For Quick Alerts
ALLOW NOTIFICATIONS  
For Daily Alerts

ಶಿವರಾತ್ರಿ ವ್ರತಕ್ಕಾಗಿ ವಿಶೇಷ ರೆಸಿಪಿ: ಬಾಳೆಹಣ್ಣಿನ ಸಲಾಡ್

ಶಿವರಾತ್ರಿಯಂದು ವ್ರತವಿರಿಸುವ ಭಕ್ತರು ಕೆಲವು ಆಹಾರಗಳನ್ನು ಮಾತ್ರ ಸೇವಿಸುತ್ತಾರೆ.ಈ ಮಿತಿಯೊಳಗೆ ಬರುವ ಆಹಾರವೆಂದರೆ ಬಾಳೆಹಣ್ಣು. ಬಾಳೆಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಇದನ್ನು ಸಲಾಡ್ ರೂಪದಲ್ಲಿ ಸೇವಿಸುವುದೇ ಉತ್ತಮ

By Manu
|

ಭಾರತದ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಪ್ರತಿ ರಾಜ್ಯದಲ್ಲಿಯೂ ಭಿನ್ನವಾಗಿ ಆಚರಿಸಲ್ಪಡುತ್ತದೆ. ಆಚರಣೆಯ ವಿಧಾನಗಳಲ್ಲಿ ಕೊಂಚ ಬದಲಾವಣೆ ಇದ್ದರೂ ಮೂಲವಿಧಾನ ಮಾತ್ರ ಒಂದೇ ಆಗಿದೆ. ಅದೆಂದರೆ ಉಪವಾಸ ಆಚರಣೆ ಮತ್ತು ಶಿವನ ಆರಾಧನೆ.

ಶಿವರಾತ್ರಿಯಂದು ವ್ರತವಿರಿಸುವ ಭಕ್ತರು ಕೆಲವು ಆಹಾರಗಳನ್ನು ಮಾತ್ರ ಸೇವಿಸುವ ಕಟ್ಟುಪಾಡು ಆಚರಿಸಬೇಕಾಗುತ್ತದೆ. ಈ ಮಿತಿಯೊಳಗೆ ಬರುವ ಆಹಾರವೆಂದರೆ ಬಾಳೆಹಣ್ಣು. ಉಪವಾಸದ ಅವಧಿಯಲ್ಲಿ ಬಾಳೆಹಣ್ಣನ್ನು ಸೇವಿಸುವ ಮೂಲಕ ಆಹಾರವಿಲ್ಲದ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ. ಮಹಾಶಿವರಾತ್ರಿಗೆ 5 ಸ್ಪೆಷೆಲ್ ರೆಸಿಪಿ

ಬಾಳೆಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಇದನ್ನು ಸಲಾಡ್ ರೂಪದಲ್ಲಿ ಸೇವಿಸುವುದೇ ಉತ್ತಮ. ಬನ್ನಿ, ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಹಾಗೂ ಕೆಲವೇ ಸಾಮಾಗ್ರಿಗಳು ಬೇಕಾಗುವ ಈ ಸಲಾಡ್ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ....

ಪ್ರಮಾಣ

ಪ್ರಮಾಣ

*ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು

*ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಬಾಳೆಹಣ್ಣು - 2 (ಚಿಕ್ಕದಾಗಿ ತುಂಡರಿಸಿದ್ದು)

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಪುದೀನಾ ಎಲೆಗಳು - ¼ ಕಪ್

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಮೊಸರು - ¾ಕಪ್ (ಚಮಚದಲ್ಲಿ ಕಡೆದದ್ದು)

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಸಕ್ಕರೆ - 2 ಚಿಕ್ಕ ಚಮಚ

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಉಪ್ಪು - ರುಚಿಗನುಸಾರ

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಕಾಳುಮೆಣಸಿನ ಅಥವಾ ಕರಿಮೆಣಸಿನ ಪುಡಿ - ರುಚಿಗನುಸಾರ

ಅಗತ್ಯವಿರುವ ಸಾಮಾಗ್ರಿಗಳು....

ಅಗತ್ಯವಿರುವ ಸಾಮಾಗ್ರಿಗಳು....

