For Quick Alerts
ALLOW NOTIFICATIONS  
For Daily Alerts

ಅಮ್ಮಂದಿರ ದಿನಾಚರಣೆಗೆ ಮಾವಿನ ಹಣ್ಣಿನ ಲಡ್ಡು ರೆಸಿಪಿ!

ಮಾವಿನ ಹಣ್ಣಿನಿಂದ ರಸಭರಿತ ಉಪ್ಪಿನಕಾಯಿ ಹಾಗೂ ಹಣ್ಣಿನಿಂದ ಜ್ಯೂಸ್, ಮಿಲ್ಕ ಶೇಕ್, ಐಸ್‍ಕ್ರೀಮ್ ತಯಾರಿಸುವುದು ನಮಗೆ ಗೊತ್ತು. ಆದರೆ ಈ ರುಚಿ-ರುಚಿಯಾದ ಹಣ್ಣಿನಿಂದ ಸಿಹಿಯಾದ ಲಡ್ಡು ಸಹ ತಯಾರಿಸಬಹುದು....

By Divya
|

ಮಕ್ಕಳಿಗೆ ಹಸಿವಾದರೆ ಮೊದಲು ಅಮ್ಮನ ನೆನಪಾಗುವುದು. ಸದಾ ರುಚಿ-ರುಚಿಯಾದ ತಿನಿಸುಗಳನ್ನು ಮಾಡಿ ಬಡಿಸುವವಳು ಅವಳು. ಸಮಯಕ್ಕೆ ತಕ್ಕಂತಹ ಆರೋಗ್ಯಕರ ಊಟ-ತಿಂಡಿಯನ್ನು ಅವಳೇ ತಯಾರಿಸಿರುತ್ತಾಳೆ. ಅವಳ ಕೈರುಚಿಗೆ ಸಮನಾದ ತಿಂಡಿ ಬೇರೆಲ್ಲೂ ಸಿಗದು. ಮುಗ್ಧ ಪ್ರೀತಿಯನ್ನು ತೋರಿಸಿ ಬೆಳೆಸುವ ಅಮ್ಮಂದಿರಿಗೆ "ಅಂತಾರಾಷ್ಟ್ರೀಯ ಅಮ್ಮಂದಿರ ದಿನಾಚರಣೆಯ ಶುಭಾಶಯ' ಕೋರಿ ಸಿಹಿಯಾದ ಹೊಸ ರುಚಿಯ ಪರಿಚಯ ಮಾಡಿಸೋಣ...

ಬೇಸಿಗೆ ಎಂದರೆ ಕೇಲವ ಬಿಸಿಯಾದ ವಾತಾವರಣ ಎನ್ನುವುದಷ್ಟೇ ಅಲ್ಲ. ರುಚಿಯಾದ ಹಾಗೂ ರಸಭರಿತವಾದ ಹಣ್ಣುಗಳ ಕಾಲವೂ ಹೌದು. ಅದರಲ್ಲೂ ಹಣ್ಣುಗಳ ರಾಜ ಮಾವು ಹೆಚ್ಚಾಗಿ ಸಿಗುವುದು. ರಸಭರಿತ ಈ ಮಾವಿನ ಕಾಯಿಯಲ್ಲಿ ಉಪ್ಪಿನಕಾಯಿ ಹಾಗೂ ಹಣ್ಣಿನಿಂದ ಜ್ಯೂಸ್, ಮಿಲ್ಕ ಶೇಕ್, ಐಸ್‍ಕ್ರೀಮ್ ತಯಾರಿಸುವುದು ನಮಗೆ ಗೊತ್ತು. ಈ ರುಚಿಯಾದ ಹಣ್ಣಿನಿಂದ ಸಿಹಿಯಾದ ಲಡ್ಡುಸಹ ತಯಾರಿಸಬಹುದು. ಹೌದಾ!? ಅದು ಹೇಗೆ? ಎನ್ನುವ ಕುತೂಹಲ ಇದ್ದರೆ ಇದನ್ನು ಓದಿ... ಕೊಬ್ಬರಿ ಲಾಡು, ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

