For Quick Alerts
ALLOW NOTIFICATIONS  
For Daily Alerts

ಯುಗಾದಿ ಗಮ್ಮತ್ತಿಗೆ ಬೇಕು ಒಬ್ಬಟ್ಟು ಸಾಥ್

|

ಯುಗಾದಿಗೆ ಒಬ್ಬಟ್ಟು ಇಲ್ಲ ಅಂದರೆ ಆ ಅಡುಗೆಯನ್ನು ಯುಗಾದಿ ಸ್ಪೆಷಲ್ ಅಡುಗೆ ಎನ್ನಲು ಸಾಧ್ಯವಿಲ್ಲ . ಏಕೆಂದರೆ ಈ ಹಬ್ಬದಲ್ಲಿ ಒಬ್ಬಟ್ಟು ಇರಲೇ ಬೇಕು.

ಮೊದಲೇ ಹೇಳಿದ ಹಾಗೆ ಹೊಸದಾಗಿ ಹಬ್ಬದ ಅಡುಗೆ ಮಾಡುವವರಿಗೆ ಒಬ್ಬಟ್ಟು ಅಡುಗೆ ಬರಲ್ಲ ಅಂದರೆ ಅಯ್ಯೊ ರಾಮ! ಯುಗಾದಿಗೆ ಒಬ್ಬಟ್ಟು ಇಲ್ಲ ಅಂದರೆ ಹೇಗೆ ಎಂದು ಮನೆಯವರು ನಕ್ಕಾರು. ಅಂತಹ ತೊಂದರೆ ನಿಮಗೆ ಬರದಿರಲಿ ಎಂದು ಈ ಒಬ್ಬಟ್ಟು ರೆಸಿಪಿ ನೀಡಲಾಗಿದೆ. ಈ ಕೆಳಗಿನ ರೆಸಿಪಿ ವಿಧಾನ ಸರಳ ಮತ್ತು ರುಚಿಕರವಾಗಿದೆ.

ಬೇಕಾಗುವ ಸಾಮಾಗ್ರಿಗಳು:

* ಕಡಲೆ ಬೇಳೆ 1 ಕಪ್
* ಒಂದೂವರೆ ಕಪ್ ಸಕ್ಕರೆ/ ಬೆಲ್ಲ
* ಏಲಕ್ಕಿ (8 ಇರಲಿ)
* ಅರ್ಧ ಕಪ್ ಮೈದಾ
* ಒಂದು ಕಪ್ ವನಸ್ಪತಿ
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು ಅದನ್ನು ಪ್ರೆಶರ್ ಕುಕ್ಕರಿನಲ್ಲಿ ಹಾಕಿ, ಬೇಯಲು ಸಾಕಾಗುವಷ್ಟು ನೀರು ಹಾಕಿ ಚೆನ್ನಾಗಿ ಬೇಯಿಸಬೇಕು.

2. ಮೈದಾಕ್ಕೆ ಚಿಟಿಕೆಯಷ್ಟು ಉಪ್ಪು ಹಾಕಿ, ನೀರು ಚಿಮುಕಿಸುತ್ತಾ ಕಲೆಸಬೇಕು. ಹೀಗೆ ಕಲೆಸುವಾಗ ತುಪ್ಪ ಅಥವಾ ಎಣ್ಣೆ ಸ್ವಲ್ಪ ಸೇರಿಸಿದರೆ ಮಿಶ್ರಣ ಮೃದುವಾಗುವುದು.

3. ಕಲೆಸಿದ ಮೈದಾ ಹಿಟ್ಟನ್ನು 2 ಗಂಟೆ ಕಾಲ ಇಡಬೇಕು.

4. ಈಗ ಬೇಯಿಸಿದ ಬೇಳೆಯಿಂದ ನೀರನ್ನು ಸೋಸಿ, ಬೆಲ್ಲ ಸ್ವಲ್ಪ ಉಪ್ಪು ಹಾಕಿ ಮಿಕ್ಸಿಯಲ್ಲಿ ಗಟ್ಟಿಯಾಗಿ ಅರೆಯಬೇಕು.

