For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ಉಪಹಾರಕ್ಕೆ ರುಚಿಕರ ಮೆಂತೆ ಸೊಪ್ಪಿನ ಇಡ್ಲಿ ರೆಸಿಪಿ

|

ಬೆಳಗ್ಗಿನ ಉಪಹಾರ ನಮ್ಮ ದೈನಂದಿನ ಚಟುವಟಿಕೆಗೆ ಅತೀ ಅವಶ್ಯಕ. ಬೆಳಗ್ಗಿನ ಉಪಹಾರವನ್ನು ತ್ಯಜಿಸುವುದು ಹಲವಾರು ರೋಗಗಳನ್ನು ಆಹ್ವಾನಿಸಿದಂತೆ. ಇದರಿಂದ ನಿತ್ರಾಣ, ಕೊಬ್ಬು, ಹೀಗೆ ಅನೇಕ ಶರೀರ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಹಿತಮಿತವಾದ ಬೆಳಗ್ಗಿನ ಉಪಹಾರದ ಸಮಾರಾಧನೆ ಹೊಟ್ಟೆಗೆ ಆಗಲೇಬೇಕು.

ಬೆಳಗ್ಗಿನ ಉಪಹಾರ ಎಂದಿನಂತೆ ಮಾಮೂಲಾಗಿದ್ದರೆ ಅದನ್ನು ತಿನ್ನಲು ಏನೋ ಬೇಜಾರು ಉಂಟಾಗುತ್ತದೆ. ಅದರ ಬದಲಾಗಿ ಅದಕ್ಕೆ ಇನ್ನೊಂದಿಷ್ಟು ರುಚಿ ಸೇರಿಸಿದರೆ ಅದರ ಮಜವೇ ಬೇರೆ!

Methi Idli Recipe For Breakfast

ನಾವು ದೈನಂದಿನ ಉಪಹಾರದಲ್ಲಿ ಮಾಡುವ ದೋಸೆ, ಇಡ್ಲಿ, ಚಿತ್ರಾನ್ನ, ಗೊಜ್ಜನ್ನ, ಹೀಗೆ ಪ್ರತಿಯೊಂದಕ್ಕೂ ವೈವಿಧ್ಯಮಯವಾಗಿ ಮಾಡಿದರೆ ನೋಡಲೂ ಚಂದ ತಿನ್ನಲೂ ಆನಂದ.ಅದಕ್ಕಾಗಿ ನಾವಿಂದು ಹೊಸ ತೆರನಾದ ರುಚಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ, ಅದುವೇ ಮೆಂತೆ ಸೊಪ್ಪಿನ ಇಡ್ಲಿ. ಈ ಇಡ್ಲಿ ಮಾಡುವ ವಿಧಾನ ಹೀಗಿದೆ ಮತ್ತು ಖಂಡಿತ ಇದನ್ನು ಮಾಡಿ ಸವಿಯಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೊಳಕೆ ಬರಿಸಿದ ಹೆಸರುಕಾಳಿನ ಸಲಾಡ್

ಪ್ರಮಾಣ: 4 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆ ಮಾಡುವ ಸಮಯ: 25 ನಿಮಿಷಗಳು

ಸಾಮಾಗ್ರಿಗಳು
* ಅಕ್ಕಿ - 1 ಕಪ್
*ತೆಂಗಿನ ತುರಿ - 1 ಕಪ್
*ಮೆಂತೆ ಸೊಪ್ಪು - 1 ಕಟ್ಟು (ಸಣ್ಣಗೆ ಕತ್ತರಿಸಿದ್ದು)
*ಮೊಸರು - 4 ಟೇಸ್ಪೂನ್
*ಬೆಲ್ಲ - 3ಟೇಸ್ಪೂನ್
*ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
1.ಮೊದಲು ಅಕ್ಕಿಯನ್ನು 6 ಗಂಟೆಗಳವರೆಗೆ ನೆನೆಸಿಡಿ. ರಾತ್ರಿ ನೆನೆಸಿಟ್ಟು ಮರುದಿನ ಬೆಳಗ್ಗೆ ಅಕ್ಕಿಯನ್ನು ಕಡೆದರೂ ಉತ್ತಮ.

