For Quick Alerts
ALLOW NOTIFICATIONS  
For Daily Alerts

ಆಹಾ ಬಾದಾಮಿ ಚೀಸ್ ಬಿಸ್ಕತ್ತು, ಸ್ವರ್ಗಕ್ಕೆ ಮೂರೇ ಗೇಣು!

By Jaya Subramanya
|

ಕ್ರಿಸ್‌ಮಸ್‌ಗೆ ಇನ್ನೇನು ಒಂದು ವಾರ ಮಾತ್ರ ಬಾಕಿ ಉಳಿದಿದೆ. ದೇವ ಪುತ್ರನ ಈ ಹಬ್ಬಕ್ಕಾಗಿ ಎಷ್ಟೊಂದು ಸಿದ್ಧತೆಗಳನ್ನು ಮಾಡಿಕೊಂಡರೂ ಅದು ಸಾಕಾಗುವುದಿಲ್ಲ. ಕ್ರಿಸ್‌ಮಸ್ ಹಬ್ಬದಲ್ಲಿ ಕೇಕ್, ವೈನ್ ಮೊದಲಾದ ಪೇಯಗಳು, ಮಾಂಸದಡುಗೆ ಎಷ್ಟು ಮುಖ್ಯವೋ ಅಂತೆಯೇ ಸಿಹಿ ಬಿಸ್ಕತ್ತು (ಬಿಸ್ಕೆಟ್) ಗಳಿಗೂ ಸ್ಥಾನವಿದೆ.

ಏಸುವು ತನ್ನವರು ಹಸಿದುಕೊಂಡು ಇರುವುದನ್ನು ನೋಡಿಕೊಂಡು ಇರುತ್ತಿರಲಿಲ್ಲವಂತೆ. ಪ್ರತಿಯೊಬ್ಬ ಬಡ ಬಗ್ಗರಿಗೂ ಹಸಿವು ತೀರಿಸುತ್ತಿದ್ದಂತೆ. ಈ ನಿಟ್ಟಿನಲ್ಲಿಯೇ ಕ್ರಿಸ್‌ಮಸ್‌ನಂದು ಭರ್ಜರಿ ಭೋಜನ ಕೂಟವನ್ನು ಏರ್ಪಡಿಸಿ ಕುಟುಂಬದ ಸದಸ್ಯರು ಒಗ್ಗೂಡಿ ಹಬ್ಬವನ್ನು ಆಚರಿಸುತ್ತಾರೆ.

Biscuits

ಇಂದಿನ ಲೇಖನದಲ್ಲಿ ಬಾಯಲ್ಲಿ ನೀರೂರಿಸುವ ಮತ್ತು ಸ್ವತಃ ನೀವೇ ತಯಾರಿಸಬಹುದಾದ ಚೀಸ್ ಮತ್ತು ಬಾದಾಮಿ ಬಿಸ್ಕತ್ತುಗಳ ರೆಸಿಪಿಯನ್ನು ನೀಡುತ್ತಿದ್ದೇವೆ. ಬಾದಾಮಿ ಮತ್ತು ಚೀಸ್ ದೇಹಕ್ಕೆ ಅತ್ಯುತ್ತಮ ಎಂದೆನಿಸಿದ್ದು ಈ ಕ್ರಿಸ್‌ಮಸ್ ಹಬ್ಬದಂದು ನೀವು ಇದನ್ನು ಅವಶ್ಯವಾಗಿ ತಯಾರಿಸಬಹುದಾಗಿದೆ. ಬನ್ನಿ ಮಾಡುವ ವಿಧಾನವನ್ನು ಅರಿತುಕೊಳ್ಳೋಣ.

