು ತಯಾರಿಸಲೇಬೇಕಾಗಿರುವ ಚಾಕೊಲೇಟ್ ಬರ್ಫಿ ತಯಾರಿ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ದೀಪಾವಳಿ ಹಬ್ಬಕ್ಕಾಗಿ ದಿಢೀರ್ ತಿನಿಸು-ಸಿಹಿ ಶಂಕರಪೋಳಿ

ಪ್ರಮಾಣ - 4
*ಸಿದ್ಧತಾ ಸಮಯ - 10 ನಿಮಿಷ
*ಅಡುಗೆಗೆ ಬೇಕಾದ ಸಮಯ - 30 ನಿಮಿಷಗಳು

ಸಾಮಾಗ್ರಿಗಳು
*1 ಉಪ್ಪಿಲ್ಲದ ಬೆಣ್ಣೆ - 55 ಗ್ರಾಮ್‎ಗಳು
*2 ಹುಡಿ ಮಾಡಿದ ಸಕ್ಕರೆ - 25 ಗ್ರಾಮ್‎ಗಳು
*3 ಹುಡಿಮಾಡಿದ ಬಿಸ್ಕತ್ತು - 15
*4 ಉಪ್ಪು - ಚಿಟಿಕೆಯಷ್ಟು
*5 ಮಂದಗೊಳಿಸಿದ ಹಾಲು - 125 ಎಮ್ಎಲ್
*6 ತುರಿದ ಕೊಬ್ಬರಿ - 40 ಗ್ರಾಮ್‎ಗಳು
*7 ಮಿಶ್ರಮಾಡಿದ ನಟ್ಸ್ - 50 ಗ್ರಾಮ್‎ಗಳು ಜಿಲೇಬಿ ರೆಸಿಪಿ: ದೀಪಾವಳಿ ರೆಸಿಪಿ

ಮಾಡುವ ವಿಧಾನ
*ಬರ್ಫಿಯನ್ನು ಸಿದ್ಧಪಡಿಸುವ ವಿಧಾನಕ್ಕೂ ಮುನ್ನ ನೀವು ಒಂದು ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಹುಡಿಮಾಡಿದ ಸಕ್ಕರೆ, ಬಿಸ್ಕತ್ತು ಮತ್ತು ಉಪ್ಪನ್ನು ಜೊತೆಯಾಗಿ ಸೇರಿಸಿ. ನಂತರ ಪಕ್ಕದಲ್ಲಿಡಿ.


*ಸಾಮಾಗ್ರಿಗಳನ್ನು ಮಿಶ್ರ ಮಾಡುವಾಗ ಅವುಗಳನ್ನು 180 ಡಿಗ್ರಿ ಉಷ್ಣತೆಯಲ್ಲಿ ಬಿಸಿ ಮಾಡಲು ಮರೆಯದಿರಿ
*ಈಗ ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಕರಗಿಸಿದ ಬೆಣ್ಣೆಯನ್ನು ಸೇರಿಸಿ
*ಇದಕ್ಕೆ ಬಿಸ್ಕತ್ತು ಮಿಶ್ರಣವನ್ನು ಸೇರಿಸಿ. ಈಗ ಹುಡಿಮಾಡಿದ ಬಿಸ್ಕತ್ತಿಗೆ ಬಿಸಿ ಮಾಡಿದ ಬೆಣ್ಣೆಯನ್ನು ಸೇರಿಸಿ
*ಬೇಕಿಂಗ್ ಟ್ರೇಯನ್ನು ತೆಗೆದುಕೊಳ್ಳಿ ಮತ್ತು ಮಿಶ್ರಣವನ್ನು ಇದಕ್ಕೆ ಹಾಕಿ. ನೆನಪಿಡಿ ಬೇಕಿಂಗ್ ಟ್ರೇಯನ್ನು ಗ್ರೀಸ್ ಮಾಡದಿರಿ ಸಟ್ಟುಗದ ಸಹಾಯದಿಂದ ಅದನ್ನು ಚಪ್ಪಟೆ ಮಾಡಿಕೊಳ್ಳಿ. ತೆಂಗಿನ ತುರಿಯನ್ನು ತೆಗೆದುಕೊಂಡು ಅದರ ಮೇಲೆ ಸಿಂಪಡಿಸಿ. ತೆಂಗಿನ ತುರಿಯೊಂದಿಗೆ ಪದರವನ್ನು ರಚಿಸಿ.
*ಈಗ ಚಾಕೊಲೇಟ್ ಚಿಪ್ಸ್ ಅನ್ನು ಮೇಲ್ಭಾಗದಲ್ಲಿ ಸಿಂಪಡಿಸಿ, ತದನಂತರ ಮಂದಗೊಳಿಸಿದ ಹಾಲನ್ನು ಸೇರಿಸಿ. ಮೇಲ್ಭಾಗದಿಂದ ಹುಯ್ಯುತ್ತಾ ಪದರವನ್ನು ನಿರ್ಮಿಸಿಕೊಳ್ಳಿ
*ಕೊನೆಯ ಹಂತಕ್ಕೆ, ಮಿಶ್ರ ಮಾಡಿದ ನಟ್ಸ್ ಅನ್ನು ಮೇಲ್ಭಾಗದಲ್ಲಿ ಚೆಲ್ಲಿ
ಇನ್ನು ಇದನ್ನು 20 ರಿಂದ 30 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ ಮತ್ತು ಬರ್ಫಿ ಆಕಾರದಲ್ಲಿ ಕತ್ತರಿಸಿಕೊಳ್ಳಿ ಚಾಕಲೇಟ್ ಬರ್ಫಿ ಬಡಿಸಲು ಈಗ ಸಿದ್ಧವಾಗಿದೆ. ಸಿಹಿ ತಿನಿಸಿನ ಸರದಾರ-ತೆಂಗಿನಕಾಯಿ ಬರ್ಫಿ
English summary

chocolate barfi recipe for diwali

To make your Diwali celebration exclusive and special, specifically for kids, you can try chocolate sweets this year. Instead of the conventional laddus and barfis, if you give a chocolaty twist to those, people will love you and thank you for making their festivity even more special.Today, we will be sharing the chocolate barfi recipe that you could try to prepare on Diwali.
X
Desktop Bottom Promotion