For Quick Alerts
ALLOW NOTIFICATIONS  
For Daily Alerts

ತೂಕ ಕಡಿಮೆ ಮಾಡಲು ಕ್ಯಾಬೇಜ್ ಕಾಳುಮೆಣಸು ಸೂಪ್

By Manohar V
|

ಹಬ್ಬದ ಗಲಾಟೆ ಮುಗಿದಿದೆ. ಹಬ್ಬದ ಆಚರಣೆಯೊಂದಿಗೆ ಅಧಿಕ ಕ್ಯಾಲೋರಿಗಳಿರುವ ಆಹಾರವನ್ನು ನೀವು ಸೇವಿಸಿರುತ್ತೀರಿ. ನಿಮಗೆ ತಿನ್ನಬೇಕಾಗಿರುವುದನ್ನು ಎಲ್ಲಾ ಸಮಯವೂ ನಿಯಂತ್ರಿಸುವುದು ಕಷ್ಟ. ಇದರಿಂದ ಸಾಮಾನ್ಯವಾಗಿ ತೂಕ ಹೆಚ್ಚಾಗುತ್ತದೆ. ಹಬ್ಬದ ಉತ್ಸಾಹ ಸಂತೋಷ ಮುಗಿದ ಕೂಡಲೇ, ನಿಮ್ಮ ಡಯೆಟ್‌ ಪ್ಲಾನ್‌ಗೆ ಅನಿವಾರ್ಯವಾಗಿ ನೀವು ಬರಲೇಬೇಕು.

ಅಧಿಕ ಕ್ಯಾಲೋರಿಗಳಿರುವ, ನೀವು ಇಷ್ಟಪಡುವ ಆಹಾರವನ್ನು ಮನಸೋ ಇಚ್ಛೆ ತಿಂದು ತೂಕ ಹೆಚ್ಚಾಗಿರುವುದನ್ನು ಕುರಿತು ಚಿಂತಿತರಾಗಿರುವಿರಾ, ನಿಮ್ಮ ಚಿಂತೆಯನ್ನು ದೂರ ಮಾಡುವ ತೂಕವನ್ನು ನಿಯಂತ್ರಣದಲ್ಲಿಡುವ ಡಿಶ್‌ ಇಲ್ಲಿದೆ.

Cabbage Pepper Soup For Weight Loss

ಸೂಪ್ ಡಯೆಟ್ ಒಂದು ಜನಪ್ರಿಯ ಆಹಾರ ವಿಧಾನವಾಗಿದ್ದು ಕಡಿಮೆ ಕ್ಯಾಲೋರಿ, ತೂಕ ಕಡಿಮೆ ಮಾಡುವ ಸಾರವನ್ನು ತನ್ನೊಳಗೆ ಸೇರಿಸಿಕೊಂಡಿದೆ. ಕಾಲಕ್ಕನುಗುಣವಾದ ದಿನಸಿ ಪದಾರ್ಥಗಳನ್ನು ಬಳಸಿಕೊಂಡು ಸೂಪ್‌ಗಳನ್ನು ನಿಮಗೆ ತಯಾರಿಸಬಹುದು. ಅದರೊಲ್ಲೊಂದು ಕ್ಯಾಬೇಜ್ ಸೂಪ್. ಕ್ಯಾಬೇಜ್ ಅಧಿಕ ಪೋಷಕಾಂಶಗಳನ್ನು ಹೊಂದಿದ್ದು ತೂಕ ಕಡಿಮೆ ಮಾಡುವ ಗುಣವನ್ನು ಮೈಗೂಡಿಸಿಕೊಂಡಿದೆ. ಇದರೊಂದಿಗೆ ನೀವು ಇಷ್ಟಪಡುವ ಇತರ ತರಕಾರಿಗಳನ್ನು ನೀವು ಬಳಸಬಹುದು. ಉದಾಹರಣೆಗೆ ಕ್ಯಾಬೇಜ್‌ನೊಂದಿಗೆ ಕ್ಯಾರೇಟ್ ಮತ್ತು ಈರುಳ್ಳಿಯನ್ನು ಸೇರಿಸಿ ಸೂಪ್‌ನ ರುಚಿ ಹೆಚ್ಚಿಸಿಕೊಳ್ಳಬಹುದು. ಇಲ್ಲಿದೆ ನಿಮಗೆ ಇಷ್ಟವಾಗುವ ಸೂಪ್ ಡಯೆಟ್ ಕ್ಯಾಬೇಜ್ ಸೂಪ್. ಇದೊಂದು ಸರಳ ರೆಸಿಪಿಯಾಗಿದ್ದು ನೀವು ಟ್ರೈ ಮಾಡಲೇಬೇಕು.

