For Quick Alerts
ALLOW NOTIFICATIONS  
For Daily Alerts

ಕ್ರಿಸ್ಮಸ್‌ ಕೇಕ್ ರೆಸಿಪಿ: ಮಧುಮೇಹ ಇರುವವರಿಗಾಗಿ ಈ ಶುಗರ್‌ ಫ್ರೀ ಕೇಕ್‌

Posted By:
|

ಕ್ರಿಸ್ಮಸ್‌ಗೆ ಕೇಕ್ ಮಾಡುವ ತಯಾರಿಯಲ್ಲಿದ್ದೀರಾ? ಮನೆಯಲ್ಲಿ ಯಾರಾದರೂ ಡಯಾಬಿಟಿಕ್ ಸದಸ್ಯರಿದ್ದರೆ ಅವರಿಗಾಗಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ ಅವರಿಗೂ ಒಂದು ಕೇಕ್‌ ಮಾಡಿಬಿಡಿ, ಅಂದ್ರೆ ಅವರಿಗೆ ಶುಗರ್‌ಲೆಸ್‌ ಕೇಕ್ ಮಾಡಿ, ಅವರೂ ಕೇಕ್‌ ಸವಿಯುತ್ತಾ ಕ್ರಿಸ್ಮಸ್ ಆನಂದಿಸಲಿ. ನೀವು ಶುಗರ್‌ ಲೆಸ್‌ ಆಗಿಯೂ ಕೇಕ್‌ ಮಾಡಬಹುದು, ಅಲ್ಲದೆ ಇದರಲ್ಲಿ ಡ್ರೈಫ್ರೂಟ್ಸ್ ಬಳಸಿ ಮಾಡುವುದರಿಂದ ಒಳ್ಳೆಯ ಪೋಷಕಾಂಶವಿರುವ ಕೇಕ್‌ ಇದಾಗಿದೆ.

Chritsmas Recipe

ಈ ಕೇಕ್‌ ಅನ್ನು ಇಲ್ಲಿ ಮೈಕ್ರೋವೇವ್‌ ರೆಸಿಪಿ ನೀಡಲಾಗಿದೆ, ಇದನ್ನು ನೀವು ಕುಕ್ಕರ್‌ನಲ್ಲಿಯೂ ತಯಾರಿಸಬಹುದು, ಕುಕ್ಕರ್‌ನಲ್ಲಿ ಹೇಗೆ ನೀವು ಹೇಗೆ ಇತರ ಕೇಕ್‌ ತಯಾರಿಸುತ್ತೀರೋ ಹಾಗೇ ತಯಾರಿಸಬಹುದು, ಕುಕ್ಕರ್‌ನಲ್ಲಿ ಸ್ಟೌವ್‌ ಕಡಿಮೆ ಉರಿಯಲ್ಲಿಟ್ಟು 20 ನಿಮಿಷ ಬೇಯಿಸಿ, ಇನ್ನೂ ಬೇಯಬೇಕು ಎಂದಾದರೆ ಮತ್ತೂ 5-10 ನಿಮಿಷ ಇಡಿ. ಈಗ ನಾವು ಮಧುಮೇಹಿಗಳು ತಿನ್ನಬಹುದಾದ ಕೇಕ್‌ ರೆಸಿಪಿ ತಿಳಿಯೋಣ:

Sugar Free Cake Recipe, ಶುಗರ್‌ ಫ್ರೀ ಕೇಕ್‌
Sugar Free Cake Recipe, ಶುಗರ್‌ ಫ್ರೀ ಕೇಕ್‌
Prep Time
30 Mins
Cook Time
1H0M
Total Time
1 Hours30 Mins

