For Quick Alerts
ALLOW NOTIFICATIONS  
For Daily Alerts

ಸಹೃದಯರಿಗೊಪ್ಪುವ ಕೊತ್ತ೦ಬರಿ ನಿಪ್ಪಟ್ಟು

By Staff
|

*ಮ೦ಜುಳಾ ಬಾಲರಾಜ್, ವಿದ್ಯಾಪೀಠ ಬೆಂಗಳೂರು

nippattu
ಕುರಕಲು ತಿಂಡಿ ತಿನ್ನಬೇಡ ಎಂದು ವೈದ್ಯರು ಹೇಳುತ್ತಲೇ ಇರುತ್ತಾರೆ. ಆರೋಗ್ಯದ ದೃಷ್ಟಿಯಿಂದ ಅವರು ಹೇಳುವುದು ಸರೀನೇ. ಆದರೆ ನಾವು ಮಾತ್ರ ಅಯ್ಯೋಪಾಪ. ಬಾಯಿ ಚಪಲ ತೀರಿಸಿಕೊಳ್ಳುವುದು ಹೇಗೆ? ಅಪರೂಪಕ್ಕೋ ಎಂಬಂತೆ ಒಂದೆರಡು ನಿಪ್ಪಟ್ಟು ತಿನ್ನಿ ಸಾಕು!ಎನ್ನುತ್ತಾರೆ ದಟ್ಸ್ ಕನ್ನಡ ಪಾಕಶಾಲೆಯ ಯಜಮಾನರು.

ಹೊರಗಡೆ ತಲೆಹಾಕಿದರೆ ಕೆಟ್ಟ ಚಳಿ. ಯಾವುದೋ ಅಂಗಡಿಯಲ್ಲಿ ದೊರೆಯುವ, ಯಾವ ಎಣ್ಣೆಯಲ್ಲೋ ಕರಿದ ಕೋತಿನಾಷ್ಠಗಳನ್ನು ಮೇಯುವುದಕ್ಕಿಂತ ಮನೆಯಲ್ಲೇ ಮಾಡಿಕೊಂಡ ಎಣ್ಣೆ ತಿಂಡಿಯನ್ನು ಮೆಲ್ಲುವುದು ಶೇಖಡ 90% ಸೇಫ್. ಆದ್ದರಿಂದ 2008ರಲ್ಲಿ ಕರ್ನಾಟಕದಲ್ಲಿ ವಾಯುಭಾರಕುಸಿತದಿಂದ ತಲೆದೋರಿರುವ ಮಳೆಚಳಿಗಾಲಕ್ಕೆ ಹೊಂದುವ ಮೃದು ಮಧುರ ನಿಪ್ಪಟ್ಟನ್ನು ಮಾಡುವ ಬಗೆಯನ್ನು ನಾವೀಗ ಕಲಿಯೋಣ.

ಬೇಕಾಗುವ ಸಾಮಗ್ರಿಗಳು:
*ಸಣ್ಣಗೆ ಹೆಚ್ಚಿದ ಕೊತ್ತ೦ಬರಿ ಸೊಪ್ಪು
*ಕಡಲೆಹಿಟ್ಟು 1 ಕಪ್
*ಅರ್ಧ ಕಪ್ ಸಣ್ಣ ರವೆ
*ಕಾಲು ಕಪ್ ಬಿಳಿ ಎಳ್ಳು
*ತುಪ್ಪ 5 ಚಮಚ, ಹಿಡಿ ಕೊಬ್ಬರಿ ತುರಿ, ಚೂರು ಗಸಗಸೆ
*ರುಚಿಗೆ ಬೇಕಾದಷ್ಟು ಉಪ್ಪು,
*ಹಸಿಮೆಣಸಿನಕಾಯಿ 6,
*ಎರಡು ಚಮಚೆ ಪುಡಿ ಸಕ್ಕರೆ ಕಾಲು ಚಮಚ ಬೇಕಿ೦ಗ್ ಪೌಡರ್
*ಕರಿಯುವುದಕ್ಕೆ ಸನ್ ಫ್ಲವರ್ ಗೋಲ್ಡ್ ಎಣ್ಣೆ
ನಿಪ್ಪಟ್ಟು ತಯಾರಿಸುವ ವಿಧಾನ:
ಅಂಟುಪುರಲೆಯಲ್ಲದ ಬಾಣಲೆಯಲ್ಲಿ ಒಂದು ಚಮಚ ತುಪ್ಪ ಬಿಸಿ ಮಾಡಿಕೊ೦ಡು ಅದಕ್ಕೆ ಎಳ್ಳು, ಗಸಗಸೆ, ಕೊಬ್ಬರಿ ತುರಿ ಹಾಕಿ ಹದವಾಗಿ ಹುರಿಯಬೇಕು. ಆನಂತರ, ಅದಕ್ಕೆ ಹಸಿಹಸಿಯಾಗಿ ರುಬ್ಬಿಕೊಂಡ ಹಸಿಮೆಣಸಿನಕಾಯಿ ಚಟ್ನಿ ಮತ್ತು ಕೊತ್ತ೦ಬರಿ ಸೊಪ್ಪು ಸೇರಿಸಬೇಕು. ಮತ್ತಷ್ಟು ಹುರಿದಾದ ಮೇಲೆ ಬರ್ನರ್ ಆಫ್ ಮಾಡಿ ಆರಲು ಬಿಡಬೇಕು.

ಚೆನ್ನಾಗಿ ಆರಿದ ನ೦ತರ, ಉಳಿದ (ಮೇಲಿನ ಪದಾರ್ಥಗಳನ್ನು ಮತ್ತು ಕಡಲೆಹಿಟ್ಟನ್ನು ಕಲಸಬೇಕು. ಈ ಹಂತದಲ್ಲಿ ಸ್ವಲ್ಪ ತುಪ್ಪ ಬೆರೆಸಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಬೇಕು. ನಂತರ,ಸಣ್ಣ ಉ೦ಡೆಗಳಾಗಿಸಿ ಜಿಡ್ಡು ಸವರಿದ ಪ್ಲಾಸ್ಟಿಕ್ ಶೀಟ್ ಮೇಲೆ ನಿಪ್ಪಟ್ಟನ್ನು ಕೈಯಲ್ಲಿ ತಟ್ಟಿಕೊ೦ಡು ಕಾದ ಎಣ್ಣೆಯಲ್ಲಿ ತೇಲಿ ಬಿಡಬೇಕು. ಮಹಿಳೆಯರೆ ಮತ್ತು ಮಹನೀಯರೆ;ನಿಪ್ಪಟ್ಟಾಗಲೀ, ಓಂಪುಡಿಯಾಗಲೀ, ಕೋಡುಬಳೆಯಾಗಲೀ ಅಥವಾ ಇನ್ನಿತರ ಯಾವುದೇ ಕರಿದ ತಿಂಡಿಯಾಗಲೀ, ಎಣ್ಣೆಯಲ್ಲಿ ಬೇಯುವ ತಿಂಡಿ ಕಪ್ಪಾಗಬಾರದು, ಕಂದಾಗಬಾರದು, ಬಿಳಚಿಕೊಂಡಿರಬಾರದು!ಅಂಥ ಬಣ್ಣ ಬರುವುತನಕ ಜಾಲರಿ ಸುಮ್ಮನಿರಬಾರದು.

Story first published: Tuesday, November 25, 2008, 14:09 [IST]
X
Desktop Bottom Promotion