ಲಿಂಬೆ ರಸ - ಕೆಲವು ಹನಿಗಳು

ಅಗತ್ಯವಿರುವ ಸಾಮಾಗ್ರಿಗಳು....

ಅಗತ್ಯವಿರುವ ಸಾಮಾಗ್ರಿಗಳು....

ಸೌತೆ ಕಾಯಿ - ½ ಕಪ್ (ಕೊಂಚ ದೊಡ್ಡ ತುಂಡುಗಳಾಗಿಸಿದ್ದು)

ಅಗತ್ಯವಿರುವ ಸಾಮಾಗ್ರಿಗಳು....

ಅಗತ್ಯವಿರುವ ಸಾಮಾಗ್ರಿಗಳು....

ಶೇಂಗಾಬೀಜ- 1 ದೊಡ್ಡಚಮಚ (ಚೆನ್ನಾಗಿ ಹುರಿದು ಚಿಕ್ಕ ತುಂಡುಗಳನ್ನಾಗಿಸಿದ್ದು)

ಅಗತ್ಯವಿರುವ ಸಾಮಾಗ್ರಿಗಳು....

ಅಗತ್ಯವಿರುವ ಸಾಮಾಗ್ರಿಗಳು....

ಸಬ್ಬಸಿಗೆ ಸೊಪ್ಪು - ½ ದೊಡ್ಡ ಚಮಚ (ಚಿಕ್ಕದಾಗಿ ಹೆಚ್ಚಿದ್ದು)

ವಿಧಾನ

ವಿಧಾನ

1. ಮೊದಲು ಮೊಸರನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಇದಕ್ಕೆ ಪುದೀನಾ ಎಲೆಗಳು, ಸಕ್ಕರೆ, ಉಪ್ಪು, ಕಾಳುಮೆಣಸು ಹಾಕಿ ಮಿಶ್ರಣ ಮಾಡಿ, ಪಕ್ಕಕ್ಕಿಡಿ.

2. ಈಗ ಇನ್ನೊಂದು ಪಾತ್ರೆಯಲ್ಲಿ ಬಾಳೆಹಣ್ಣು ಹಾಕಿ ಲಿಂಬೆರಸ ಸೇರಿಸಿ.

ವಿಧಾನ

ವಿಧಾನ

3. ಇದಕ್ಕೆ ಸೌತೆ, ಉಪ್ಪು, ಶೇಂಗಾ ಮತ್ತು ಸಬ್ಬಸಿಗೆ ಸೊಪ್ಪು ಸೇರಿಸಿ. ಬಳಿಕ ಮೊದಲ ಪಾತ್ರೆಯಲ್ಲಿದ್ದ ಮೊಸರನ್ನು ಸೇರಿಸಿ.

4. ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಬೆರಕೆಯಾಗುವಂತೆ ಚಿಮ್ಮಿಸಿ ಮಿಶ್ರಣಮಾಡಿ.

ಸವಿಯಾದ ಬಾಳೆಹಣ್ಣಿನ ಸಾಲಾಡ್ ಸಿದ್ಧ!

ಸವಿಯಾದ ಬಾಳೆಹಣ್ಣಿನ ಸಾಲಾಡ್ ಸಿದ್ಧ!

ಅಷ್ಟೇ, ನಿಮ್ಮ ಸವಿಯಾದ ಬಾಳೆಹಣ್ಣಿನ ಸಾಲಾಡ್ ಸಿದ್ಧ. ಈ ಶಿವರಾತ್ರಿಯಂದು ನಿಮ್ಮ ಉಪವಾಸದ ಸಮಯದಲ್ಲಿ ಹೆಚ್ಚು ಕಾಲ ಹಸಿವಾಗದೇ ನಿಮ್ಮ ಮನ ಪೂರ್ಣವಾಗಿ ಭಕ್ತಿಪರವಶಗೊಳ್ಳಲು ನೆರವಾಗಲು ಈ ಸಾಲಾಡ್ ಖಂಡಿತಾ ನೆರವಾಗುತ್ತದೆ.

English summary

Shivratri Vrat Recipe: Banana Salad

Banana is one such fruit that can provide you ample energy during your fasting period. Today, we shall be sharing with you this easy banana salad recipe that would not take much time in preparation.
X
Desktop Bottom Promotion