For Quick Alerts
ALLOW NOTIFICATIONS  
For Daily Alerts

ಹೊಸರುಚಿ : ಹಾಲು ಹೋಳಿಗೆ ಸಿಹಿ ತಿನಿಸು

By * ಭಾರತಿ ಎಚ್ಎಸ್, ಬೆಂಗಳೂರು
|
Coconut milk holige sweet recipe
ಹಾಲು ಹೋಳಿಗೆ ಒಂದು ವಿಶಿಷ್ಟವಾದ ಸಿಹಿ ತಿನಿಸು. ಹುಟ್ಟುಹಬ್ಬ, ಮುಂಜಿ, ನಾಮಕರಣ, ಸತ್ಯನಾರಾಯಣ ಪೂಜೆ, ಗೃಹ ಪ್ರವೇಶ, ಮದುವೆ ವಾರ್ಷಿಕೋತ್ಸವ ಮುಂತಾದ ಶುಭ ಸಂದರ್ಭದಲ್ಲಿ ಮಾಡಿ ಮನೆಮಂದಿಗೆಲ್ಲ ಸಂತೃಪ್ತಿಪಡಿಸಬಹುದಾದ ಸ್ವೀಟ್ ರೆಸಿಪಿ.

ಬೇಕಾಗುವ ಪದಾರ್ಥಗಳು

* ಗೋದಿ ಹಿಟ್ಟು ಒಂದು ಕಪ್
* ಮೈದಾ ಒಂದು ಕಪ್
* ಚಿರೋಟಿ ರವೆ ಒಂದು ಕಪ್
* ಚಿಟಿಕೆ ಉಪ್ಪು
* 2 ಚಮಚ ಎಣ್ಣೆ

ಇವಿಷ್ಟನ್ನು ಗಟ್ಟಿಯಾಗಿ ಕಲೆಸಿಟ್ಟು ಅರ್ಧ ಗಂಟೆ ನೆನೆಯಲು ಬಿಡಿ.

* ಬೆಲ್ಲ ಒಂದು ಕಪ್
* ಕೊಬ್ಬರಿ/ಕಾಯಿತುರಿ ಒಂದು ಕಪ್
* ಹುರಿದ ಗಸಗಸೆ ಒಂದು ಚಮಚ
* ಹುರಿಗಡಲೆ ಒಂದು ಚಮಚ
* ಏಲಕ್ಕಿ ಪುಡಿ
* ಒಣದ್ರಾಕ್ಷಿ ಮತ್ತು ಗೋಡಂಬಿ

ಹಾಲು ಹೋಳಿಗೆ ತಯಾರಿಸುವ ವಿಧಾನ

1. ಒಣದ್ರಾಕ್ಷಿ ಮತ್ತು ಗೋಡಂಬಿ ಬಿಟ್ಟು ಉಳಿದವನ್ನು ನುಣ್ಣಗೆ ರುಬ್ಬಿಟ್ಟುಕೊಂಡು ಒಂದು ಪಾತ್ರೆಗೆ ಹಾಕಿ ಕುದಿಯಲು ಇಡಿ. ಇದು ಗಟ್ಟಿ ಪಾಯಸದಷ್ಟು ಹದವಾಗಿ ಇರಬೇಕು. ಚೆನ್ನಾಗಿ ಕುದ್ದ ಬಳಿಕ ಒಲೆಯಿಂದ ಇಳಿಸಿ.

2. ತುಪ್ಪದಲ್ಲಿ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಕರಿದಿಟ್ಟುಕೊಳ್ಳಿ.

3. ಈಗ ಒಂದು ಬಾಣಲೆಗೆ ಕರಿಯಲು ಎಣ್ಣೆಯನ್ನು ಹಾಕಿ.

4. ಕಲೆಸಿಟ್ಟುಕೊಂಡ ಹಿಟ್ಟನ್ನು ಪೂರಿಯಂತೆ ಲಟ್ಟಿಸಿಕೊಂಡು ಗರಿ ಗರಿಯಾಗಿ ಕರಿದು, ಎಣ್ಣೆ ಇಂದ ತೆಗೆದ ತಕ್ಷಣ ಕುದಿಸಿಟ್ಟುಕೊಂಡ ಮಿಶ್ರಣಕ್ಕೆ ಹಾಕಿ ತಕ್ಷಣ ತೆಗೆದು ಒಂದು ತಟ್ಟೆಗೆ ಹಾಕಿ. ಇದೇ ರೀತಿ ಎಲ್ಲವನ್ನು ಮಾಡಿಟ್ಟುಕೊಳ್ಳಿ. ಮಿಶ್ರಣಕ್ಕೆ ಹಾಕಿದ ತಕ್ಷಣ ತೆಗೆದು ಬಿಡಿ.

4. ತಿನ್ನಲು ಕೊಡುವಾಗ ತುಪ್ಪದಲ್ಲಿ ಕರಿದ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಮೇಲೆ ಇಟ್ಟು ಅಲಂಕರಿಸಿ ಕೊಡಿ.

English summary

Coconut milk holige recipe | Coconut holige sweet dish | Karnataka cuisine | ಹಾಲು ಹೋಳಿಗೆ ಸಿಹಿ ತಿನಿಸು

Coconut milk holige sweet recipe by Bharathi HS, Bangalore. Try this new type of sweet dish on occasions like birthdays, wedding anniversaries, Satyanarayana Pooja, naming ceremony etc.
Story first published: Thursday, November 10, 2011, 15:06 [IST]
X
Desktop Bottom Promotion