For Quick Alerts
ALLOW NOTIFICATIONS  
For Daily Alerts

ಮಾವಿನ ಹಣ್ಣಿನ ಸಿಹಿ ಹುಳಿ

Posted By:
|

ಹಣ್ಣುಗಳ ರಾಜ ಅಂದರೆ ಮಾವು. ಮಾವಿನ ಹಣ್ಣಿನ ಉಪಯೋಗ ಹತ್ತು ಹಲವು. ಮಾವಿನ ಹಣ್ಣನ್ನ ಇಷ್ಟ ಪಡದೆ ಇರೋರು ಯಾರೂ ಇಲ್ಲ ಅನ್ಸುತ್ತೆ. ಸೀಸನಲ್ ಫ್ರೂಟ್ ಆಗಿರುವ ಮಾವು ಎಲ್ಲರ ಅಚ್ಚುಮೆಚ್ಚಿನ ಹಣ್ಣು.

ಮಾವಿನ ಹಣ್ಣಿನಿಂದ ಹಲವು ರೀತಿಯ ಅಡುಗೆಗಳನ್ನು ಮಾಡಬಹುದು. ಮಾವಿನ ಹಣ್ಣಿನಲ್ಲಿ ಹಲವು ಜಾತಿಗಳಿಗೆ. ಕೆಲವು ಉಪ್ಪಿನಕಾಯಿಗೆ ಚೆನ್ನಾಗಾದರೆ, ಕೆಲವು ಜ್ಯೂಸ್ ಮಾಡುವುದಕ್ಕೆ ಅಧ್ಬುತ, ಇನ್ನೂ ಕೆಲವು ಹಾಗೆಯೆ ಹಣ್ಣು ತಿನ್ನುವುದಕ್ಕೆ ಚೆನ್ನಾಗುತ್ತದೆ.

Mango Fruit Sweet Curry

ಇನ್ನು ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಕ್ಕರೆಗುತ್ತಿ ಮಾವಿನ ಹಣ್ಣುಗಳಿಂದ ಅಧ್ಬುತವಾಗಿ ಸಿಹಿಹುಳಿ ಅಥವಾ ಸಿಹಿ ಸಾಂಬಾರ್ ಮಾಡಬಹುದು. ಕುಂದಾಪುರದ ಮಂದಿ ಕಾಟ್ ಮಾವಿನಹಣ್ಣಿನ ಹುಳಿ ಎಂದು ಕರೆಯುವುದುಂಟು. ಅದಕ್ಕಾಗಿ ಹುಳಿಸಿಹಿಯಾಗಿರುವ ಸಣ್ಣ ಜಾತಿಯ ಮಾವಿನ ಹಣ್ಣನ್ನು ಬಳಕೆ ಮಾಡಲಾಗುತ್ತದೆ. ಹಾಗಾದ್ರೆ ಈ ಅಡುಗೆ ಮಾಡುವುದು ಹೇಗೆ ಎಂಬ ಬಗ್ಗೆ ವಿವರ ಇಲ್ಲಿದೆ ನೋಡಿ.

Mango Fruit Sweet Curry

Mango Fruit Sweet Curry/ ಮಾವಿನ ಹಣ್ಣಿನ ಸಿಹಿ ಹುಳಿ
Mango Fruit Sweet Curry/ ಮಾವಿನ ಹಣ್ಣಿನ ಸಿಹಿ ಹುಳಿ
Prep Time
15 Mins
Cook Time
15M
Total Time
30 Mins

Recipe By: Sushma

Recipe Type: Curry

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ಮಾವಿನ ಹಣ್ಣು - 10

    ತೆಂಗಿನ ಕಾಯಿ - ಅರ್ಧ ಕಡಿ

    ಕಡಲೆಬೇಳೆ- ಒಂದು ಸ್ಪೂನ್

    ಉದ್ದಿನ ಬೇಳೆ- ಅರ್ಧ ಸ್ಪೂನ್

    ಕೊತ್ತುಂಬರಿ ಬೀಜ- ಎರಡು ಸ್ಪೂನ್

    ಜೀರಿಗೆ- ಅರ್ಧ ಸ್ಪೂನ್

    ಮೆಂತೆ- ಕಾಲ್ ಸ್ಪೂನ್

    ಎಳ್ಳು- ಒಂದು ಸ್ಪೂನ್

    ಕೆಂಪು ಮೆಣಸು- ಆರರಿಂದ ಏಳು

    ಬೆಲ್ಲ- 200 ಗ್ರಾಂ

    ಬೇವಿನಸೊಪ್ಪು- 10 ಎಸಳು

    ನೆಲಗಡಲೆ- 20 ಕಾಳುಗಳು

    ಸಾಸಿವೆಕಾಳು- ಅರ್ಧ ಸ್ಪೂನ್

    ಅಡುಗೆ ಎಣ್ಣೆ- ನಾಲ್ಕರಿಂದ ಐದು ಸ್ಪೂನ್

    ಉಪ್ಪು- ರುಚಿಗೆ ತಕ್ಕಷ್ಟು

Red Rice Kanda Poha
How to Prepare
  • ಮಾಡುವ ವಿಧಾನ-

    . ಮಾವಿನ ಹಣ್ಣಿನ ಸಿಪ್ಪೆ ತೆಗೆದು ಅದರ ರಸ ಮತ್ತು ಗೊರಟನ್ನು ಸಾಂಬಾರಿಗೆ ಬಳಸಲು ಶೋಧಿಸಿ ಬೇರ್ಪಡಿಸಿಕೊಳ್ಳಿ.

