For Quick Alerts
ALLOW NOTIFICATIONS  
For Daily Alerts

ಟೊಮೆಟೊ-ಸೌತೆ ಸಲಾಡ್ ಹಸಿಯಾಗಿ ತಿನ್ನಿ

By Super
|
Tomato-cucumber salad
ಸಂಜೆ ಸಮಯ ಏನಾದರೂ ತಿನ್ನಬೇಕೆನಿಸಿದಾಗ ತುಂಬಾ ಸುಲಭ ಮತ್ತು ಆರೋಗ್ಯಕರವಾದ ಈ ಟೊಮೆಟೊ-ಸೌತೆ ಸಲಾಡ್ ಮಾಡಿ ತಿನ್ನಿ. ಬೇಯಿಸುವುದು, ಕಾಯಿಸುವುದು, ಯಾವುದರ ಗೊಡವೆಯೂ ಇಲ್ಲದೆ ಫಟ್ ಅಂತ ಮಾಡಿ ತಿಂದು ಮುಗಿಸಬಹುದಾದ ಈ ಸಲಾಡ್ ನಿಮ್ಮ ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತೆ.

ಬೇಕಾಗುವ ಸಾಮಾನು:
* 2 ಟೊಮೆಟೊ
* 1 ಈರುಳ್ಳಿ
* ಕೊತ್ತಂಬರಿ ಸೊಪ್ಪು
* ಪುದೀನ
* ಸೌತೆಕಾಯಿ
* ನಿಂಬೆಹಣ್ಣಿನ ರಸ
* ಉಪ್ಪು, ಆಲಿವೆ ಎಣ್ಣೆ

ಟೊಮೆಟೊ ಸಲಾಡ್ ಮಾಡುವ ವಿಧಾನ:
* ಟೊಮೆಟೊ, ಈರುಳ್ಳಿ ಮತ್ತು ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು ಎಲ್ಲವನ್ನೂ ಬೆರೆಸಿಕೊಳ್ಳಬೇಕು.
* ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನಾವನ್ನು ಇದಕ್ಕೆ ಬೆರೆಸಿ ಚೆನ್ನಾಗಿ ಕಲೆಸಬೇಕು.
* ನಂತರ ಇದರ ಮೇಲೆ ನಿಂಬೆರಸ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಆಲಿವ್ ಎಣ್ಣೆ ಬೆರೆಸಬೇಕು. ಇನ್ನೊಮ್ಮೆ ಚೆನ್ನಾಗಿ ಕದಡಿ 5-10 ನಿಮಿಷ ಬಿಟ್ಟು ತಿಂದರೆ ಟೊಮೆಟೊ-ಸೌತೆ ಸಲಾಡ್ ಸಖತ್ ಆಗಿರುತ್ತೆ.

English summary

Tomato Cucumber Salad Recipe | Healthy Tomato Raw Salad Recipe | ಟೊಮೆಟೊ-ಸೌತೆ ಸಲಾಡ್ ರೆಸಿಪಿ | ಆರೋಗ್ಯಕರ ಟೊಮೆಟೊ ಖಾದ್ಯ

Since the season is monsoon, it is always nice to relish some tasty snack item. Snacks may need not be prepared by cooking or baking. it is tastier even when prepared raw. Take a look at how to go about with the tomato cucumber salad recipe.
X
Desktop Bottom Promotion