5. ಈಗ ಈ ಮಿಶ್ರಣ ಒಣಗುವವರೆಗೆ ಕಡಿಮೆ ಉರಿಯಲ್ಲಿ ಬಾಣಲೆಯಲ್ಲಿ ಹಾಕಿ ಬಿಸಿ ಮಾಡಬೇಕು. ಮಿಶ್ರಣ ಒಣಗಿದಾಗ (ಡ್ರೈ ಆದಾಗ) ಉರಿಯಿಂದ ತೆಗೆದು ಆರಲು ಇಡಬೇಕು. ನಂತರ ಈ ಮಿಶ್ರಣಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ ಮಿಶ್ರ ಮಾಡಬೇಕು.

6. ಈಗ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನು (ಈ ಅಳತೆಯ ಪ್ರಕಾರ 10-12 ಉಂಡೆ ಆಗುತ್ತದೆ) ಮಾಡಬೇಕು.

7. ಈಗ ಮೈದಾ ಹಿಟ್ಟಿನಿಂದ ಚಪಾತಿಗೆ ಕಟ್ಟುವಾಗೆ ಉಂಡೆ ಕಟ್ಟಬೇಕು. ಅದನ್ನು ಚಪಾತಿ ತಟ್ಟುವ ಹಾಗೆ ತಟ್ಟಬೇಕು. ಹೀಗೆ ತಟ್ಟುವಾಗ ತಟ್ಟಲು ಬಳಸಿದ ವೃತ್ತಾಕಾರದ ಪಾತ್ರೆ ಅಥವಾ ಮರದ ಅಲಗೆ ಅಂಟಿ ಹಿಡಿಯದಂತೆ ಪ್ಲಾಸ್ಟಿಕ್ ಹಾಕಿ ಅದರ ಮೇಲೆ ಮೈದಾ ಉಂಡೆಯನ್ನು ಇಟ್ಟು ತಟ್ಟಿ.

8. ಈಗ ಮೈದಾ ಉಂಡೆಯನ್ನು ಚಪಾತಿಗೆ ತಟ್ಟುವ ಹಾಗೆ ತಟ್ಟಿ, ಹೀಗೆ ತಟ್ಟುವಾಗ ಮಧ್ಯ ಭಾಗದಲ್ಲಿ ದಪ್ಪವಾಗಿದ್ದು ಸುತ್ತಲೂ ತೆಳುವಾಗಿರಲಿ. ನಂತರ ಬೇಳೆ ಮತ್ತು ಬೆಲ್ಲದ ಉಂಡೆಯನ್ನು ತಟ್ಟಿದ ಮೈದಾದ ಮಧ್ಯದಲ್ಲಿ ಇಟ್ಟು ಮೈದಾದ ತುದಿಗಳನ್ನು ಮಡಚಿ ಪುನಃ ಮೊದಲಿನಂತೆ ತಟ್ಟಿ.

9. ಈಗ ತವಾವನ್ನು ಉರಿಯಲ್ಲಿಟ್ಟು ಸ್ವಲ್ಪ ಎಣ್ಣೆ ಸವರಿ ಈ ಒಬ್ಬಟ್ಟನ್ನು ತವಾದಲ್ಲಿ ಹಾಕಬೇಕು. ಅದರ ಮೇಲೆ ಕೂಡ ಸ್ವಲ್ಪ ಎಣ್ಣೆ ಹಾಕಬೇಕು. ಸ್ವಲ್ಪ ಬಿಸಿಯಾದಾಗ ಮಗುಚಿ ಹಾಕಬೇಕು. ಒಬ್ಬಟ್ಟು ಬೆಂದಿದೆ ಎಂದಾಗ ಅದನ್ನು ತೆಗೆದು ತಟ್ಟೆಯಲ್ಲಿ ಹಾಕಿ.

ಇಷ್ಟು ಸರಳ ವಿಧಾನವಿರುವಾಗ ಒಬ್ಬಟ್ಟು ಮಾಡಲು ಆತಂಕ ಏಕೆ ಅಲ್ವಾ?

English summary

Easy Hobbattu Recipe | Ugadi Special Recipe | ಒಬ್ಬಟ್ಟು ತಯಾರಿಸುವ ಸರಳ ವಿಧಾನ | ಯುಗಾದಿ ಸ್ಪೆಷೆಲ್ ರೆಸಿಪಿ

Hobbattu must and should be in Ugadi special food. If you are cooking first time for the Ugadi here there are tips to prepare hobattu in a easy and tasty way.
X
Desktop Bottom Promotion