For Quick Alerts
ALLOW NOTIFICATIONS  
For Daily Alerts

ಸರ್ವರ ಅಚ್ಚುಮೆಚ್ಚಿನ ಸಿಹಿತಿನಿಸು ಕಲಾಕಂದ್

By Staff
|
Kalakand
ಕಲಾಕಂದ್ ಅಂದ್ರೆ ಯಾರಿಗೆ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಬಾಯಲ್ಲಿ ನೀರೂರಿಸುವ ಸಿಹಿತಿನಿಸನ್ನು ಮನೆಯಲ್ಲಿಯೇ ತಯಾರಿಸಬಹುದು. ಇದನ್ನು ಮಾಡಿ ಮಕ್ಕಳಿಗೆ ತೋರಿಸಿದಾಗ ಅವರ ಮುಖದಲ್ಲಿ ಕಾಣುವ ಆನಂದಾತಿಶಯವನ್ನು ನೀವೊಮ್ಮೆ ಗಮನಿಸಬೇಕು. ಅಂಥ ಸಂತಸ ಹಿರಿಯರ ಮುಖದಲ್ಲೂ ಮೂಡಲಿ. ತಿನ್ನುವುದಕ್ಕೆ ಎಷ್ಟು ಇಷ್ಟವೋ, ಅದನ್ನು ಮಾಡೋದು ಅಷ್ಟೇ ಸುಲಭವೋ ಸುಲಭ.

* ರಶ್ಮಿ ಸುದೀಂದ್ರ, ಹ್ಯೂಸ್ಟನ್‌

ತಯಾರಿಕೆಗೆ ಅಗತ್ಯವಾದ ಸಾಮಾಗ್ರಿಗಳು :

ಹಾಲು : 1 ಲೀಟರ್‌
ಕೋವಾ : 1ಬಾರ್‌
ಮಿಲ್ಕ್‌ಮೇಡ್‌ : 1 1/2 ಕಪ್‌
ಬಾದಾಮಿ ಮತ್ತು ಗೋಡಂಬಿ : ಸ್ವಲ್ಪ
(ಇಷ್ಟು ನಾಲ್ಕು ಮಂದಿಗೆ ಸಾಕಾಗುತ್ತದೆ)

ಮಾಡುವ ವಿಧಾನ :

ಒಂದು ಉದ್ದನೆಯ ಪಾತ್ರೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಲೀಟರ್‌ ಹಾಲನ್ನು ಸುರಿಯಿರಿ. ಕಡಿಮೆ ಬಿಸಿಯಲ್ಲಿ ಕಾಯಿಸೋದಿಕ್ಕೆ ಶುರುಮಾಡಿ. ಪಾತ್ರೆಯಲ್ಲಿನ ಹಾಲು 3/4 ಭಾಗಕ್ಕೆ ಬರುವವರೆಗೂ ಕಾಯಿಸಿ. ಅನಂತರ ಹಾಲಿಗೆ ಕೋವಾ ಹಾಕಿ ಕಲಕಿ.

ಅದರೊಟ್ಟಿಗೆ ಮಿಲ್ಕ್‌ಮೇಡ್‌ ಹಾಕಿ, ಐದು ನಿಮಿಷಗಳಿಗೊಮ್ಮೆ ಚೆನ್ನಾಗಿ ಕಲುಕುತ್ತೀರಿ. ಚೆನ್ನಾಗಿ ಎಲ್ಲವೂ ಬೆರೆತಮೇಲೆ 425 ಡಿಗ್ರಿ ಶಾಖದಲ್ಲಿ ಓವನ್‌ನಲ್ಲಿಟ್ಟು ಕಾಯಿಸಿ. ಅದಕ್ಕೂ ಮೊದಲು ದಾಕ್ಷಿ, ಗೋಡಂಬಿ, ಬಾದಾಮಿ ಸೇರಿಸಿ.

ನಂತರ ನಾಲ್ಕು ಮೂಲೆಗಳ ಬಾಣಲೆಗೆ ಎಣ್ಣೆ ಅಥವಾ ತುಪ್ಪ ಸವರಿ ಮಿಶ್ರಣವನ್ನು ಸುರಿಯಿರಿ. ಮತ್ತೆ ಹತ್ತು ನಿಮಿಷಗಳ ಕಾಲ ಓವನ್‌ನಲ್ಲಿಟ್ಟು ಬೇಯಿಸಿ. ಅರ್ಧ ಗಂಟೆ ನಂತರ ಬಾಣಲೆ ಹೊರತೆಗೆದು, ಬೇಕಾದ ರೂಪಕ್ಕೆ ಕತ್ತರಿಸಿ.

ಸಿದ್ದವಾಗಿರುವ ಕಲಾಕಂದ್ ಮೊದಲ ನೋಟಕ್ಕೆ ನಿಮ್ಮನ್ನು ಸೆಳೆಯುತ್ತದೆ. ರುಚಿರುಚಿಯ ಹಾಲುಭರಿತ ಪೌಷ್ಠಿದಾಯಕ ತಿನಿಸು. ಇದನ್ನು ಐದು ದಿನಗಳ ಕಾಲ ಮನೆಯ ತಂಗಲು ಪೆಟ್ಟಿಗೆಯಲ್ಲಿ ಕೆಡದಂತೆ ರಕ್ಷಿಸಬಹುದು.

Story first published: Monday, April 6, 2009, 18:02 [IST]
X
Desktop Bottom Promotion