ಪ್ರಮಾಣ - 4
ಅಡುಗೆಗೆ ಬೇಕಾದ ಸಮಯ - 20 ನಿಮಿಷಗಳು
ಸಿದ್ಧತಾ ಸಮಯ - 15 ನಿಮಿಷಗಳು

ಸಾಮಾಗ್ರಿಗಳು
*ಮೈದಾ ಹುಡಿ - 2 ಕಪ್ಸ್
*ತುರಿದ ಚೀಸ್ - 1 ಕಪ್
*ಬಾದಾಮಿ - 1 ಕಪ್ (ಚಿಕ್ಕದಾಗಿ ಕತ್ತರಿಸಿಕೊಂಡಿದ್ದು)
*ಸಕ್ಕರೆ - 1/4 ಕಪ್
*ಬೆಣ್ಣೆ - 1/2 ಕಪ್
*ಹಾಲು - 1/2 ಕಪ್
*ಉಪ್ಪು - 1/4 ಚಮಚ

ಮಾಡುವ ವಿಧಾನ
1. ಪಾತ್ರೆಯನ್ನು ತೆಗೆದುಕೊಂಡು, ಮೈದಾ, ಬೆಣ್ಣೆ, ಸಕ್ಕರೆ ಮತ್ತು ಉಪ್ಪನ್ನು ಸೇರಿಸಿಕೊಂಡು ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ.
2.ಈಗ ತುರಿದ ಚೀಸ್ ಅನ್ನು ಸೇರಿಸಿಕೊಳ್ಳಿ ಮತ್ತು ಕತ್ತರಿಸಿಕೊಂಡ ಬಾದಾಮಿಯನ್ನು ಹಾಕಿ.
3. ಈಗ ಎಲ್ಲವನ್ನೂ ಮಿಶ್ರ ಮಾಡಿ
4.ಹಿಟ್ಟನ್ನು ತಯಾರಿಸಿಕೊಳ್ಳಲು ಬೇಕಾದಷ್ಟು ಪ್ರಮಾಣದಲ್ಲಿ ಹಾಲನ್ನು ಸೇರಿಸಿ, ಮಿಶ್ರಣವನ್ನು ಖಾತ್ರಿಪಡಿಸಿ.
5.ಚಪ್ಪಟೆ ತಟ್ಟೆಯಲ್ಲಿ ಹಿಟ್ಟನ್ನು ಇರಿಸಿಕೊಳ್ಳಿ ಮತ್ತು ಎಲ್ಲಾ ಹಿಟ್ಟನ್ನು ನಾದಿಕೊಳ್ಳಿ
6.ಒಂದು ಇಂಚು ದಪ್ಪಕ್ಕೆ ಅರ್ಧ ಪ್ರಮಾಣದಲ್ಲಿ ಹಿಟ್ಟು ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ
7. ಈಗ, ಕುಕ್ಕಿ ಕಟರ್ ಅನ್ನು ಬಳಸಿಕೊಂಡು, ಹಿಟ್ಟನ್ನು ಸಮಾನ ಪ್ರಮಾಣದಲ್ಲಿ ಕತ್ತರಿಸಿಕೊಳ್ಳಿ ಮತ್ತು ಬಿಸ್ಕೆಟ್ ಟ್ರೇಗೆ ಅದನ್ನು ವರ್ಗಾಯಿಸಿ


8. ಟ್ರೇಯನ್ನು ಓವನ್‌ನಲ್ಲಿ ಇರಿಸಿ ಮತ್ತು 180 ಡಿಗ್ರಿ ಸೆಲ್ಶಿಯಸ್‌ನಲ್ಲಿ 15 ರಿಂದ 18 ನಿಮಿಷಗಳ ಕಾಲ ಅದನ್ನು ಬೇಯಿಸಿಕೊಳ್ಳಿ.
9. ಮೇಲೆ ತಿಳಿಸಿದ ಸಮಯದ ನಂತರ ಬಿಸ್ಕತ್ತನ್ನು ತೆಗೆದು, ಬಿಸಿ ಬಿಸಿಯಾಗಿ ಬಡಿಸಿ.
10. ಈ ಬಾರಿ ಕ್ರಿಸ್‌ಮಸ್ ಹಬ್ಬಕ್ಕಾಗಿ ಈ ರೆಸಿಪಿ ತಯಾರಿಯನ್ನು ಮರೆಯದೇ ಮಾಡಿ ಮತ್ತು ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿ.
English summary

Specail Almond Cheese Biscuit Recipe

Basic ingredients can be added while preparing the biscuits. But, as the name suggests, we shall add cheese and almonds today to our recipe. This biscuit recipe is healthy too along with being tasty, as we add cheese and almonds that are good for the body. This is a special recipe that you can try for Christmas.
Story first published: Monday, December 19, 2016, 19:25 [IST]
X
Desktop Bottom Promotion