    . ಎರಡು ಸ್ಪೂನ್ ಅಡುಗೆ ಎಣ್ಣೆ ಹಾಕಿ ಅದಕ್ಕೆ ಮೆಂತ್ಯೆ ಕಾಳು ಹಾಕಿ ಹುರಿಯಿರಿ. ಕೆಂಬಣ್ಣಕ್ಕೆ ಬಂದಾಗ ಉದ್ದಿನಬೇಳೆ, ಕಡಲೆಬೇಳೆ ಹಾಕಿ ಹುರಿಯಿರಿ. ನಂತರ ಕೊತ್ತುಂಬರಿ ಬೀಜ, ಜೀರಿಗೆ, ಎಳ್ಳು ಹಾಕಿ ಹುರಿದು ಕೆಂಪು ಮೆಣಸನ್ನು ಹಾಕಿ ಹುರಿದುಕೊಳ್ಳಿ.

    . ಹುರಿದ ಮಿಶ್ರಣವನ್ನು ತೆಂಗಿನಕಾಯಿ ಜೊತೆ ಹಾಕಿ ಮಿಕ್ಸಿ ಮಾಡಿಕೊಳ್ಳಿ.

    . ಮಾವಿನ ಹಣ್ಣಿನ ರಸ ಮತ್ತು ಗೊರಟನ್ನು ರುಚಿಗೆ ತಕ್ಕಷ್ಟು ಉಪ್ಪು,ಬೆಲ್ಲ ಹಾಕಿ ಬೇಯಿಸಿ.

    . ಬೆಂದ ನಂತರ ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ ಕುದಿಸಿ.

    . ಒಲೆಯಿಂದ ಇಳಿಸಿ ಈಗ ಒಗ್ಗರಣೆ ಮಾಡಬೇಕು. ಒಗ್ಗರಣೆಗೆ ಒಂದೆರಡು ಸ್ಪೂ‌ನ್ ಎಣ್ಣೆ ಹಾಕಿ ನೆಲಗಡಲೆ ಬೀಜವನ್ನು ಹುರಿಯಿರಿ. ನಂತರ ಸಾಸಿವೆ ಕಾಳು ಹಾಕಿ ಚಟಿಪಟಿ ಅಂದ ನಂತರ ಕರಿಬೇವಿನ ಸೊಪ್ಪು, ಒಂದು ಕೆಂಪು ಮೆಣಸನ್ನು ಹಾಕಿ

    ಒಗ್ಗರಣೆ ಮಾಡಿದರೆ ಮಾವಿನ ಹಣ್ಣಿನ ಸಿಹಿ ಹುಳಿ ಸಿದ್ಧ.

    . ಅನ್ನದ ಜೊತೆ ಕೊಬ್ಬರಿ ಎಣ್ಣೆ ಹಾಕಿ ಕಲಸಿ, ಹಸಿ ಈರುಳ್ಳಿ ಕಚ್ಚಿ ಸವಿಯಲು ಬೊಂಬಾಟ್ ಆಗಿರುತ್ತದೆ. ನೀರು ದೋಸೆಗೂ ಕೂಡ ಇದು ಅದ್ಭುತ ಕಾಂಬಿನೇಷನ್.

Instructions
  • ಇದು ಚೆನ್ನಾಗಿ ಕುದಿಸಿದರೆ ಎರಡು ದಿನ ಹಾಳಾಗದೆ ಉಳಿಯುವ ರೆಸಿಪಿ. ಫ್ರಿಡ್ಜ್ ನಲ್ಲಾದರೆ 15 ದಿನ ಇಟ್ಟು ಕೊಳ್ಳಬಹುದು. ಈ ರೆಸಿಪಿ ಸೇವಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಮಾವಿನ ಹಣ್ಣಿನಿಂದ ಸಿಗುವ ಎಲ್ಲಾ ಪೋಷಕಾಂಶಗಳು ನಿಮಗೆ‌ ಲಭ್ಯ.
Nutritional Information
  • ಕ್ಯಾಲೊರಿ - 99 G
  • ಕೊಬ್ಬಿನಾಂಶ - 0.63g
  • ಪ್ರೊಟೀನ್ - 1.35 g
  • ಕಾರ್ಬೋಹೈಡ್ರೇಟ್ - 24.7 g
  • ಸಕ್ಕರೆ - 22.5 g
[ 4 of 5 - 47 Users]
X
Desktop Bottom Promotion