For Quick Alerts
ALLOW NOTIFICATIONS  
For Daily Alerts

ಆಹಾ, ಚಿಲ್ಲಿ ಗೋಬಿ ಡ್ರೈ ರೆಸಿಪಿ-ಸ್ವರ್ಗಕ್ಕೆ ಮೂರೇ ಗೇಣು!

|

ಸಾಮಾನ್ಯವಾಗಿ ಸಂಜೆಯ ಸಮಯದಲ್ಲಿ ಚಹಾ ಅಥವಾ ಕಾಫಿಯೊಂದಿಗೆ ಕುರುಕಲು ಮೆಲ್ಲವುದು ಸರ್ವೇ ಸಾಮಾನ್ಯ. ಅದರಲ್ಲೂ ಮನೆಯಲ್ಲೇ ಮಾಡಿರುವ ಕುರುಕಲು ತಿಂಡಿಗಳು ಆರೋಗ್ಯಕ್ಕೆ ಸಂಚಕಾರ ಉಂಟು ಮಾಡದೇ, ದೇಹದ ತೂಕವನ್ನು ಕೂಡ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಅಂಗಡಿಯ ಎಣ್ಣೆ ಕುರುಕಲುಗಿಂತ ಮನೆಯಲ್ಲೇ ತಯಾರಿಸಬಹುದಾದ ತಿಂಡಿಯನ್ನು ಸವಿಯುವ ಸುಖವೇ ಬೇರೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡಿರುವ ಅತಿ ಸರಳ ಮತ್ತು ರುಚಿಕರವಾದ ಗೋಬಿ ಚಿಲ್ಲಿ ಡ್ರೈ ರೆಸಿಪಿಯ ಕಡೆಗೆ ನಿಮ್ಮ ಒಲವು ಹರಿಯಲಿ.

ಹೌದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಸ್ವಾದಿಷ್ಟ ಕುರುಕಲು ಅಸಾಮಾನ್ಯ ರುಚಿಯ ರಸಗವಳವನ್ನು ನೀಡುತ್ತದೆ. ಬನ್ನಿ ಅತಿ ಸುಲಭವಾಗಿ ತಯಾರಿಸಬಹುದಾದ ಈ ಚಿಲ್ಲಿ ಗೋಬಿ ಡ್ರೈ ಯನ್ನು ರೆಸಿಪಿ ಮಾಡುವ ವಿಧಾನವನ್ನು ಅವಲೋಕಿಸಿ... ಮನ ಸೆಳೆಯುತ್ತಿದೆ ಗರಮಾಗರಂ ಗೋಬಿ ಪಕೋಡದ ಕಡೆ!

ಸೂಚನೆ: ಚಿಲ್ಲಿ ಗೋಬಿ ಡ್ರೈ ರೆಸಿಪಿಯನ್ನು ತಯಾರಿಸಲು ಅಧಿಕ ಪ್ರಮಾಣದ ಎಣ್ಣೆಯನ್ನು ಬಳಸಬೇಕಿರುತ್ತದೆ. ಹಾಗಾಗಿ ಇದನ್ನು ತಯಾರಿಸಿದ ಮೇಲೆ ಸರಿಯಾಗಿ ಎಣ್ಣೆ ಬಸಿಯುವುದನ್ನು ಮಾತ್ರ ಮರೆಯಬೇಡಿ.

*ಪ್ರಮಾಣ: ಮೂವರಿಗೆ ಬಡಿಸಬಹುದು.
*ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 10 ನಿಮಿಷಗಳು

Easy Chilli Gobi recipe in kannada

ಬೇಕಾಗುವ ಪದಾರ್ಥಗಳು
*ಗೋಬಿ - 1 (ಕತ್ತರಿಸಿದಂತಹುದು)
*ಕಡಲೆ ಹಿಟ್ಟು - 4 ಟೀ.ಚಮಚ
*ಜೋಳದ ಹಿಟ್ಟು (ಕಾರ್ನ್ ಫ್ಲೋರ್)- 1 ಟೀ.ಚಮಚ
*ಅಡುಗೆ ಸೋಡಾ (ಬೇಕಿಂಗ್ ಪೌಡರ್) - ¼ ಟೀ.ಚಮಚ
*ಈರುಳ್ಳಿ ಹೂವು (ಸ್ಪ್ರಿಂಗ್ ಆನಿಯನ್) - 1 ಕಟ್ಟು (ಸಣ್ಣಗೆ ಕತ್ತರಿಸಿದಂತಹುದು)
*ಕೊತ್ತೊಂಬರಿ ಪುಡಿ - 1 ಟೀ.ಚಮಚ
*ಚಾಟ್ ಮಸಾಲ - 1 ಟೀ.ಚಮಚ
*ಜೀರಿಗೆ ಪುಡಿ - 1 ಟೀ.ಚಮಚ
*ಮೆಣಸಿನ ಕಾಯಿ ಪುಡಿ - 1 ಟೀ.ಚಮಚ
*ಸೋಯಾ ಸಾಸ್ - ½ ಟೀ.ಚಮಚ
*ವಿನಿಗರ್- ½ ಟೀ.ಚಮಚ
*ಬೆಳ್ಳುಳ್ಳಿ - 1 (ಟೀ.ಚಮಚ)
*ಶುಂಠಿ - 1 ಟೀ.ಚಮಚ(ಕತ್ತರಿಸಿದಂತಹುದು)

