ಒಮ್ಮೆ ಮಾಡಿ, ಸವಿದು ನೋಡಿ-ಪಾಲಕ್ ಅವಲಕ್ಕಿ!

By: Arshad
Subscribe to Boldsky

ಸಂಜೆ ಮಕ್ಕಳು ಅಥವಾ ಹಿರಿಯರು ಮನೆಗೆ ಬಂದಾಗ ತಿನ್ನಲೇನು ಕೊಡಬೇಕು ಎನ್ನುವುದೇ ಹೆಚ್ಚಿನ ಗೃಹಿಣಿಯರಿಗೆ ಕಾಡುವ ಸಮಸ್ಯೆ ಏಕೆಂದರೆ ಹೆಚ್ಚಿನ ಸಮಯ ಪಡೆದುಕೊಂಡರೆ ಮಕ್ಕಳು ತಟ್ಟೆ ಚಮಚ ಬಡಿಯಲು ತೊಡಗುತ್ತಾರೆ. ಕಡಿಮೆ ಸಮಯದಲ್ಲಿ ಸಾಧ್ಯವಾಗುವ ತಿಂಡಿಗಳನ್ನೆಲ್ಲಾ ಮಾಡಿ ಬೇಸರವಾಗಿದೆ. ಹೀಗಿರುವಾಗ ನಿಮ್ಮ ನೆರವಿಗೆ ಬಂದಿದೆ ಒಂದು ಹೊಸರುಚಿ ಪಾಲಕ್ ಅವಲಕ್ಕಿ ಆರೋಗ್ಯಕರವಾದ,

ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ತಿಂಡಿಯನ್ನು ವಿವಿಧ ಸ್ವಾದಗಳಲ್ಲಿ ಸೇವಿಸಬಹುದು. ಇದರ ಸುಲಭ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು

ಸಿದ್ಧತಾ ಸಮಯ: ಹದಿನೈದು ನಿಮಿಷಗಳು

ತಯಾರಿಕಾ ಸಮಯ: ಹತ್ತು ನಿಮಿಷಗಳು          ಘಮಘಮ ಬಿಸಿಬಿಸಿ ಅವಲಕ್ಕಿ ಶಿರಾ

Delicious Spinach Poha Recipe

ಅಗತ್ಯವಿರುವ ಸಾಮಾಗ್ರಿಗಳು:

*ಅವಲಕ್ಕಿ - ಎರಡು ಕಪ್ (ದಪ್ಪ ಅವಲಕ್ಕಿ ಇದ್ದರೆ ಉತ್ತಮ)

*ಪಾಲಕ್ ಸೊಪ್ಪು - ಕಾಲು ಕಪ್ (ಚಿಕ್ಕದಾಗಿ ಹೆಚ್ಚಿದ್ದು)

*ಕ್ಯಾರೆಟ್ - ಒಂದು, ಮಧ್ಯಮ ಗಾತ್ರ-ಚಿಕ್ಕದಾಗಿ ಹೆಚ್ಚಿದ್ದು

*ಈರುಳ್ಳಿ -ಒಂದು, ಮಧ್ಯಮ ಗಾತ್ರ, ಚಿಕ್ಕದಾಗಿ ಹೆಚ್ಚಿದ್ದು

*ಹಸಿಶುಂಠಿ ಪೇಸ್ಟ್ -ಒಂದು ಚಿಕ್ಕ ಚಮಚ

*ಹಸಿಮೆಣಸು - ಎರಡು, ಚಿಕ್ಕದಾಗಿ ಹೆಚ್ಚಿದ್ದು

*ಕರಿಬೇವಿನ ಎಲೆಗಳು - ಕೆಲವಾರು

*ಗೋಡಂಬಿ - ನಾಲ್ಕರಿಂದ ಐದು (ಬಿಳಿಯದ್ದು ಉತ್ತಮ)

*ಕಡ್ಲೆ ಬೇಳೆ - ಒಂದು ಚಿಕ್ಕ ಚಮಚ

*ಸಾಸಿವೆ - ಒಂದು ಚಿಕ್ಕ ಚಮಚ

*ಎಣ್ಣೆ - ಮೂರು ಚಮಚ (ಆಲಿವ್, ಸೂರ್ಯಕಾಂತಿ, ಮೆಕ್ಕೆಜೋಳ, ಕ್ಯಾನೋಲಾ ಎಣ್ಣೆ ಉತ್ತಮ)

*ಉಪ್ಪು-ರುಚಿಗನುಸಾರ

*ಅರಿಶಿನ ಪುಡಿ - ಚಿಟಿಕೆಯಷ್ಟು

*ಲಿಂಬೆಹಣ್ಣು - ಒಂದು (ಮಧ್ಯಮ ಗಾತ್ರ) ದೊಡ್ಡದಾದರೆ ಅರ್ಧ.

