For Quick Alerts
ALLOW NOTIFICATIONS  
For Daily Alerts

ಕಿಟ್ಟಿ ಪಾರ್ಟಿಗೆ ಕಲರ್ ಫುಲ್ ಕ್ರಿಸ್ಪಿ ಬ್ರೆಡ್ ಪಿಜ್ಜಾ

|
Bread
ಬ್ರೆಡ್ ಪಿಜ್ಜಾ ಸಣ್ಣ ಪಾರ್ಟಿಗಳಿಗೆ ಮಾಡಬಹುದಾದ ಸುಲಭವಾದ ಮತ್ತು ಸ್ವಾದವಾದ ಸ್ನಾಕ್ಸ್. ಕೇವಲ ಮಕ್ಕಳಿಗೆ ಮಾತ್ರವಲ್ಲ, ನಿಮಗೂ ಕೂಡ ಬ್ರೆಡ್ ಪಿಜ್ಜಾ ತುಂಬಾ ಇಷ್ಟ ಆಗುತ್ತೆ. ಹೊರಗೆ ಪಿಜ್ಜಾ ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಮನೆಯಲ್ಲೇ ಬ್ರೆಡ್ ಪಿಜ್ಜಾ ತಯಾರಿಸಿ ತಿನ್ನಬಹುದು.

ಬ್ರೆಡ್ ಪಿಜ್ಜಾ ಗೆ ಬೇಕಾಗುವ ಪದಾರ್ಥಗಳು:

* 4 ಬ್ರೆಡ್ ಪೀಸ್ ಗಳು
* ಕತ್ತರಿಸಿದ ಈರುಳ್ಳಿ, ಟೊಮೊಟೊ ಮತ್ತು ಕ್ಯಾಪ್ಸಿಕಂ (ದುಂಡು ಮೆಣಸಿನಕಾಯಿ)
* ಮೂರು ಅಣಬೆ ಚೂರು
* ಬೆಣ್ಣೆ, ಮೊಜೆರಲ್ಲಾ ಚೀಸ್
* ಉಪ್ಪು, ಸಕ್ಕರೆ, ಪಿಜ್ಜಾ ಸಾಸ್

ಬ್ರೆಡ್ ಪಿಜ್ಜಾ ತಯಾರಿಸುವ ವಿಧಾನ:
ಮೊದಲು ಬಾಣಲೆ ಕಾಯಿಸಿ ಅದಕ್ಕೆ ಬೆಣ್ಣೆ ಹಾಕಬೇಕು. ನಂತರ ಕತ್ತರಿಸಿಟ್ಟ ತರಕಾರಿಗಳನ್ನು ಹಾಕಬೇಕು. ಅದರ ಬಣ್ಣ ಕೆಂಪಾಗುವ ತನಕ ಹುರಿದು ಅದಕ್ಕೆ ರುಚಿಗೆ ತಕ್ಕಂತೆ ಉಪ್ಪು ಮತ್ತು ಸಕ್ಕರೆ ಬೆರೆಸಿ ಬಾಣಲೆಯಿಂದ ಆವಿ ಬರಯವವರೆಗೂ ತಿರುಗಿಸುತ್ತಿರಬೇಕು. ಈಗ ಬ್ರೆಡ್ ಪೀಸ್ ಗಳಿಗೆ ಪಿಜ್ಜಾ ಸಾಸ್ ಹಾಕಿ ಈ ತರಕಾರಿಗಳ ಮಿಶ್ರಣವನ್ನು ಬ್ರೆಡ್ ಮೇಲೆ ಹಾಕಬೇಕು.

ಅದರ ಮೇಲೆ ಚೀಸ್ ಹಾಕಿ ಈಗ ಬ್ರೆಡ್ ಪೀಸ್ ಗಳನ್ನು 3-4 ನಿಮಿಷ ಓವೆನ್ ನಲ್ಲಿ ಬಿಸಿ ಮಾಡಬೇಕು. ಬ್ರೆಡ್ ಕ್ರಿಸ್ಪಿ ಆಗುವುದರೊಂದಿಗೆ ಚೀಸ್ ಕೂಡ ಕರಗಿ ತುಂಬಾ ಸ್ವಾದಭರಿತವಾಗಿರುತ್ತದೆ. ಬ್ರೆಡ್ ಪಿಜ್ಜಾ ತಿನ್ನಲು ಮಜವಾಗಿರುತ್ತದೆ.

English summary

Bread pizza | Bread pizza party snack | ಬ್ರೆಡ್ ಪಿಜ್ಜಾ | ಪಾರ್ಟಿಗಳಿಗೆ ಬ್ರೆಡ್ ಪಿಜ್ಜಾ ರೆಸಿಪಿ

Bread pizza is an easy to make party snack recipe. And it is also good for health. So check out the recipe to make bread pizza.
Story first published: Tuesday, August 16, 2011, 13:09 [IST]
X
Desktop Bottom Promotion