For Quick Alerts
ALLOW NOTIFICATIONS  
For Daily Alerts

ಸಿಹಿ ಪಾಕಶಾಲೆ: ಆಲೂಗೆಡ್ಡೆ ಹಲ್ವಾ

By Staff
|

ಆಲೂಗೆಡ್ಡೆ ಯನ್ನು ಸಾಂಬಾರ್, ಪಲ್ಯೆಗಾಗಿ ಮಾತ್ರವಲ್ಲದೆ. ಸಿಹಿ ತಿನಿಸು ಮಾಡಲು ಬಳಸಬಹುದು. ಸಿಹಿ ತಿನ್ನಬೇಕೆನಿಸಿದಾಗ ದಿಢೀರಾಗಿ ಮಾಡಬಹುದಾದ ಆಲೂಗೆಡ್ಡೆ ಹಲ್ವಾ ಬಲು ರುಚಿಕರ.

ಮನಸ್ವಿನಿ, ನಾರಾವಿ

ಬೇಕಾಗುವ ಪದಾರ್ಥಗಳು:
ಸಿಪ್ಪೆ ಸುಲಿದ ತುರಿದ ಆಲೂಗೆಡ್ಡೆ : 1ಕಪ್
ಸಕ್ಕರೆ: ಅರ್ಧ ಕಪ್
ಹಾಲು: ಅರ್ಧ ಕಪ್
ತುಪ್ಪ : ಒಂದೂವರೆ ಕಪ್
ಒಣದ್ರಾಕ್ಷಿ, ಗೋಡಂಬಿ
ಕೇಸರಿ ಬಣ್ಣ ಸ್ವಲ್ಪ

ತಯಾರಿಸುವ ವಿಧಾನ:
ತುರಿದ ಆಲೂಗೆಡ್ಡೆಯನ್ನು ಎರಡು ಅಥವಾ ಮೂರು ಸಲ (ನೀರು ತಿಳಿಯಾಗುವವರೆಗೆ) ತೊಳೆಯಿರಿ. ನೀರನ್ನು ಸಂಪೂರ್ಣವಾಗಿ ಬಸಿದು, ಹಾಲನ್ನು ಸೇರಿಸಿ ಒಂದು ವಿಷಲ್ ಬರುವವರೆಗೆ ಕುಕ್ಕಲ್ ನಲ್ಲಿ ಬೇಯಿಸಿರಿ. ದಪ್ಪ ತಳದ ಬಾಣಲೆಯಲ್ಲಿ ಕಾಲು ಕಪ್ ನೀರು ಹಾಗೂ ಸಕ್ಕರೆಯನ್ನು ಹಾಕಿ ಒಂದು ಹದಕ್ಕೆ ಬರುವಂತೆ ಪಾಕಮಾಡಿಕೊಳ್ಳಿ. ಇದಕ್ಕೆ ಕೇಸರಿ ಬಣ್ಣ ಹಾಗೂ ಬೆಂದ ಆಲೂಗೆಡ್ಡೆಗಳನ್ನು ಸೇರಿಸಿ. ಹಲ್ವಾವನ್ನು ಸರಿಯಾದ ಹದಕ್ಕೆ ಬರುವವರೆಗೆ ಕಲುಕುತ್ತಾ ಬೇಯಿಸಿ. ಗೋಡಂಬಿ, ಒಣದ್ರಾಕ್ಷಿಗಳನ್ನು ತುಪ್ಪದಲ್ಲಿ ಹುರಿದು, ಉಳಿದ ತುಪ್ಪವನ್ನು ಒಲೆಯ ಮೇಲಿಂದ ಇಳಿಸುವುದಕ್ಕೆ ಮುನ್ನ ಹಲ್ವಾಗೆ ಬೆರಸಿ.

Story first published: Monday, March 31, 2008, 18:21 [IST]
X
Desktop Bottom Promotion