For Quick Alerts
ALLOW NOTIFICATIONS  
For Daily Alerts

ಪೇಡಾದಷ್ಟೆ ಸಿಹಿಯಾಗಿರಲಿ ಅಣ್ಣ-ತಂಗಿ ಅನುಬಂಧ

By Super
|
ಈ ಬಾರಿ ರಾಖಿ ಹಬ್ಬಕ್ಕೆ ನಿಮ್ಮ ಅಣ್ಣ ತಮ್ಮಂದಿರಿಗೆ ನೀವು ಸರ್ಪ್ರೈಸ್ ಕೊಡಬಹುದು. ಹೇಗಿದ್ದರೂ ರಾಖಿ ಹಬ್ಬ ಭಾನುವಾರ. ಆ ದಿನ ನಿಮ್ಮ ಕೈಯ್ಯಾರೆ ನೀವೇ ಸ್ವೀಟ್ ತಯಾರಿಸಿ ಅವರಿಗೆ ತಿನ್ನಿಸಿದರೆ ಸಕ್ಕರೆಯ ಅಕ್ಕರೆ ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಹಾಲಿನಷ್ಟೇ ಶುಭ್ರವಾಗಿರಲಿ, ಚಿರವಾಗಲಿ ನಮ್ಮ ಈ ಮಧುರ ಬಾಂಧವ್ಯ ಎಂದು ಹಾರೈಸಿ ಹಾಲಿನ ಪೇಡವನ್ನು ಅಣ್ಣತಮ್ಮಂದಿರಿಗೆ ತಿನ್ನಿಸಿ.

ಬೇಕಾಗುವ ಸಾಮಾನುಗಳು :
* 1 ಲೀಟರ್ ಹಾಲು
* ಸಕ್ಕರೆ
* ಯಾಲಕ್ಕಿ ಪುಡಿ
* ಬಾದಾಮಿ, ಗೋಡಂಬಿ

ಹಾಲಿನ ಪೇಡಾ ಮಾಡುವ ವಿಧಾನ :
ಹಾಲನ್ನು ಒಂದು ಸ್ಟೀಲ್‌ ಪಾತ್ರೆಯಲ್ಲಿ ಕುದಿಸಬೇಕು. ಅದು ಪೂರ ಗಟ್ಟಿಯಾಗುವವರೆಗೂ ಹಾಲನ್ನು ಕುದಿಸುತ್ತಲೇ ಇರಬೇಕು. ಹಾಲು ತಳ ಹಿಡಿಯದಂತೆ ಎಚ್ಚರವಹಿಸಿ ಸಣ್ಣ ಕಾವಿನಲ್ಲಿ ಕುದಿಸಬೇಕು. ಹಾಲು ಗಟ್ಟಿಯಾಗುತ್ತಾ ಬರುತ್ತಿದ್ದ ಹಾಗೆ ಅದನ್ನು ಹೆಚ್ಚು ತಿರುಗಿಸುತ್ತಿರಬೇಕು. ಹಾಲು ಒಂದು ಹದಕ್ಕೆ ಗಟ್ಟಿಯಾದ ನಂತರ ಕೆಳಗಿಳಿಸಿ ಅದನ್ನು ತಣ್ಣಗೆ ಮಾಡಬೇಕು.

ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಹಾಕಿ ಅದಕ್ಕೆ 1 ಕಪ್‌ ನೀರು ಹಾಕಿ ಪಾಕಕ್ಕೆ ಇಡಬೇಕು. ಸಕ್ಕರೆ ಪಾಕದ ರೂಪಕ್ಕೆ ಬಂದ ಮೇಲೆ ಕಾಯಿಸಿ ಗಟ್ಟಿ ಮಾಡಿದ್ದ ಹಾಲನ್ನು ಪಾಕಕ್ಕೆ ಬೆರೆಸಬೇಕು. ಚಿಕ್ಕ ಬಾಣಲೆಯಲ್ಲಿ ತುಪ್ಪ ಹಾಕಿ ಕಾಯಿಸಿ ಅದರಲ್ಲಿ ಗೋಡಂಬಿ, ಬಾದಾಮಿ ಹುರಿದುಕೊಂಡು ಬೆರಸಬೇಕು. ನಂತರ ಅದನ್ನು ಹಾಗೆಯೇ ತಟ್ಟೆಗೆ ಹಾಕಿ ಕೊಡಬಹುದು ಅಥವಾ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಲೂ ಬಹುದು. ಈಗ ತಯಾರಿಸಿದ ಹಾಲಿನ ಪೇಡಾವನ್ನು ನಿಮ್ಮ ಅಣ್ಣ ತಮ್ಮಂದಿರಿಗೆ ಹಂಚಿ ತಿನ್ನಿ.

English summary

Milk sweet recipe | Special recipe for rakshabandhan | ಹಾಲಿನ ಪೇಡಾ| ರಕ್ಷಾಬಂಧನಕ್ಕೆ ಹಾಲಿನ ಪೇಡಾ

Celebrate the Rakshabandhan, the festival of bondage differently this year. Prepare milk special sweet recipe for your sweet brother this time. The taste will definitely make your brother feel happy. Take a look at how to prepare this milk special sweet recipe.
X
Desktop Bottom Promotion