2.ಪಾತ್ರೆಯಲ್ಲಿ, ಮೊಸರು ಹಾಗೂ ಮೆಂತೆ ಸೊಪ್ಪನ್ನು ನೆನೆಸಿಡಿ. ಸೌಟನ್ನು ಬಳಸಿಕೊಂಡು ಎರಡನ್ನೂ ಚೆನ್ನಾಗಿ ಮಿಶ್ರ ಮಾಡಿ. ಚಪ್ಪಟೆ ಸೌಟಿನಲ್ಲಿ ಎರಡನ್ನೂ ಮಿಶ್ರ ಮಾಡಿಕೊಂಡ ನಂತರ ಇದನ್ನು 6 ಗಂಟೆಗಳವರೆಗೆ ನೆನೆಸಿಡಿ.

3.ಇದೇ ಸಮಯದಲ್ಲಿ ತುರಿದ ತೆಂಗಿನಕಾಯಿ ಹಾಗೂ ನೆನೆಸಿಟ್ಟ ಮೆಂತೆ ಸೊಪ್ಪನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ನಂತರ ಹಿಟ್ಟನ್ನು ಖಾಲಿ ಪಾತ್ರೆಯಲ್ಲಿ ತೆಗೆದಿಡಿ.

4.ಈಗ ನೆನೆಸಿಟ್ಟ ಅಕ್ಕಿಯನ್ನು ರುಬ್ಬಿಕೊಳ್ಳಿ. ನಂತರ ಈ ರುಬ್ಬಿದ ಹಿಟ್ಟಿಗೆ ರುಬ್ಬಿದ ತೆಂಗಿನ ತುರಿಯನ್ನು ಮಿಶ್ರ ಮಾಡಿಕೊಳ್ಳಿ ನಂತರ ಸೌಟಿನಲ್ಲಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

5.ಈ ಮಿಶ್ರಣಕ್ಕೆ ಬೆಲ್ಲವನ್ನು ಹಾಕಿ.

6.ಹಿಟ್ಟನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಹಿಟ್ಟು ದಪ್ಪಗಿರಲಿ. ಹಿಟ್ಟು ಸಿದ್ಧಗೊಂಡ ನಂತರ ರಾತ್ರಿ ಅದನ್ನು ಹುಳಿ ಬರಲು ತೆಗೆದಿಡಿ.

7.ಮರುದಿನ, ಇಡ್ಲಿ ಹಿಟ್ಟಿಗೆ ಉಪ್ಪು ಸೇರಿಸಿ. ಈಗ ಅಚ್ಚಿನಲ್ಲಿ ಹಿಟ್ಟನ್ನು ಹಾಕಿ.

8.ಇಡ್ಲಿ ಸ್ಟೀಮರ್‌ನಲ್ಲಿ ಮೆಂತೆ ಇಡ್ಲಿಗಳನ್ನು ಬೇಯಿಸಿ 10 ನಿಮಿಷಗಳವರೆಗೆ ಬೇಯಲಿ. ಹಬೆ ಆರಿದ ನಂತರ, ಸ್ಟೀಮರ್ ತೆರೆಯಿರಿ ಸೌಟನ್ನು ಬಳಸಿ ಇಡ್ಲಿಗಳನ್ನು ಹೊರತೆಗೆಯಿರಿ.

ನಿಮ್ಮ ಮೆಂತೆ ಇಡ್ಲಿ ತಿನ್ನಲು ರೆಡಿಯಾಗಿದೆ. ತೆಂಗಿನ ತುರಿ ಚಟ್ನಿ ಅಥವಾ ಬೆಳ್ಳುಳ್ಳಿ ಚಟ್ನಿಯೊಂದಿಗೆ ಮೆಂತೆ ಇಡ್ಲಿಗಳನ್ನು ಸವಿಯಿರಿ.

English summary

Methi Idli Recipe For Breakfast

Have you heard of methi idlis before? In the south of Karnataka, these methi idlis are very famous and loved by children of all age group. They are not just delicious but also a feast to the eyes.
Story first published: Monday, January 20, 2014, 16:43 [IST]
X
Desktop Bottom Promotion