ಪ್ರಮಾಣ: 3 ಜನರಿಗೆ ಸಾಕಾಗುವಷ್ಟು
ತಯಾರಿಗೆ ಬೇಕಾಗುವ ಸಮಯ: 10 ನಿಮಿಷಗಳು
ಕುಕ್ಕಿಂಗ್ ಸಮಯ: 25-30 ನಿಮಿಷಗಳು

ಸಾಮಾಗ್ರಿಗಳು:
1. ಕ್ಯಾಬೇಜ್ - 1 (ಕತ್ತರಿಸಿದ್ದು)
2. ಕ್ಯಾರೇಟ್ -2 (ಕತ್ತರಿಸಿದ್ದು)
3.ಈರುಳ್ಳಿ - 2 (ಕತ್ತರಿಸಿದ್ದು)
4.ಕೋರ್ನ್ ಫ್ಲೋರ್- 1/2 ಟೇ.ಸ್ಫೂನ್
5.ಕಾಳುಮೆಣಸು- 1 ಟೇಸ್ಪೂನ್ (ಹುಡಿಮಾಡಿದ್ದು)
6. ಉಪ್ಪು - ರುಚಿಗೆ ತಕ್ಕಂತೆ
7. ಬೆಣ್ಣೆ - 1ಟೇ ಸ್ಫೂನ್

ಮಾಡುವ ರೀತಿ

1. ಎಲ್ಲಾ ತರಕಾರಿಗಳನ್ನು ತೊಳೆದುಕೊಂಡು ಪಕ್ಕದಲ್ಲಿರಿಸಿ.

2.ಕುಕ್ಕರ್ ಬಿಸಿ ಮಾಡಿಕೊಂಡು ಅದಕ್ಕೆ ನೀರು ಹಾಕಿ.

3.ಎಲ್ಲಾ ತರಕಾರಿಗಳನ್ನು ಅಂದರೆ ಕ್ಯಾಬೇಜ್, ಕ್ಯಾರೇಟ್, ಮತ್ತು ಈರುಳ್ಳಿಗಳನ್ನು ಕುಕ್ಕರ್‌ಗೆ ಹಾಕಿ

4.ಚೆನ್ನಾಗಿ ಮಿಶ್ರ ಮಾಡಿಕೊಂಡು 3-4 ವಿಶಲ್ ಬರುವವರೆಗೆ ಬೇಯಿಸಿಕೊಳ್ಳಿ

5.ಕುಕ್ಕರ್ ತಣಿದು ಆವಿ ಆರಿದ ನಂತರ ಮುಚ್ಚಳ ತೆರೆಯಿರಿ.

6. ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಕರಗಿಸಿಕೊಳ್ಳಿ. ಸೂಪ್ ಅನ್ನು ಹಾಕಿ, ಇದಕ್ಕೆ ಕಾಳುಮೆಣಸಿನ ಹುಡಿ ಮತ್ತು ಉಪ್ಪು ಹಾಕಿ.

7. ಸ್ವಲ್ಪ ದಪ್ಪಗಾಗಿ ಸೂಪ್ ನಿಮಗೆ ಬೇಕಿದ್ದಲ್ಲಿ, ಕಾರ್ನ್ ಫ್ಲೋರ್ ಹಾಕಿ ಗಂಟು ಬೀಳದಂತೆ ಸರಿಯಾಗಿ ಮಿಶ್ರ ಮಾಡಿಕೊಳ್ಳಿ.

ಕಾಳುಮೆಣಸು ಮತ್ತು ಕ್ಯಾಬೇಜ್ ಸೂಪ್ ಸವಿಯಲು ಸಿದ್ಧವಾಗಿದೆ. ಬಿಸಿ ಬಿಸಿಯಾಗಿ ಬಡಿಸಿ. ಈ ಚಳಿಗಾಲಕ್ಕಾಗಿ ನೆಗಡಿ ಮುಂತಾದವುಗಳಿಂದ ಕಾಪಾಡಲು ಮತ್ತು ದೇಹವನ್ನು ಬೆಚ್ಚಗಿರಿಸಲು ಇದು ಸಹಾಯ ಮಾಡುತ್ತದೆ.

English summary

Cabbage Pepper Soup For Weight Loss

So the festivities are finally over. You have eaten all types of calorie-rich foods and desserts during the celebrations. However, you cannot resist or stop yourself all the time to eat what you like. So, after the festivities are over, you can come back back to your diet.
 
X
Desktop Bottom Promotion