ಸುಮಾರು 8 ಮಂದಿಗೆ ನೀಡಬಹುದು
*ಸಾಮಾಗ್ರಿಗಳ ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
*ಲಡ್ಡು ಮಾಡಲು ಬೇಕಾಗುವ ಸಮಯ: 20 ನಿಮಿಷಗಳು

 mango coconut sweet ladoo

ಬೇಕಾಗುವ ಸಾಮಾಗ್ರಿಗಳು:
1. ಮಾವಿನ ಹಣ್ಣಿನ ತಿರುಳು- 1/2 ಕಪ್
2. ತಣಿದ ಗಟ್ಟಿಯಾದ ಹಾಲು - 1/2 ಕಪ್
3. ಒಣ ಕೊಬ್ಬರಿಯ ತುರಿ - 1 ಕಪ್
4. ಏಲಕ್ಕಿ ಪುಡಿ - 1/4 ಚಮಚ
5. ಚಿಕ್ಕದಾಗಿ ಹೆಚ್ಚಿಕೊಂಡ ಮಿಶ್ರ ಡ್ರೈಪ್ರೂಟ್ಸ್ (ಗೋಡಂಬಿ, ಬಾದಾಮಿ, ಪಿಸ್ತಾ)- 1/2 ಕಪ್ ಮಕ್ಕಳ ಅಚ್ಚುಮೆಚ್ಚಿನ ಮಾವಿನ ಹಣ್ಣಿನ ಜಾಮ್

ಮಾಡುವ ವಿಧಾನ:
1. ಮೊದಲು ದಪ್ಪ ತಳದ ಪಾತ್ರೆಯನ್ನು ತೆಗೆದುಕೊಂಡು, ಒಣ ತೆಂಗಿನ ತುರಿಯನ್ನು ಹುರಿದುಕೊಳ್ಳಬೇಕು. ಪರಿಮಳ ಬರುವವರೆಗೆ ಹುರಿಯಬೇಕು. ತುಂಬಾ ಕಂದು ಬಣ್ಣ ಬರುವವರೆಗೆ ಹುರಿಯಬಾರದು.
2. ನಂತರ ಮಾವಿನ ಹಣ್ಣಿನ ತಿರುಳನ್ನು ಹಾಕಿ ಮಿಶ್ರಗೊಳಿಸಿ.
3. ಬಳಿಕ ಹಾಲು, ಡ್ರೈ ಪ್ರೂಟ್ಸ್, ಚಿಟಿಕೆಯಷ್ಟು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲುಕ(ಮಿಶ್ರಗೊಳಿಸಿ)ಬೇಕು.
4. ತಳ ಹಿಡಿಯದಂತೆ ಕೈಯಾಡಿಸುತ್ತಲೇ ಇರಬೇಕು. ಹೀಗೆ ಮಾಡುತ್ತಾ ಇರುವಾಗ ದಪ್ಪ ಹಿಟ್ಟಿನ ಮುದ್ದೆಯಂತೆ ಆಗುತ್ತದೆ. ಆಗ ಸ್ಟೋವಿನಿಂದ ಕೆಳಗಿಳಿಸಿ, ಆರಲು ಬಿಡಿ.
5. ಕೈಯಲ್ಲಿ ಹಿಡಿಯುವಷ್ಟು ಬಿಸಿಯಿರುವಾಗ ಸಣ್ಣ ಸಣ್ಣ ಉಂಡೆ(ಲಡ್ಡು)ಯನ್ನು ಮಾಡಿ. ನಂತರ ಇದರ ಮೇಲೆ ತೆಂಗಿನ ತುರಿಯನ್ನು ಉದುರಿಸಿ ಸವಿಯಲು ನೀಡಿ....

English summary

Beat the summer heat and try this mango coconut sweet ladoo

Mango lassi or mango shake are common, but have you ever tasted the mango ladoo? This dessert is unique and different from the other types of ladoos. It contains coconut and mango, where you can get a pulpy and crunchy taste.So, to know more about this interesting recipe, continue reading.
X
Desktop Bottom Promotion