For Quick Alerts
ALLOW NOTIFICATIONS  
For Daily Alerts

ಹಲ್ವಾ ರುಚಿಯಾಗಬೇಕು ಅಲ್ವಾ? ಹೀಗೆ ಮಾಡಿ

|
Carrot-pumpkin halwa recipe
ಸ್ವೀಟ್ ಮಾಡೋಕೆ ಕಾರಣ ಬೇಕಿಲ್ಲ, ಬಾಯಿ ರುಚಿ ಬಯಸಿದಾಗಲೆಲ್ಲಾ ಸಿಹಿ ಮಾಡಿ ತಿಂದರೆ ಮನಸ್ಸಿಗೆ ಖುಷಿ. ಅದರಲ್ಲೂ ಹಲ್ವಾ ಮಾಡಿದರೆ ಇನ್ನೂ ಚೆಂದ. ಹೆಚ್ಚು ನ್ಯೂಟ್ರೀಷನ್ ಇರುವ ಕ್ಯಾರೆಟ್, ಕುಂಬಳಕಾಯಿ ಬಳಸಿಕೊಂಡು ಹಲ್ವಾ ಮಾಡುವುದು ಹೇಗೆ ಎಂದು ತಿಳಿದುಕೊಂಡು ನೀವೂ ಟ್ರೈ ಮಾಡಿ ತಯಾರಿಸಿ.

ಹಲ್ವಾಗೆ ಬೇಕಾಗುವ ಪದಾರ್ಥಗಳು:

* 1 ಕಪ್ ತುರಿದ ಕ್ಯಾರೆಟ್

* 1/2 ಕಪ್ ತುರಿದ ಬಿಳಿ ಕುಂಬಳಕಾಯಿ

* 1/4 ಕಪ್ ಗೋಡಂಬಿ

* 1/4 ಬಾದಾಮಿ

* 1/2 ಕಪ್ ತೆಂಗಿನ ತುರಿ

* 1 ಪೀಸ್ ಚೀಸ್

* 2 ಕಪ್ ಗಟ್ಟಿಗೊಳಿಸಿದ ಹಾಲು

* 1 ಕಪ್ ಸಕ್ಕರೆ

* 1/2 ಕಪ್ ತುಪ್ಪ

* ಸ್ವಲ್ಪ ಕೇಸರಿ * ಸ್ವಲ್ಪ ದ್ರಾಕ್ಷಿ

ಕ್ಯಾರೆಟ್- ಕುಂಬಳಕಾಯಿ ಹಲ್ವಾ ಮಾಡುವ ವಿಧಾನ:

ಬಾಣಲೆಯಲ್ಲಿ ತುಪ್ಪ ಹಾಕಿಕೊಂಡು ಅದಕ್ಕೆ ಗೋಡಂಬಿ ಮತ್ತು ಬಾದಾಮಿಯನ್ನು ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಕೆಂಪಗಾಗುವವರೆಗೆ ಹುರಿಯಬೇಕು. ನಂತರ ಅದಕ್ಕೆ ತೆಂಗಿನ ತುರಿ, ಕ್ಯಾರೆಟ್ ಮತ್ತು ಕುಂಬಳಕಾಯಿ ತುರಿಯನ್ನು ಹಾಕಿ 20 ನಿಮಿಷ ಚೆನ್ನಾಗಿ ತಿರುಗಿಸಬೇಕು. ಇದೇ ಸಮಯದಲ್ಲಿ ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಅದು ಚೆನ್ನಾಗಿ ಕಾಯಿಸಿ ಅದಕ್ಕೆ ಚೀಸ್ ಬೆರೆಸಿ ಗಟ್ಟಿಯಾಗುವವರೆಗೂ ಕಾಯಿಸಬೇಕು.

ಈಗ ಕ್ಯಾರೆಟ್ ಮಿಶ್ರಣಕ್ಕೆ ಹಾಲನ್ನು ಹಾಕಿ ಸಕ್ಕರೆ ಮತ್ತು ಕೇಸರಿಯನ್ನು ಬೆರೆಸಿ 10 ನಿಮಿಷ ಸಣ್ಣ ಕಾವಿನಲ್ಲಿ ಬೇಯಿಸುತ್ತಾ ತಿರುಗಿಸಬೇಕು. ಕೊನೆಗೆ * ತುಪ್ಪ ಸವರಿಟ್ಟ ಬಾಣಲೆಗೆ ಈ ಮಿಶ್ರಣವನ್ನು ಹಾಕಿದರೆ, ಕ್ಯಾರೆಟ್-ಕುಂಬಳ ಹಲ್ವಾ ತಿನ್ನಲು ಸಿದ್ಧವಾಗಿದೆ.

English summary

Nutri Halwa Sweet Recipe | Carrot-Pumpkin Sweet Dish | ಕ್ಯಾರೆಟ್-ಕುಂಬಳಕಾಯಿ ಹಲ್ವಾ ರೆಸಿಪಿ

Nutri halwa recipe is a sweet dish and very nutritious to health. Take a look at how to go about with the nutri halwa recipe with the good combination of carrot and pumpkin.
Story first published: Tuesday, September 20, 2011, 14:28 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more