*ಕೊತ್ತಂಬರಿ ಸೊಪ್ಪು : ಅರ್ಧ ಕಟ್ಟು - ಚಿಕ್ಕದಾಗಿ ಹೆಚ್ಚಿದ್ದು.

ವಿಧಾನ:

1) ಅವಲಕ್ಕಿಯನ್ನು ನೀರಿನಲ್ಲಿ ಹಾಕಿ ಕೂಡಲೇ ನೀರು ಬಸಿದು ಒಂದು ಅಗಲವಾದ ತಟ್ಟೆಯಲ್ಲಿ ಒಣಗಲು ಹರಡಿ

2) ಮಧ್ಯಮ ಉರಿಯಲ್ಲಿ ಬಾಣಲೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸಿಡಿಸಿ ನೀರುಳ್ಳಿ, ಗೋಡಂಬಿ ಹಾಕಿ

3) ಈರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ. (ಒಂದು ವೇಳೆ ಹುರಿದ ಗೋಡಂಬಿ ಉಪಯೋಗಿಸುವುದಾದರೆ ಈರುಳ್ಳಿ ಬೆಂದ ಬಳಿಕ ಹಾಕಿ)

4) ನಂತರ ಕರಿಬೇವು, ಶುಂಠಿ ಪೇಸ್ಟ್, ಹಸಿಮೆಣಸು ಹಾಕಿ ಕೊಂಚಕಾಲ ತಿರುವುತ್ತಿರಿ.

5) ಈಗ ಕ್ಯಾರೆಟ್ ಹಾಕಿ ಎಣ್ಣೆಯಲ್ಲಿಯೇ ಬೇಯುವವರೆಗೆ ನಡುನಡುವೆ ತಿರುವುತ್ತಿರಿ.

6) ಈಗ ಉಪ್ಪು ಹಾಕಿ ತಿರುವಿ. ನಂತರ ಪಾಲಕ್ ಸೊಪ್ಪು ಹಾಕಿ ಬಿಡದೇ ತಿರುವುತ್ತಿರಿ.

7) ಪಾಲಕ್ ಕೊಂಚ ಬೆಂದಿದೆ ಎನ್ನುವಾಗ ಅರಿಶಿನ ಪುಡಿ ಹಾಕಿ ತಿರುವಿ.

8) ಈಗ ಒಣಗಿಸಿದ ಅವಲಕ್ಕಿಯನ್ನು ಹಾಕಿ ತಿರುವಿ. ಇದಕ್ಕೆ ಒಂದು ಲಿಂಬೆಹಣ್ಣಿನ ರಸವನ್ನು ಸುರುವಿ ಸುಮಾರು ಐದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ನಡುನಡುವೆ ತಿರುವುತ್ತಿರಿ.

9) ಅಂತಿಮವಾಗಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ. ಬಿಸಿಬಿಸಿಯಿದ್ದಂತೆಯೇ ಬಡಿಸಿ.

ಸಲಹೆ

1) ಇದು ಎಲ್ಲರೂ ಇಷ್ಟಪಡುವ ಪೌಷ್ಟಿಕ ಆಹಾರವಾಗಿರುವುದರಿಂದ ತೂಕ ಇಳಿಸಿಕೊಳ್ಳುತ್ತಿರುವವರೂ ಸೇವಿಸಬಹುದು.

2) ಅವಲಕ್ಕಿ ಅತಿ ಹೆಚ್ಚು ನೀರಿನಲ್ಲಿರಬಾರದು. ಕೊಂಚವೇ ನೆನೆಯಬೇಕು ಅಷ್ಟೇ. ಹೆಚ್ಚು ನೆನೆದರೆ ಮುದ್ದೆಯಾಗಿ ಸರಿಯಾಗಿ ಮಿಶ್ರಣಗೊಳ್ಳದೇ ಹೊಸರುಚಿ ವಿಫಲವಾಗುತ್ತದೆ.

3) ಹೆಚ್ಚಿನ ರುಚಿಗೆ ನಿಮ್ಮ ಇಷ್ಟದ ತರಕಾರಿಗಳನ್ನು ತುರಿದು ಸೇರಿಸಬಹುದು. ಉದಾಹರಣೆಗೆ ಸೌತೆ, ನೆನೆಸಿದ ಹೆಸರು ಕಾಳು, ಬೀಟ್‌ರೂಟ್, ಇತ್ಯಾದಿ.

English summary

Delicious Spinach Poha Recipe

Planning to have something tasty this evening? Try this delicious spinach poha recipe. This poha recipe is a healthy dish and it can be made very easily. This Poha Recipe is very easy to make and can be enjoyed with different flavours. Read on to know the recipe of this delicious spinach poha recipe and enjoy it as an evening snack with your family on this monsoon day.
Subscribe Newsletter