Recipe By: Reena TK

Recipe Type: Cake

Serves: 5

Ingredients
  • ಬೇಕಾಗುವ ಸಾಮಗ್ರಿ

    * 2 ಕಪ್ ಒಣದ್ರಾಕ್ಷಿ

    * 3 ಕಪ್‌ ನೀರು

    * 2 ಕಪ್‌ ಮೈದಾ ಹಿಟ್ಟು

    * 2 ಮೊಟ್ಟೆ

    * 3 ಟೇಬಲ್‌ಸ್ಪೂನ್ ಲಿಕ್ವಿಡ್ ಸ್ವೀಟನರ್‌

    * 3/4 ಕಪ್ ವೆಜೆಟೇಬಲ್ ಆಯಿಲ್‌

    * 1 ಚಮಚ ವೆನಿಲ್ಲಾ ರಸ

    * 1 ಚಮಚ ಬೇಕಿಂಗ್‌ ಸೋಡಾ

    * 1/2 ಚಮಚ ಉಪ್ಪು

    * ಒಂದೂವರೆ ಚಮಚ ಚಕ್ಕೆ ಪುಡಿ

    * 1/2 ಚಮಚ ನಟ್‌ಮಗ್‌ ಪುಡಿ

    * ಕಪ್‌ ವಾಲ್ನಟ್‌ (ಕತ್ತರಿಸಿದ್ದು)

    * 1 ಕಪ್‌ ಸಿಹಿರಹಿತ ಆ್ಯಪಲ್ ಸಾಸ್‌

Red Rice Kanda Poha
How to Prepare
  • ಮಾಡುವುದು ಹೇಗೆ?

    ಸ್ಟೆಪ್ 1

    ಒಂದು ಸಾಸ್‌ ಪ್ಯಾನ್‌ಗೆ ದ್ರಾಕ್ಷಿ ಮತ್ತು ನೀರು ಹಾಕಿ ಕುದಿಸಿ, ದ್ರಾಕ್ಷಿ, ನೀರನ್ನು ಸಂಪೂರ್ಣವಾಗಿ ಹೀರಿಕೊಳ್ಳುವವರೆಗೆ ಕುದಿಸಿ, ನಂತರ ತಣ್ಣಗಾಗಲು ಬಿಡಿ.

    ಸ್ಟೆಪ್‌ 2

    ಮೊಟ್ಟೆ, ಆ್ಯಪಲ್ ಸಾಸ್, ವೆಜೆಟೇಬಲ್ ಆಯಿಲ್, ವೆನಿಲ್ಲಾ, ಲಿಕ್ವಿಡ್ ಸ್ವೀಟನರ್‌ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಈಗ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಉಪ್ಪು, ಚಕ್ಕೆ, ನಟ್‌ಮಗ್ ಪುಡಿ ಮಿಕ್ಸ್ ಮಾಡಿ, ಬೀಟರ್‌ ಬಳಸಿ ಮಿಕ್ಸ್ ಮಾಡಿ, ನಂತರ ಬೇಯಿಸಿದ ಒಣದ್ರಾಕ್ಷಿ, ಕತ್ತರಿಸಿದ ನಟ್ಸ್ ಹಾಕಿ ಮಿಕ್ಸ್ ಮಾಡಿ.

    * ಈ ಮಿಕ್ಸಿಂಗ್‌ ಮಾಡುವಾಗಲೇ ಓವನ್‌ ಅನ್ನು 350 ಡಿಗ್ರಿ (175 ಡಿಗ್ರಿ C)ಗೆ ಬಿಸಿ ಮಾಡಿ ಕೇಕ್‌ನ ಸುರಿಯುವ ಪ್ಯಾನ್‌ಗೆ ಎಣ್ಣೆ ಸವರಿ ಇಡಿ.

    ಸ್ಟೆಪ್ 3

    * ಈಗ ಕೇಕ್‌ ಮಿಶ್ರಣವನ್ನು ಸುರಿದು 1 ಗಂಟೆ ಬೇಯಿಸಿದರೆ ಸುಗರ್‌ಲೆಸ್‌ ಕೇಕ್‌ ರೆಡಿ.

Instructions
  • ನೀವು ಈ ಕೇಕ್‌ ಮಾಡುವಾಗ ನಿಮಗೆ ಇಷ್ಟವಾದ ನಟ್ಸ್ ಬಳಸಬಹುದು
Nutritional Information
  • ಸರ್ವ್ - 5
  • ಕ್ಯಾಲೋರಿ - 373 ಕ್ಯಾ
  • ಕೊಬ್ಬು - 21.3g
  • ಪ್ರೊಟೀನ್ - 5.5g
  • ಕಾರ್ಬ್ಸ್ - 43.1g
[ 4 of 5 - 67 Users]
X
Desktop Bottom Promotion