For Quick Alerts
ALLOW NOTIFICATIONS  
For Daily Alerts

ಸಿಹಿಯಾದ ಕಾಯಿ ಕಡುಬು ತಿನ್ನಲು ತಯಾರಾಗಿ

By Staff
|

ಕಡುಬು ಅನ್ನೋದನ್ನ ಎಲ್ಲರೂ ಕೇಳಿರ್ತೀವಿ. ಆದರೆ ಇಲ್ಲೊಂದು ವಿಶೇಷವಾದ ಸಿಹಿ ತಿಂಡಿ ಇದೆ. ಮೊಟ್ಟೆ ಉಪಯೋಗಿಸಿ ತಯಾರಿಸುವ, ತುಂಬಾ ರುಚಿಯಾದ, ಅತಿ ಎನಿಸದಷ್ಟು ಸಿಹಿಯಾದ ಈ ಸ್ಪೆಷಲ್ ಕಾಯಿ ಕಡುಬನ್ನ ತಿಂದರೆ ಬಾಯಿ ಮತ್ತೆ ಮತ್ತೆ ಆ ರುಚಿಯನ್ನ ಕೇಳುತ್ತೆ. ನೀವೂ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಾನುಗಳು:
* 3 ಕಪ್ ತಾಜಾ ಕಾಯಿ ತುರಿ
* 3 ಕಪ್ ನೀರು
* 1 ಚಮಚ ಜಾಯಿಕಾಯಿ ಪುಡಿ
* 1 ಚಮಚ ದಾಲ್ಚಿನ್ನಿ
* 1 ನಿಂಬೆ ಸಿಪ್ಪೆ
* 1 1/2 ಕಪ್ ಸಕ್ಕರೆ (ನಿಮ್ಮ ಸಿಹಿಗೆ ಅನುಗುಣವಾಗಿ)
* 6 ಮೊಟ್ಟೆ

ಕಾಯಿ ಕಡುಬು ಮಾಡುವ ವಿಧಾನ:
* ಸಕ್ಕರೆಯನ್ನು ನೀರಿಗೆ ಬೆರೆಸಿ ಜಾಯಿಕಾಯಿ ಮತ್ತು ದಾಲ್ಚಿನ್ನಿ ಪುಡಿ ಹಾಕಿ ಕುದಿಸಬೇಕು. ಸಕ್ಕರೆ ಪಾಕ ಬಂದ ನಂತರ ಸಣ್ಣ ಉರಿಯಲ್ಲಿ ಕಾಯಿಸುತ್ತಾ ಅದಕ್ಕೆ ತುರಿದ ಕಾಯಿ ಹಾಕಿ ನಿರಂತರವಾಗಿ 10 ನಿಮಿಷ ತಿರುಗಿಸಬೇಕು.

* ಪ್ರತ್ಯೇಕವಾಗಿ ಮೊಟ್ಟೆಗಳನ್ನು ಒಡೆದು ಹಳದಿ ಭಾಗವನ್ನು ತೆಗೆದುಕೊಂಡು ನಿಂಬೆಸಿಪ್ಪೆಯೊಂದಿಗೆ ಹಾಕಿ ಚೆನ್ನಾಗಿ ಕಲಕಬೇಕು. ಅದು ಗಟ್ಟಿಯಾಗುವವರೆಗೂ ಹೀಗೆ ತಿರುಗಿಸಿ ನಿಂಬೆ ಸಿಪ್ಪೆಯನ್ನು ಹೊರ ತೆಗೆದು ಕಾಯಿಯ ಮಿಶ್ರಣಕ್ಕೆ ಬೆರೆಸಬೇಕು.

* ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ 10 ನಿಮಿಷ ಕಾಯಿಸಬೇಕು. ಕೊನೆಯಲ್ಲಿ ಎಣ್ಣೆ ಕಾಯಿಸಿ ತೆಂಗಿನ ಮಿಶ್ರಣವನ್ನು ಅದಕ್ಕೆ ಬೆರೆಸಬೇಕು. 2 ಗಂಟೆ ಇದನ್ನು ರೆಫ್ರಿಜರೇಟರ್ ನಲ್ಲಿ ಇಟ್ಟು ನಂತರ ತಿನ್ನಬಹುದು.

English summary

Coconut recipe | Coconut pudding recipe | ತೆಂಗಿನಕಾಯಿ ಸಿಹಿ ಖಾದ್ಯಗಳು | ತೆಂಗಿನಕಾಯಿ ಸಿಹಿ ಕಡುಬು

A tasty, delicious and not-too heavy sweet is something that evryone likes. coconut pudding is a tasty treat and just what everyone will love. Here is a simple coconut pudding recipe. This can be used as dessert recipe too. Try it
X
Desktop Bottom Promotion