For Quick Alerts
ALLOW NOTIFICATIONS  
For Daily Alerts

ಗರಿಗರಿ ಸಮೋಸಾ

By Super
|
Samosa
ಜಬತಕ್‌ ಸಮೋಸೆಮೆ ರಹೇಗಾ ಆಲೂ, ಜಂಗಲ್‌ಮೆ ಭಾಲೂ, ತಬತಕ್‌ ಸೆಂಟರ್‌ಮೆ ರಹೇಗಾ ಲಾಲೂ - ಅಂತ ಈಗಿನ ಕೇಂದ್ರ ರೈಲು ಸಚಿವ ಲಾಲೂ ನಮ್ಮ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ತಮಾಶೆ ಮಾಡಿದ್ದರು. ಲಾಲೂಗೆ ಆಲೂ ತುಂಬಿದ ಸಮೋಸಾ ಪ್ರಾಣ ಅಂತ ಸೆಪರೇಟಾಗಿ ಹೇಳಬೇಕಾಗಿಲ್ಲ.

ಅಲ್ಲ, ಸಮೋಸಾ ಅಂದ್ರೆ ಯಾರಿಗೆ ಬಾಯಲ್ಲಿ ನೀರು ಬರೋದಿಲ್ಲ ಹೇಳಿ. ರೈಲಲ್ಲಿ, ಹೋಟೆಲಲ್ಲಿ, ಮಾರ್ಕೆಟಲ್ಲಿ, ರೋಡ್‌ಸೈಡ್‌ ಡಬ್ಬಿ ಅಂಗಡಿಗಳಲ್ಲಿ ಎಲ್ಲೆಂದರಲ್ಲಿ ಸಮೋಸ ಸರ್ವಾಂತರ್ಯಾಮಿ. ಏನೇ ಆಗಲಿ, ಎಲ್ಲೆಂದರಲ್ಲಿ ಸಮೋಸ ತಿನ್ನುವ ಬದಲು ಮನೆಯಲ್ಲಿಯೇ ಒಳ್ಳೆಯ ಎಣ್ಣೆಯಲ್ಲಿ ಕರಿದ ಸಮೋಸ ಆರೋಗ್ಯಕ್ಕೂ ಒಳ್ಳೆಯದು, ರುಚಿಗೂ ಮೋಸವಿಲ್ಲ. ಏನಂತೀರಾ?

ಅಗತ್ಯ ಪದಾರ್ಥಗಳು :

1/2 ಕಪ್‌ ಬಟಾಣಿ ಕಾಳು -1/2 ಕಪ್‌
ಮೆಣಸಿನ ಕಾಳು --1ಟೀ ಚಮಚ
ಹೆಚ್ಚಿದ ಈರುಳ್ಳಿ -2
ದೊಡ್ಡ ಗಾತ್ರದ ಆಲೂಗಡ್ಡೆ -2
ಮೆಣಸಿನ ಕಾಯಿ ಪುಡಿ
ನಿಂಬೆ ರಸ
ಗರಮ್‌ ಮಸಲಾ
ಕರಿಬೇವು ಎಲೆ
ಮೈದಾ -1ಕಪ್‌
ಬೇಕಿಂಗ್‌ ಪುಡಿ
ಬೇಕಿಂಗ್‌ ಸೋಡಾ

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಬಟಾಣಿ ಕಾಳು, ನೀರು, ಉಪ್ಪು ಹಾಕಿ 10ನಿಮಿಷಗಳ ಕಾಲ ಕುದಿಸಿ. ಬಟಾಣಿ ಬೆಂದ ನಂತರ ಕೆಳಗಿಳಿಸಿ. ನಂತರ ತಣ್ಣೀರಿನಲ್ಲಿ ಹಾಕಿ ಬಸಿದಿಟ್ಟುಕೊಳ್ಳಿ.

ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ. ಅದಕ್ಕೆ ಸಾಸಿವೆಕಾಳು, ಹಸಿ ಮೆಣಸಿನಕಾಯಿ ಮತ್ತು ಶುಂಠಿಯನ್ನು ಹಾಕಿ ಸ್ವಲ್ಪಹೊತ್ತು ಕರಿಯಿರಿ. ಆನಂತರ ಇದರಲ್ಲಿ ಕತ್ತರಿಸಿದ ಹಸಿ ಆಲೂಗಡ್ಡೆ ತುಂಡುಗಳನ್ನು ಹಾಕಿ ಸೌಟಿನಿಂದ ತಿರುವಿ. ಅದಕ್ಕೆ ಕೆಂಪು ಖಾರದ ಪುಡಿ, ಉಪ್ಪು, ಒಣಗಿದ ಮಾವಿನ ಪುಡಿ ಮತ್ತು ಗರಂ ಮಸಾಲೆ ಹಾಕಿ ಚೆನ್ನಾಗಿ ಕಲಸಿ. ಆನಂತರ 10 ನಿಮಿಷ ಆಲೂಗಡ್ಡೆ ಕುದಿಯುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಈಗ ಈ ಮಿಶ್ರಣಕ್ಕೆ ಬೇಯಿಸಿಟ್ಟುಕೊಂಡ ಬಟಾಣಿಯನ್ನು ಹಾಕಿ ಕಲಸಿರಿ. ಇದು ತಣ್ಣಗಾದ ಮೇಲೆ ಕೊತ್ತಂಬರಿ ಸೊಪ್ಪನ್ನು ಬೆರೆಸಿ.

ಬೇಕಿಂಗ್‌ ಪೌಡರ್‌, ಬೇಕಿಂಗ್‌ ಸೋಡಾ, ಉಪ್ಪು ಮತ್ತು ಮೈದಾ ಹಿಟ್ಟನ್ನು ಎಣ್ಣೆ ಅಥವಾ ತುಪ್ಪದಲ್ಲಿ ನಾದಿಕೊಳ್ಳಿ. ನಾದಿದ ಹಿಟ್ಟನ್ನು 15 ನಿಮಿಷಗಳ ಕಾಲ ಒದ್ದೆ ಬಟ್ಟೆಯಲ್ಲಿ ಸುತ್ತಿಡಿ. ಆಮೇಲೆ ಅದನ್ನು ಸರಿಯಾಗಿ 16 ಉಂಡೆಗಳಾಗಿ ಭಾಗಮಾಡಿ. ಉಂಡೆಗಳಿಗೆ ಸ್ವಲ್ಪ ಒಣಹಿಟ್ಟು ಹಚ್ಚಿಕೊಂಡು 4 ಇಂಚು ಸುತ್ತಳತೆಯಲ್ಲಿ ಚಪಾತಿಯಂತೆ ತೀಡಿಟ್ಟುಕೊಳ್ಳಿ.

ಈಗ ತಯಾರು ಮಾಡಿಟ್ಟುಕೊಂಡ ಆಲೂಗಡ್ಡೆ, ಬಟಾಣಿ ಮಿಶ್ರಣವನ್ನು ಒಂದೊಂದು ಸೌಟಿನಷ್ಟು ಹಾಕಿ ಚಪಾತಿಯಂತೆ ಮಾಡಿಟ್ಟುಕೊಂಡಿರುವುದರಲ್ಲಿ ತುಂಬಿರಿ. ಆಮೇಲೆ ಮಧ್ಯಮ ಪ್ರಮಾಣದಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಬಂಗಾರದ ಬಣ್ಣ ಬರುವಂತೆ ಕರಿಯಿರಿ. ಈಗ ನಿಮ್ಮಿಷ್ಟದ ಗರಿಗರಿಯಾದ ಸಮೋಸಾ ರೆಡಿ.

Read more about: samosa ತಿಂಡಿ tindi snacks
English summary

Delicious Samosa | Evening snacks | ಸ್ವಾದಿಷ್ಟಕರ ಸಮೋಸಾ

Karnataka kitchen : Potato filled Samosa is every bodies favorite snacks. This is good for health if it is fried in a good oil.
Story first published: Wednesday, March 28, 2012, 15:10 [IST]
X
Desktop Bottom Promotion