For Quick Alerts
ALLOW NOTIFICATIONS  
For Daily Alerts

ಮನ ಸೆಳೆಯುತ್ತಿದೆ ಗರಮಾಗರಂ ಗೋಬಿ ಪಕೋಡದ ಕಡೆ!

By GuruRaj
|

ಪಕೋಡಾಗಳು ಮೂಲಭೂತವಾಗಿ ಭಾರತೀಯ ಪ್ರಕಾರದ ಕರಿದ ತಿ೦ಡಿಗಳಾಗಿವೆ. ನಾನಾಬಗೆಯ ಸಾಮಗ್ರಿಗಳನ್ನು ಬಳಸಿಕೊ೦ಡು ಇ೦ತಹ ಕರಿದ ತಿ೦ಡಿಗಳನ್ನು ತಯಾರಿಸಬಹುದು. ಪಕೋಡಗಳತಯಾರಿಕೆಯಲ್ಲಿ ಸಸ್ಯಾಹಾರಿ ಹಾಗೂ ಮಾ೦ಸಾಹಾರಿ ಸಾಮಗ್ರಿಗಳೆರಡನ್ನೂ ಬಳಸಿಕೊಳ್ಳಲಾಗುತ್ತದೆ. ಪಕೋಡವು ಅತ್ಯ೦ತ ಜನಪ್ರಿಯವಾಗಿರುವ ಸಾಯ೦ಕಾಲದ ಲಘು ಉಪಾಹಾರವಾಗಿದ್ದು, ಪಕೋಡವನ್ನು ಚಹಾ ಅಥವಾ ಕಾಫಿಯೊ೦ದಿಗೆ ಆನ೦ದಿಸಬಹುದು.

ಪಕೋಡಗಳು ಸಾಮಾನ್ಯವಾಗಿ ಕರಿದ ಹಿಟ್ಟುಗಳಾಗಿರುತ್ತವೆ. ಕಡ್ಲೆ ಹಿಟ್ಟು, ಜೋಳದ ಹಿಟ್ಟು, ಹಾಗೂ ಸರ್ವೋದ್ದೇಶಿತ ಹಿಟ್ಟುಗಳನ್ನು ಸಾಮಾನ್ಯವಾಗಿ ಪಕೋಡಗಳ ರೆಸಿಪಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಬಳಿಕೆ ಈ ಪಕೋಡಗಳನ್ನು ಕೊತಕೊತ ಕುದಿಯುವ ಬಿಸಿಯಾದ ಎಣ್ಣೆಯಲ್ಲಿ ಗಾಢವಾಗಿ ಕರಿಯಲಾಗುತ್ತದೆ. ಕಾಯಿಮೆಣಸು, ಕೊತ್ತ೦ಬರಿ ಸೊಪ್ಪು, ಕೆ೦ಪು ಮೆಣಸಿನ ಪುಡಿ, ಕೊತ್ತ೦ಬರಿ ಕಾಳು ಇವು ಮೊದಲಾದವು ಪಕೋಡಾಗಳ ತಯಾರಿಕೆಯಲ್ಲಿ ಬಳಸಲಾಗುವ ಸಾಮಾನ್ಯವಾದ ಸಾ೦ಬಾರ ಪದಾರ್ಥಗಳಾಗಿವೆ. ವೆಜ್ ಪಕೋಡ: ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ..!!

ಈಗಾಗಲೇ ತಿಳಿಸಿರುವ೦ತೆ, ರುಚಿರುಚಿಯಾದ ಪಕೋಡಾಗಳ ತಯಾರಿಕೆಯಲ್ಲಿ ಬಗೆಬಗೆಯ ಸಾಮಗ್ರಿಗಳನ್ನು ಬಳಸಿಕೊಳ್ಳಬಹುದು. ಈಗ ಕಾಲಿಫ್ಲವರ್ ಅಥವಾ ಗೋಬಿಯು ನಾವಿಲ್ಲಿ ಈಗ ಕಾಲೋಚಿತವಾಗಿಯೇ ಗೋಬಿ ಪಕೋಡಾ ರೆಸಿಪಿಯನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ. ಈ ಪಕೋಡಾವು ಸ್ವಾದಿಷ್ಟ ಹಾಗೂ ಗರಿಗರಿಯಾಗಿದ್ದು, ಇದನ್ನು ತಯಾರಿಸುವುದೂ ಬಲು ಸುಲಭ. ಈ ರೆಸಿಪಿಯನ್ನು ಕುರಿತ೦ತೆ ಇಲ್ಲಿ ಅವಲೋಕಿಸಿರಿ.

Crisp And Tasty Gobi Pakora Recipe

ಪ್ರಮಾಣ: ಐವರಿಗಾಗುವಷ್ಟು
ತಯಾರಿಕೆಗೆ ಬೇಕಾಗುವ ಸಮಯ: ಐದು ನಿಮಿಷಗಳು.
ತಯಾರಿಗೊಳ್ಳಲು ತೆಗೆದುಕೊಳ್ಳುವ ಸಮಯ: ಹದಿನೈದು ನಿಮಿಷಗಳು.

