For Quick Alerts
ALLOW NOTIFICATIONS  
For Daily Alerts

ನುಚ್ಚಿನುಂಡೆ - ಮಜ್ಜಿಗೆ ಹುಳಿ ಗಣನಾಯ್ಕ

By Super
|
Delicious, Nutricious Nuchchinunde
ನುಚ್ಚಿನುಂಡೆ ಮಾಡಿದ್ದೆ ಮಗೂ ಇವತ್ತು ಎಂದಳು ಅಮ್ಮ ಈ ಶನಿವಾರ ಫೋನಾಯಿಸಿದಾಗ ಹೊಟ್ಟೆಯಲ್ಲಿ ಏನೋ ಒಂಥರ. ಬಾಯಲ್ಲಿ ನೀರೂರಿತು. ಇವ್ರೇನೋ ಮಾಡೋಹಾಗೆ ಮಾಡಿಬಿಟ್ಟು ಫೋನುಮಾಡಿ ಬಾಯಲ್ಲಿ ನೀರೂರುವಂತೆ ಮಾಡುತ್ತಾರೆ. ನಾವೂ ಹಂಗೆ ಸುಮ್ಕೆ ಕುಂತ್ರೆ ಆದೀತಾ. ತಿನ್ಬೇಕು ಅಂತನ್ಸಿದ್ರೆ ಆಗ್ಲೇ ಮಾಡ್ಕೊಂಡು ತಿನ್ಬೇಕಂತೆ. ಆಗಲೇ ಹೊಟ್ಟೆಗೆ ಹತ್ತೋದು. ಸರಿ ಸುಚ್ಚಿನಂಡೆ ಮಾಡೋಕ್ಕೆ ಶುರು ಮಾಡೇಬಿಟ್ಟೆ. ನುಚ್ಚಿನುಂಡೆ - ಮಜ್ಜಿಗೆಹುಳಿ ವಾಹ್ ಕ್ಯಾ ಬಾತ್ ಹೈ.

ನಾವು ಚಿಕ್ಕವರಿದ್ದಾಗ ಪಿಟ್ಜಾ, ಚಾಟ್, ಗೋಬಿ-ಮಂಚೂರಿಯನ್ ಯಾವುದೂ ಇರದ ಕಾಲ. ನುಚ್ಚಿನುಂಡೆ, ಗುಲ್‌ಪಾವಟಿ, ರಾಗಿ ಹುರಿಟ್ಟು, ಕಡ್ಲೆಪುರಿ ಜೊತೆಗೆ ತಾಜಾ ತಾಜಾ ಕಳ್ಳೇಕಾಯ್ ಕಾಲವದು. ಓಲ್ಡ್ ಈಸ್ ಗೋಲ್ಡ್. ಪ್ರೋಟೀನ್ ಪುಷ್ಕಳ, ತಿನ್ನಲೂ ಸ್ವಾದಿಷ್ಟ. ಬಿಸಿಬಿಸಿ ನುಚ್ಚಿನುಂಡೆ ಮೇಲೆ ಗಟ್ಟಿ ತುಪ್ಪ.. ಬಾಯಲ್ಲಿ ನೀರೂರದೇ ಇದ್ದೀತೇ?

ಬೇಕಾಗುವ ಸಾಮಗ್ರಿ

ತೊಗರಿಬೇಳೆ : 1 ಕಪ್
ಕಡಲೆಬೇಳೆ : 1 ಟೀ ಸ್ಪೂನ್
ಹಸಿಮೆಣಸಿನಕಾಯಿ : 3 ಅಥವಾ 4
ಕೆಂಪು ಮೆಣಸಿನಕಾಯಿ : 3
ತೆಂಗಿನತುರಿ : 1/4 ಕಪ್

ಕರಿಬೇವು, ಕೊತ್ತಂಬರಿ, ಚಿಟಿಕೆ ಹಿಂಗು, ಶುಂಠಿ, ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು.

ಮಾಡುವ ವಿಧಾನ

3 ಗಂಟೆಕಾಲ ತೊಗರಿಬೇಳೆಯನ್ನು ನೆನೆಸಿಡಿ. ನೀರನ್ನು ಬಸಿದು ಮೆಣಸಿನಕಾಯಿ, ಕೊತ್ತಂಬರಿ, ಕಾಯಿ, ಶುಂಠಿ, ಉಪ್ಪು ಸೇರಿಸಿ ಸ್ವಲ್ಪ ತರಿ-ತರಿಯಾಗಿ, ನೀರು ಹಾಕದೆ ಗಟ್ಟಿಯಾಗಿ ರುಬ್ಬಿ. ಇಡ್ಲಿ ಪ್ಲೇಟಿನಲ್ಲಿ ಎಣ್ಣೆ ಸವರಿ ರುಬ್ಬಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ 10 ನಿಮಿಷ ಆವಿಯಲ್ಲಿ ಬೇಯಿಸಿ.

ಬಿಸಿಯಾಗಿ ತುಪ್ಪ ಹಾಕಿಕೊಂಡು ತಿನ್ನಿ ಅಥವಾ ಮಜ್ಜಿಗೆ ಹುಳಿ ಮಾಡಿ ಅದರಲ್ಲಿ ಹಾಕಿ ತಿನ್ನಿ.

ಆರಿದರೆ/ಮಿಕ್ಕಿದರೆ : ಬೇಯಿಸಿದ ಅವರೆಕಾಳು ಅಥವಾ ಸ್ವಲ್ಪವೇ ಹುರಿದ ಮೆಂತ್ಯಸೊಪ್ಪಿಗೆ ಆರಿದ ಉಂಡೆಗಳನ್ನು ಪುಡಿ ಮಾಡಿ ಒಗ್ಗರಣೆ ಹಾಕಿ ಪಲ್ಯ ಮಾಡಿ. ಬಲು ರುಚಿಯಾಗಿರುತ್ತೆ.

ನುಚ್ಚಿನುಂಡೆ ಜೊತೆ ಮಜ್ಜಿಗೆ ಹುಳಿ ಒಳ್ಳೇ ಕಾಂಬಿನೇಷನ್ ಅಂತ ಹೇಳಿ ಮಜ್ಜಿಗೆ ಹುಳಿ ಬಗ್ಗೆ ಕೊಟ್ಟೇ ಇಲ್ಲ ಅಂತ ತಗಾದೆಯಾ?

X
Desktop Bottom Promotion