For Quick Alerts
ALLOW NOTIFICATIONS  
For Daily Alerts

ಹೊಸ ರುಚಿ: ಕ್ರ್ಯಾನ್ಬೆರಿ ಪಿಸ್ತಾ ಕೇಕ್ ಬಿಸ್ಕತ್ ರೆಸಿಪಿ

By Vani Nayak
|

ಚಳಿಗಾಲ ಬಂತೆಂದರೆ ಸಾಕು, ಕೇಕ್ಸ್ ಮತ್ತು ಕುಕ್ಕೀಸ್ ಮಾಡುವ ಸಮಯ. ಏಕೆಂದರೆ, ಚಳಿಗಾಲದಲ್ಲಿ ಸಾಕಷ್ಟು ಹಣ್ಣುಗಳು ಮತ್ತು ಡ್ರೈ ಫ್ರೂಟ್ಸ್ ಗಳು ಲಭ್ಯವಿರುತ್ತದೆ. ವೈವಿಧ್ಯಮಯ ಕೇಕ್ಸ್, ವಿವಿಧ ಫ್ಲೇವರ್ ಹೊಂದಿದ ಬಿಸ್ಕತ್ ಮತ್ತು ಕುಕ್ಕೀಸ್ ಗಳನ್ನು ಮಾಡಬಹುದು. ಕ್ರ್ಯಾನ್ಬೆರಿ ಪಿಸ್ತಾ ಕೇಕ್ ಬಿಸ್ಕತ್ ಬಾಯಿ ಚಪ್ಪರಿಸುವಂತೆ ಮಾಡುವ, ಮಕ್ಕಳಿಗಂತೂ ರುಚಿಯ ಹುಚ್ಚು ಹಿಡಿಸುವ ಒಂದು ವಿಶೇಷವಾದ ತಿನಿಸು. ಇಂತಹ ಸ್ವಾದಿಷ್ಟಕರವಾದ ಕೇಕ್ ಬಿಸ್ಕತ್ ಅನ್ನು ಮಾಡುವ ಬಗೆ ನಿಮಗೆ ತಿಳಿದಿದೆಯೇ?

ನೀವು ಬೇಕ್ ಮಾಡುವುದಕ್ಕೆ ಆಸಕ್ತಿಯುಳ್ಳವರಾಗಿದ್ದರೆ ನಿಮ್ಮ ಪರಿವಾರಕ್ಕಾಗಿ ಮಾಡ ಬಯಸುತ್ತೀರಿ. ಇದಕ್ಕೆ ಬೇಕಾಗುವ ಸಾಮಗ್ರಿಗಳು ಕೂಡ ಸುಲಭವಾಗಿ ಲಭ್ಯವಿರುತ್ತದೆ. ಹಾಗಾಗಿ ಈ ತಿನಿಸನ್ನು ಮಾಡುವ ಬಗೆ ಹೇಗೆ ಮತ್ತು ಇದಕ್ಕೆ ಬೇಕಾಗುವ ಸಾಮಗ್ರಿಗಳ ವಿವರಣೆಯನ್ನು ನೀಡಲಾಗಿದೆ. ಗರಿಗರಿಯಾದ ಬಾದಾಮಿ-ಚೀಸ್ ಬಿಸ್ಕತ್

Delicious Cranberry Pistachio Cake Biscuit

*ಅಳತೆ - 10 ಸ್ಲೈಸ್ ಗಳು
*ಸಿದ್ಧತಾ ಸಮಯ - 20 ನಿಮಿಷಗಳು
*ತಯಾರಿಸುವ ಸಮಯ - 40 ನಿಮಿಷಗಳು

ಸಾಮಗ್ರಿಗಳು:
1. ಒಣ ಕ್ರ್ಯಾನ್ಬೆರಿ - 1 ಕಪ್
2. ಪಿಸ್ತಾ - 1 1/2 ಕಪ್
3. ಮೈದಾ - 2 1/2 ಕಪ್
4. ಕರಗಿಸಿದ ಬೆಣ್ಣೆ - 1 ಕಪ್
5. ಐಸಿಂಗ್ ಶುಗರ್ - 1 1/2 ಕಪ್
6. ಮೊಟ್ಟೆ - 2
7. ಬೇಕಿಂಗ್ ಪೌಡರ್ - 1/4 ಟೀ ಚಮಚ
8. ವೆನಿಲ್ಲಾ ಎಸ್ಸೆನ್ಸ್ - 2 ಟೀ ಚಮಚ
9. ಉಪ್ಪು - ಚಿಟಿಕೆಯಷ್ಟು