ಮಾಡುವ ವಿಧಾನ
*ಒಂದು ಅಗಲ ತಳವಿರುವ ಬಟ್ಟಲನ್ನು ತೆಗೆದುಕೊಳ್ಳಿ. ಅದಕ್ಕೆ ಕಡಲೆ ಹಿಟ್ಟು, ಜೋಳದ ಹಿಟ್ಟು, ಅಡುಗೆ ಸೋಡಾ, ಕೊತ್ತೊಂಬರಿ ಪುಡಿ, ಜೀರಿಗೆ ಪುಡಿ, ಮೆಣಸಿನ ಕಾಯಿ ಪುಡಿ, ಸೋಯಾ ಸಾಸ್, ವಿನೀಗರ್, ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ, ಚಾಟ್ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.
*ಎಲ್ಲಾ ಪದಾರ್ಥಗಳನ್ನು ದೊಡ್ಡದಾದ ಚಮಚದ ಸಹಾಯದಿಂದ ಕಲೆಸಿ ಕೊಡಿ. ಈ ಬಟ್ಟಲಿಗೆ ಒಂದು ಕಪ್ ನೀರನ್ನು ಹಾಕಿ ಮತ್ತು ಪುಡಿಗಳನ್ನೆಲ್ಲವನ್ನು ಒಂದು ಮೃದುವಾದ ಬಜ್ಜಿ ಹಿಟ್ಟಿನಂತೆ ಕಲೆಸಿಕೊಳ್ಳಿ.


*ಈಗ ಇದಕ್ಕೆ ಒಂದು ಚಮಚ ಎಣ್ಣೆಯನ್ನು ಹಾಕಿ ಮತ್ತು ಮೊಟ್ಟೆಯನ್ನು ಕಲೆಸುವ ಸಾಧನದಿಂದ ಮಿಶ್ರಣವನ್ನು ಚೆನ್ನಾಗಿ ಕಲೆಸಿಕೊಡಿ.
*ಈ ಪದಾರ್ಥಗಳೆಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿದ ಮೇಲೆ ಅದಕ್ಕೆ ಕತ್ತರಿಸಿದ ಗೋಬಿಯನ್ನು ಹಾಕಿ. ನಂತರ ಅದನ್ನು ಮುಚ್ಚಿಡಿ. ಇದನ್ನು ಆದಷ್ಟು ಗಟ್ಟಿಯಾದ ಪೇಸ್ಟ್‌ನಂತೆ ಮಾಡಿಕೊಳ್ಳಬೇಡಿ.
*ಇನ್ನು ಒಂದು ದೊಡ್ಡದಾದ ಬಾಣಲೆಯನ್ನು ಗ್ಯಾಸ್ ಸ್ಟೌವ್ ಮೇಲೆ ಇಟ್ಟು, ಅದಕ್ಕೆ ಎಣ್ಣೆಯನ್ನು ಉಯ್ದುಕೊಳ್ಳಿ (ಡೀಪ್ ಫ್ರೈ ಮಾಡಿಕೊಳ್ಳಲು ಇದು ಅನುಕೂಲವಾಗಿರಲಿ)
*ಯಾವಾಗ ಎಣ್ಣೆಯು ಕಾಯುತ್ತದೆಯೋ, ಆಗ ಅದಕ್ಕೆ ನಿಧಾನವಾಗಿ ಗೋಬಿಯನ್ನು ಹಾಕಿ. ಈ ಗೋಬಿಯು ಹೊಂಬಣ್ಣಕ್ಕೆ ಬರುವವರೆಗೆ ಇದನ್ನು ಚೆನ್ನಾಗಿ ಡೀಪ್ ಫ್ರೈ ಮಾಡಿ.
*ಗೋಬಿಯಲ್ಲಿರುವ ಎಣ್ಣೆಯನ್ನು ಬಸಿಯಲು ಅದನ್ನು ಟಿಶ್ಯೂ ಪೇಪರ್ ಮೇಲೆ ಇಡಿ. 15 ನಿಮಿಷಗಳ ನಂತರ, ಗೋಬಿಯನ್ನು ಮತ್ತೆ ಡೀಪ್ ಫ್ರೈ ಮಾಡಿ. ಎಣ್ಣೆ ಬಸಿಯಲು ಪಕ್ಕದಲ್ಲಿಡಿ.
*ಇದರ ಮೇಲೆ ಈಗ ಸ್ವಲ್ಪ ಚಾಟ್ ಮಸಾಲವನ್ನು ಹಾಕಿ. ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಈರುಳ್ಳಿ ಹೂವಿನಿಂದ ಅಲಂಕಾರ ಮಾಡಿ. ಈಗ ಬಿಸಿ ಬಿಸಿಯಾದ ಗೋಬಿಯನ್ನು ಚಿಲ್ಲಿ ಸಾಸ್ ಜೊತೆಗೆ ಸವಿಯಲು ನೀಡಿ.
English summary

Easy Chilli Gobi recipe in Kannada

The gobi dry recipes you normally get to enjoy at any restaurant usually sees a little gravy on the side. This yummy chilli gobi dry fry recipe will not have any gravy which is why it is unique and tastes better. On the other hand, preparing this recipe you will need to use a lot of oil. So, make sure you drain out the excess oil after deep frying.
Story first published: Monday, October 5, 2015, 17:26 [IST]
X
Desktop Bottom Promotion