For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ ಪಾಯಸ- ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ಪೆಷಲ್

|

ಕನ್ನಡ ಬೋಲ್ಡ್ ಸ್ಕೈ ಓದುಗರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಇಂದು ಅದೃಷ್ಟ ಲಕ್ಷ್ಮಿಯನ್ನು ಸೀರೆ, ಚಿನ್ನಾಭಾರಣಗಳಿಂದ ಅಲಂಕಾರ ಮಾಡಿ, ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಹಬ್ಬದ ಅಡುಗೆ ಮಾಡಿ, ತಮ್ಮ ವಯಸ್ಸಿಗಿಂತ ಕಿರಿಯ ಮುತ್ತೈದೆಯರಿಗೆ ಅರಿಶಿಣ, ಕುಂಕುಮ ನೀಡಿ ಹರಿಸಿ, ಹಿರಿಯ ಮುತ್ತೈದೆಯರಿಂದ ಆರ್ಶೀವಾದ ಪಡೆದು ಮಹಿಳೆಯರು ಧನ್ಯತಾಭಾವ ತುಂಬಿಕೊಳ್ಳುತ್ತಾರೆ.

ಈ ಹಬ್ಬದಂದು ಏನೇನು ಅಡುಗೆ ಮಾಡಬೇಕೆಂದು ಈಗಾಗಲೇ ನಿಶ್ಚಯವಾಗಿರುತ್ತದೆ. ಅವುಗಳ ಜೊತೆಗೆ ತುಂಬಾ ಸರಳವಾದ ಈ ಸಿಹಿ ಅಡುಗೆಯನ್ನು ಬೇಕಾದರೆ ಟ್ರೈ ಮಾಡಬಹುದು.

Carrot Payasam, Payasam For varamahalakshmi

ಬೇಕಾಗುವ ಸಾಮಾಗ್ರಿಗಳು
ಅರ್ಧ ಲೀಟರ್ ಗಟ್ಟಿ ಹಾಲು
2-3 ಸ್ವಲ್ಪ ದೊಡ್ಡ ಗಾತ್ರದ ಕ್ಯಾರೆಟ್( ಸಿಪ್ಪೆ ಸುಲಿದು ತುರಿದಿಡಿ)
8-10 ಗೋಡಂಬಿ
ಬಾದಾಮಿ 6-7(ನೀರಿನಲ್ಲಿ ನೆನೆ ಹಾಕಿರಿ)
ಅರ್ಧ ಚಮಚ ಏಲಕ್ಕಿ ಪುಡಿ
1 ಚಮಚ ತುಪ್ಪ
ಸ್ವಲ್ಪ ಕೇಸರಿ (ಬೇಕಿದ್ದರೆ)

ತಯಾರಿಸುವ ವಿಧಾನ:

* ಹಾಲು ಚೆನ್ನಾಗಿ ಕುದಿ ಬಂದು ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ. ಒಂದು ಬದಿಯಲ್ಲಿಡಿ.

* ನಂತರ ಬೇರೆ ಪಾತ್ರೆಗೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿಯನ್ನು ಹಾಕಿ 4-5 ನಿಮಿಷ ಫ್ರೈ ಮಾಡಿ ಒಂದು ಬದಿಯಲ್ಲಿ ತೆಗೆದಿಡಿ.

* ನಂತರ ಅದೇ ಪಾತ್ರೆಗೆ ತುರಿದ ಕ್ಯಾರೆಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ, ನಂತರ ಬಾದಾಮಿಯ ಸಿಪ್ಪೆ ಸುಲಿದು ಅದನ್ನು ಕ್ಯಾರೆಟ್ ಜೊತೆ ಹಾಕಿ ಕುದಿಸಿದ ಮಂದವಾಗಿಸಿದ ಹಾಲಿನಿಂದ ಕಾಲು ಕಪ್ ಹಾಲನ್ನು ಹಾಕಿ 7-8 ನಿಮಿಷ ಸೌಟ್ ನಿಂದ ಆಡಿಸುತ್ತಾ ಕುದಿಸಿ. ನಂತರ ತಣ್ಣಗಾಗಲು ಇಡಿ.

* ಈಗ ಕ್ಯಾರೆಟ್ ಮತ್ತು ಬಾದಾಮಿ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿ.

* ಈಗ ಪುನಃ ಹಾಲನ್ನು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆಯನ್ನು ಹಾಕಿ , ರುಬ್ಬಿದ ಕ್ಯಾರೆಟ್ ಹಾಕಿ ಸೌಟ್ ನಿಂದ ಮಿಕ್ಸ್ ಮಾಡುತ್ತಾ 5 ನಿಮಿಷ ಕುದಿಸಬೇಕು. ಸಕ್ಕರೆ ಅಥವಾ ಹಾಲು ಬೇಕಿದ್ದರೆ ಸ್ವಲ್ಪ ಸೇರಿಸಬಹುದು(ಹಾಲು ಸೇರಿಸುವುದಾದರೆ ಕುದಿಸಿದ ಹಾಲನ್ನು ಹಾಕಿ).

* ನಂತರ ಏಲಕ್ಕಿ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ ಅದನ್ನು ಗೋಡಂಬಿ ಮತ್ತು ಕೇಸರಿಯಿಂದ ಅಲಂಕರಿಸಿದರೆ ಕ್ಯಾರೆಟ್ ಪಾಯಸ ರೆಡಿ.

English summary

Carrot Payasam Recipe

For this Varamahalakshmi festival you might have already decided to prepare few recipes. Here we have given one of the easiest sweet recipe, you can add this recipe in your festival recipes list.
X
Desktop Bottom Promotion