For Quick Alerts
ALLOW NOTIFICATIONS  
For Daily Alerts

ಕ್ರಿಸ್ ಮಸ್ ಸ್ಪೆಷಲ್ : ಬ್ರೆಡ್‌ ಹಲ್ವ

By Super
|

bread halwaಕ್ರಿಸ್ ಮಸ್ ಅಂದರೆ ಸಂಭ್ರಮ ಹಾಗೂ ಸಿಹಿ ತಿನಿಸುಗಳ ಪರ್ವ. ಬಗೆಬಗೆಯ ಕೇಕ್ ಮಾಡಿ ತಿನ್ನುವುದು ಸಾಮಾನ್ಯ. ಆದರೆ ಕೇಕ್ ಮಾಡಲು ಬೇಕಾದ ಸಾಮಾಗ್ರಿಗಳ ವೆಚ್ಚ ಭರಿಸಲಾಗದ ಶ್ರೀಸಾಮಾನ್ಯರು ದೈನಂದಿನ ಆಹಾರವಾದ ಬ್ರೆಡ್ ಬಳಸಿ, ಅಚ್ಚುಕಟ್ಟಾದ ಸಿಹಿ ತಿಂಡಿ ಮಾಡಿ ಸಂತಸ ಪಡಬಹುದು. ಸುಲಭವಾಗಿ ತಯಾರಿಸಬಹುದಾದ ಹಲ್ವಾ ಖಂಡಿತಾ ಬಾಯಿ ಚಪ್ಪರಿಸುವಂತೆ ಮಾಡುತ್ತದೆ.

ಬೇಕಾಗುವ ಪದಾರ್ಥ :
1 ಪೌಂಡ್‌ ದೊಡ್ಡ ಬ್ರೆಡ್‌
2 ಕಪ್‌ ಸಕ್ಕರೆ
1 ಕಪ್‌ ಹಾಲು
1 ಕಪ್‌ ತುಪ್ಪ ಮತ್ತು
ಆಗತ್ಯಕ್ಕೆ ತಕ್ಕಂತೆ ದ್ರಾಕ್ಷಿ , ಏಲಕ್ಕಿ ಪುಡಿ, ಗೋಡಂಬಿ ಚೂರು, ರೋಸ್‌ ಎಸೆನ್ಸ್‌ .

ಮಾಡುವ ವಿಧಾನ :

ಬ್ರೆಡ್ಡನ್ನು ಸಣ್ಣ ಚೂರುಗಳಾಗಿ ಮಾಡಿ ತುಪ್ಪ ಹಾಕಿ ಬಾಣಲೆಯಲ್ಲಿ ಕೆಂಪಗೆ ಹುರಿಯಿರಿ. ಪ್ರತ್ಯೇಕ ಪಾತ್ರೆಯೊಂದರಲ್ಲಿ ಸ್ವಲ್ಪ ಸಕ್ಕರೆ ಮತ್ತು ಹಾಲು ಬೆರೆಸಿ ಪಾಕ ಮಾಡಿಕೊಳ್ಳಿ. ಹುರಿದಿಟ್ಟ ಬ್ರೆಡ್ಡನ್ನು ಹಾಲಿನ ಪಾಕದಲ್ಲಿ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಗುಚಿರಿ. ಈ ಮಿಶ್ರಣ ಗಟ್ಟಿಯಾಗುತ್ತಿರುವಂತೆಯೇ ತುಪ್ಪ, ಗೇರು ಬೀಜ, ಏಲಕ್ಕಿ ಪುಡಿ, ರೋಸ್‌ ಎಸೆನ್ಸ್‌ ಹಾಕಿರಿ.

ಮಗುಚುವುದನ್ನು ನಿಲ್ಲಿಸಿದರೆ ಮಿಶ್ರಣ ಅಡಿ ಹಿಡಿಯಬಹುದು. ಪಾಕ ಗಟ್ಟಿಯಾಗುತ್ತ ಒಂದು ಹದಕ್ಕೆ ಬಂದಾಗ, ತುಪ್ಪ ಸವರಿದ ತಟ್ಟೆಯಲ್ಲಿ ಹರಡುವುದು. ಆರಿದ ನಂತರ ತುಂಡು ಮಾಡಿ ಉಪಯೋಗಿಸಬಹುದು. ಇಲ್ಲದಿದ್ದರೆ ಕ್ಯಾರೆಟ್‌ ಹಲ್ವದಂತೆ ಚಮಚದಲ್ಲೂ ತಿನ್ನಬಹುದು.
(ದಟ್ಸ್ ಕನ್ನಡ ಪಾಕಶಾಲೆ)

X
Desktop Bottom Promotion