For Quick Alerts
ALLOW NOTIFICATIONS  
For Daily Alerts

ಈ ಕಬಾಬ್ ರೆಸಿಪಿ ತುಂಬಾ ಸರಳ, ಟೇಸ್ಟ್ ಸೂಪರ್!

Posted By:
|

ಲಾಕ್‌ಡೌನ್‌ ಮುಂದುವರೆದಿದೆ, ಜನರಿಗೆ ಮನೆಯಲ್ಲಿ ಕೂತು ಬೇಜಾರಾಗಿದೆ. ಏನಾದರೂ ರುಚಿಕರ ತಿನ್ನೋಣ ಅಂದ್ರೆ ಹೋಟೆಲ್‌ಗಳು ಬಂದ್‌. ಆನ್‌ಲೈನ್‌ ಫುಡ್‌ ಡೆಲಿವರಿ ಇದ್ದರೂ ಹೊರಗಡೆಯಿಂದ ಫುಡ್‌ ತರಿಸಿ ತಿನ್ನಕ್ಕೂ ಭಯ. ದಿನಸಿ ಸಾಮಾನುಗಳು, ಚಿಕನ್‌ ಕೆಲವಡೆ ಮೀನು ದೊರೆಯುತ್ತಿವೆ.

easy chicken Kabab recipe

ನಾಳೆ ಈಸ್ಟರ್ ಹಬ್ಬದ ಆಚರಣೆ ಇದೆ. ಈಸ್ಟರ್‌ ಹಬ್ಬದಂದು ಅನೇಕ ರುಚಿಯ ತಿನಿಸುಗಳನ್ನು ಮಾಡಲಾಗುವುದು. ಈ ಬಾರಿ ಹೆಚ್ಚಿನ ಸಂಭ್ರಮ ಇಲ್ಲದಿದ್ದರೂ ಸರಳವಾಗಿ ಮನೆಯಲ್ಲಿಯೇ ಆಚರಿಸಬಹುದು. ಇಲ್ಲಿ ನಾವು ಚಿಕನ್‌ ಬಳಸಿ ಮಾಡುವ ಸರಳವಾದ ಆದರೆ ರುಚಿಕರವಾದ ಕಬಾಬ್‌ ರೆಸಿಪಿ ನೀಡಿದ್ದೇವೆ.

ಇನ್ನು ಅಡುಗೆ ಮಾಡಲು ಬರಲ್ಲ ಅನ್ನುವವರು ಕೂಡ ಈ ಚಿಕನ್ ರೆಸಿಪಿ ಟ್ರೈ ಮಾಡಿ ಸವಿಯಬಹುದು, ಅಷ್ಟೊಂದು ಸರಳವಾಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Spicy Chicken Kabab Recipe, ತುಂಬಾ ಸರಳವಾಗಿದೆ ಈ ಚಿಕನ್ ಕಬಾಬ್ ರೆಸಿಪಿ
Chicken Kabab Recipe, ಚಿಕನ್ ಕಬಾಬ್ ರೆಸಿಪಿ
Prep Time
30 Mins
Cook Time
20M
Total Time
50 Mins

Recipe By: Reena TK

Recipe Type: Nonveg

Serves: 4

Ingredients
  • ಬೇಕಾಗುವ ಸಾಮಗ್ರಿ

    ಚಿಕನ್ 1/2 ಕೆಜಿ

    ಜೀರಿಗೆ ಪುಡಿ 1 ಚಮಚ

    3-4 ಬೆಳ್ಳುಳ್ಳಿ , ಒಂದು ಚಿಕ್ಕ ಈರುಳ್ಳಿ, ಸ್ವಲ್ಪ ಶುಂಠಿ, 3 ಹಸಿ ಮೆಣಸಿನಕಾಯಿ (ಪೇಸ್ಟ್ ಮಾಡಿ)

    ಅರ್ಧ ಚಮಚ ಖಾರದ ಪುಡಿ

    ಅರ್ಧ ಚಮಚ ಕೊತ್ತಂಬರಿ ಪುಡಿ

    ಅರ್ಧ ಚಮಚ ಜೋಳದ ಹಿಟ್ಟು

    ಚಿಟಿಕೆಯಷ್ಟು ಅರಿಶಿಣ ಪುಡಿ

    1 ಮೊಟ್ಟೆಯ ಬಿಳಿ

    ಉಪ್ಪು

    1 ಕಪ್ ಎಣ್ಣೆ

Red Rice Kanda Poha
How to Prepare
  • ಮಾಡುವ ವಿಧಾನ:

    * ಚಿಕನ್‌ ಚೆನ್ನಾಗಿ ತೊಳೆದು ಅದನ್ನು ನೀರು ಸೋಸಿ ಹೋಗುವ ಪಾತ್ರೆಯಲ್ಲಿ ಹಾಕಿಡಿ.

    * ಒಂದು ಬೌಲ್‌ಗೆ ಮಸಾಲೆ ಪೇಸ್ಟ್, ಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಸಿಣ ಪುಡಿ, ಉಪ್ಪು, ಜೋಳದ ಹಿಟ್ಟು ಹಾಕಿ, ಮೊಟ್ಟೆಯ ಬಿಳಿ ಹಾಕಿ ಮಿಶ್ರ ಮಾಡಿ.

    * ಈಗ ಚಿಕನ್‌ ಅನ್ನು ಮಸಾಲೆಗೆ ಹಾಕಿ ಮಿಶ್ರ ಮಾಡಿ ಫ್ರಿಡ್ಜ್‌ನಲ್ಲಿ ಎರಡು ಗಂಟೆ ಇಡಿ.

    * ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾಯುವಾಗ ಅದರಲ್ಲಿ ಹಾಕಿ ಚಿಕನ್‌ ಬೆಂದ ಮೇಲೆ ತೆಗೆದು, ಅದನ್ನು ಒಂದು ತಟ್ಟೆಯಲ್ಲಿ ಹಾಕಿ ಸ್ವಲ್ಪ ನಿಂಬೆರಸ ಹಿಂಡಿದರೆ ರುಚಿಕರವಾದ ಕಬಾಬ್ ರೆಡಿ.

Instructions
  • ಅಡುಗೆ ಬರಲ್ಲ ಅನ್ನುವವರು ಕೂಡ ಟ್ರೈ ಮಾಡಬಹುದು.
Nutritional Information
  • ಕ್ಯಾಲೋರಿ - 34.3ಕ್ಯಾ.
  • ಪ್ರೊಟೀನ್ - 6.4
[ 3.5 of 5 - 23 Users]
X
Desktop Bottom Promotion