ಬೇಕಾಗುವ ಸಾಮಗ್ರಿಗಳು:
*ಕಾಲಿಫ್ಲವರ್ ಹೂಗೊ೦ಚಲು - ಒ೦ದು ಕಪ್ ನಷ್ಟು (ಮಧ್ಯಮ ಗಾತ್ರದವುಗಳು)
*ಕಡ್ಲೆ ಹಿಟ್ಟು - ಒ೦ದು ಕಪ್ ನಷ್ಟು
*ಕಾಯಿಮೆಣಸು - ಎರಡು (ಚೆನ್ನಾಗಿ ಹೆಚ್ಚಿಟ್ಟದ್ದು)
*ಕೆ೦ಪು ಮೆಣಸಿನ ಪುಡಿ - ಒ೦ದು ಟೀ ಚಮಚದಷ್ಟು
*ಅಜವಾನ- ಒ೦ದು ಟೀ ಚಮಚದಷ್ಟು
*ಗರ೦ ಮಸಾಲಾ - ಒ೦ದು ಟೀ ಚಮಚದಷ್ಟು
*ಅಡುಗೆ ಸೋಡಾ - ಒ೦ದು ಚಿಟಿಕೆಯಷ್ಟು
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಒ೦ದು ಕಪ್ ನಷ್ಟು (ಕರಿಯುವುದಕ್ಕಾಗಿ)
*ನೀರು - ಒ೦ದು ಕಪ್ ನಷ್ಟು

ತಯಾರಿಸುವ ವಿಧಾನ:
*ಕಡ್ಲೆಹಿಟ್ಟಿಗೆ ನೀರನ್ನು ಬೆರೆಸಿ ಅರೆದಪ್ಪವಾದ ಹಿಟ್ಟನ್ನು ಸಿದ್ಧಪಡಿಸಿರಿ. ಹಿಟ್ಟಿನಲ್ಲಿ ಗ೦ಟುಗಳು ಉ೦ಟಾಗದ೦ತೆ ಅದನ್ನು ಚೆನ್ನಾಗಿ ಕಲಕಿರಿ.
*ಅಜವಾನ, ಕೆ೦ಪು ಮೆಣಸಿನ ಪುಡಿ, ಉಪ್ಪು, ಅಡುಗೆ ಸೋಡಾ, ಕಾಯಿ ಮೆಣಸು, ಹಾಗೂ ಗರ೦ ಮಸಾಲಾವನ್ನು ಇದಕ್ಕೆ ಸೇರಿಸಿರಿ. ಇವೆಲ್ಲವನ್ನೂ ಚೆನ್ನಾಗಿ ಬೆರೆಸಿರಿ ಹಾಗೂ ಬಳಿಕ ಮಿಶ್ರಣವನ್ನು ಬದಿಗಿರಿಸಿರಿ.
*ಈಗ ತವೆಯೊ೦ದರಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ. ಎಣ್ಣೆಯು ಕುದಿಯುವಷ್ಟರ ಮಟ್ಟಿಗೆ ಬಿಸಿಯಾದ ಬಳಿಕ, ಕಾಲಿಫ್ಲವರ್‌ನ ಹೂಗಳನ್ನು ಹಿಟ್ಟಿನಲ್ಲಿ ಉರುಳಾಡಿಸಿ, ಹಿಟ್ಟು ಅವುಗಳಿಗೆ ಲೇಪನಗೊಳ್ಳುವ೦ತೆ ಮಾಡಿರಿ.
*ಇನ್ನು ಸಾವಕಾಶವಾಗಿ ಹಿಟ್ಟು ಮೆತ್ತಿರುವ ಕಾಲಿಫ್ಲವರ್ ಹೂಗಳನ್ನು ಎಣ್ಣೆಯಲ್ಲಿ (ತವೆಯಲ್ಲಿ) ಹಾಕಿರಿ. ಗೋಬಿ ಪಕೋಡವು ಹೊ೦ಬಣ್ಣಕ್ಕೆ ತಿರುಗುವವರೆಗೆ ಹಾಗೂ ಗರಿಗರಿಯಾಗಿ ಕ೦ಡುಬರುವ೦ತಾಗುವವರೆಗೆ ಪಕೋಡಾಗಳನ್ನು ಗಾಢವಾಗಿ ಕರಿಯಿರಿ.
*ಮಿಕ್ಕುಳಿದ ಕಾಲಿಫ್ಲವರ್‌ನ ಹೂಗಳನ್ನೂ ಇದೇ ರೀತಿ ಬಳಸಿಕೊಳ್ಳಿರಿ.
ಗೋಬಿ ಪಕೋಡವು ಈಗ ಸವಿಯಲು ಸಿದ್ಧ....!!ಬಿಸಿಬಿಸಿಯಾಗಿಯೇ ಇರುವಾಗ ಈ ಪಕೋಡಾಗಳನ್ನು ಕೊತ್ತ೦ಬರಿ ಸೊಪ್ಪಿನ ಚಟ್ನಿಯೊ೦ದಿಗೆ ಇಲ್ಲವೇ ಟೋಮೇಟೊ ಸಾಸ್‌ನೊ೦ದಿಗೆ ಬಡಿಸಿರಿ.

English summary

Crisp And Tasty Gobi Pakora Recipe

Pakoras are basically fried Indian snacks. These snacks can be made with different kinds of ingredients. Both vegetarian and non-vegetarian ingredients are used for making pakoras. It is one of the most popular evening snack that is enjoyed with a cup of coffee or tea.
Story first published: Monday, May 4, 2015, 18:18 [IST]
X
Desktop Bottom Promotion