ವಿಧಾನ:
1. ಕ್ರಾನ್ಬೆರೀಸ್ ಮತ್ತು ಪಿಸ್ತಾವನ್ನು ಒಂದು ಬ್ಲೆಂಡರ್ ನಲ್ಲಿ ಹಾಕಿ ತರಿತರಿಯಾಗಿ ಬ್ಲೆಂಡ್ ಮಾಡಿ.
2. ಈಗ, ಕರಗಿದ ಬೆಣ್ಣೆ, ಹಿಟ್ಟು, ಮೊಟ್ಟೆ, ಚಿಟಕಿ ಉಪ್ಪು ಮತ್ತು ಐಸಿಂಗ್ ಶುಗರ್ ಅನ್ನು ಸೇರಿಸಿ.
3. ಈಗ ಎಲ್ಲವನ್ನು ಬ್ಲೆಂಡ್ ಮಾಡಿದರೆ ಒಂದು ಜಿಗಿಯಾದ ಕಣಕ ತಯಾರಾಗುತ್ತದೆ.
4. ಅದನ್ನು ಒಂದು ಬೌಲ್ಗೆ ತೆಗೆದುಕೊಳ್ಳಿ. ಅದು, ಕ್ರಾನ್ಬೆರೀಸ್ ಹಾಕಿರುವುದರಿಂದ ಬಹಳ ಜಿಗಿಯಾಗಿರುತ್ತದೆ.


5. ಅದಕ್ಕೆ ಮತ್ತಷ್ಟು ಹಿಟ್ಟನ್ನು ಹಾಕಿ ಕೈಯಿಂದ ನಾದಿಕೊಳ್ಳಿ.
6. ಕುಕ್ಕಿಂಗ್ ಟಾಪ್ ಮೇಲೇ ಹಿಟ್ಟನ್ನು ಉದುರಿಸಿ ಕಣಕವನ್ನು ಸಿಲಿಂಡರಾಕಾರಕ್ಕೆ ಮಾಡಿ, ನಂತರ ಚಪ್ಪಟೆ ಮಾಡಿ.
7. ಒಂದು ಬೇಕಿಂಗ್ ಟ್ರೇ ತೆಗೆದುಕೊಂಡು ಕಣಕವನ್ನು ಅದರ ಮೇಲಿಡಿ.
8. ಓವನ್ ಅನ್ನು 160 ಡಿಗ್ರೀ ಸೆಲ್ಸಿಯಸ್ ಗೆ ಪ್ರೀ ಹೀಟ್ ಮಾಡಿ, 20-22 ನಿಮಿಷಗಳ ಕಾಲ ಬೇಕ್ ಮಾಡಿ.
9. ನಂತರ ಹೊರಗೆ ತೆಗೆದು, 10 ನಿಮಿಷಗಳ ಕಾಲ ತಣ್ಣಗಾಗುವುದಕ್ಕೆ ಬಿಡಿ.
10. ಈಗ ಅದನ್ನು ಸ್ಲೈಸ್ ಗಳಾಗಿ ಕಟ್ ಮಾಡಿ. ಬಿಸ್ಕತ್ ಒಳಗಿಂದ ಸರಿಯಾಗಿ ಬೇಕ್ ಆಗದೇ ಇರುವುದನ್ನು ನೀವು ಕಾಣುತ್ತೀರಿ.
11. ನಂತರ ಬೇಕಿಂಗ್ ಟ್ರೇ ನಲ್ಲಿ ಕಟ್ ಮಾಡಿದ ಸ್ಲೈಸ್ ಗಳನ್ನು ಇಟ್ಟು ಮತ್ತೆ 10 ನಿಮಿಷಗಳ ಕಾಲ ಬೇಕ್ ಮಾಡಿ.
12. ಹೊರಗೆ ತೆಗೆದು ರುಚಿ ನೋಡಿ.

ಬಾಯಲ್ಲಿ ಇಟ್ಟ ಕೂಡಲೇ ಬಿಸ್ಕತ್ ಗಳು ಕ್ರಿಸ್ಪಿಯಾಗಿ, ಕ್ರನ್ಚಿಯಾಗಿ, ಕ್ರನ್ಬೆರೀಸ್ಇರುವುದರಿಂದ ಹುಳಿಹುಳಿ ರುಚಿಸುತ್ತದೆ. ಈಗ ನೀವು ನಿಮ್ಮ ಅತಿಥಿಗಳಿಗೆ ಬಿಸಿ ಕಾಫಿಯೊಡನೆ ಕ್ರ್ಯಾನ್ಬೆರಿ ಪಿಸ್ತಾ ಬಿಸ್ಕತ್ ಗಳನ್ನು ಸವಿಯಲು ಕೊಡಿ.
English summary

Delicious Cranberry Pistachio Cake Biscuit

Do you know how to make this lip-smacking dish? If you have passion for baking, you would love to make it for your family. The ingredients are not difficult to get as well. So, have a look at the ingredients required and the method to prepare this snack.
Story first published: Tuesday, November 22, 2016, 19:25 [IST]
X
Desktop Bottom Promotion