For Quick Alerts
ALLOW NOTIFICATIONS  
For Daily Alerts

ನೈವೇದ್ಯ ಮಾಡಿದ ಮೇಲೆ ಆಂಬೊಡೆ ಸ್ವಾಹಾ

|
Ambode
ವರಮಹಾಲಕ್ಷ್ಮಿ ಹಬ್ಬ ಇನ್ನೇನು ಬಂದೇ ಬಿಡ್ತು. ಸಿಹಿಯೊಂದಿಗೆ ಖಾರದ ಅಡುಗೆಯೂ ಹಬ್ಬಕ್ಕೆ ಇರಲೇಬೇಕು. ಐದು ರೀತಿಯ ಸಿಹಿ ತಿಂಡಿಯೊಂದಿಗೆ ನೆನೆಸಿದ ಕಡಲೆಬೇಳೆಯನ್ನು ಲಕ್ಷ್ಮಿಗೆ ನೈವೇದ್ಯಕ್ಕೆ ಇಡುವುದು ರೂಢಿ. ಆನಂತರ ಅದರಿಂದ ವಡೆ ತಯಾರಿಸಲಾಗುತ್ತೆ. ಕರ್ನಾಟಕದ ಈ ವಿಶೇಷ ತಿಂಡಿ ಗರಂ ಗರಂ ಆಂಬೊಡೆಯನ್ನು ತಯಾರಿಸುವುದು ಹೇಗೆ ಎಂದು ನೋಡೋಣ.

ಬೇಕಾಗುವ ಪದಾರ್ಥಗಳು:
* 250 ಗ್ರಾಂ ಕಡಲೆಬೇಳೆ
* 4 ಹಸಿ ಮೆಣಸಿನಕಾಯಿ (ಸಣ್ಣದಾಗಿ ಕತ್ತರಿಸಿದ್ದು)
* 1 ಚಮಚ ಸಣ್ಣದಾಗಿ ಕತ್ತರಿಸಿದ ಕರಿಬೇವು
* 2 ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
* 1 ಚಮಚ ಇಂಗು
* ಉಪ್ಪು, ಎಣ್ಣೆ, ಕೆಂಪು ಮೆಣಸಿನ ಪುಡಿ

ಆಂಬೊಡೆಯನ್ನು ಹೀಗೆ ಮಾಡಿ:
* ಮೊದಲು ಕಡಲೆ ಬೇಳೆಯನ್ನು 2 ಗಂಟೆ ನೀರಿನಲ್ಲಿ ನೆನೆ ಹಾಕಿ ನೀರನ್ನು ಬೆರೆಸದೆಯೇ ರುಬ್ಬಿಕೊಳ್ಳಬೇಕು.
* ನಂತರ ಅದಕ್ಕೆ ಕತ್ತರಿಸಿದ ಕರಿಬೇವು, ಹಸಿಮೆಣಸಿನ ಕಾಯಿ, ಕೊತ್ತಂಬರಿ, ಸ್ವಲ್ಪ ಇಂಗು ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಬೇಕು.
* ಈಗ ಈ ಮಿಶ್ರಣವನ್ನು ತುಂಬಾ ದಪ್ಪದ್ದಲ್ಲದೆ ತೆಳುವಾಗಿ ವೃತ್ತಾಕಾರವಾಗಿ ತಟ್ಟಿಕೊಂಡು ಎಣ್ಣೆ ಕಾಯಿಸಿ ಅದರೊಳಗೆ ಹಾಕಬೇಕು. ಕೆಂಪಗಾಗುವವರೆಗೂ ಬೇಯಿಸಿ ಎಣ್ಣೆಯಿಂದ ತೆಗೆಯಬೇಕು.
ಈಗ ಗರಂ ಗರಂ ಆಂಬೊಡೆ ಸಿದ್ಧಗೊಂಡಿದೆ. ಮಾಡಲು ತುಂಬಾ ಸುಲಭವಿರುವ ಈ ಆಂಬೊಡೆಯನ್ನು ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ನೈವೇದ್ಯವಾಗಿ ಮತ್ತು ವಿಶೇಷ ತಿಂಡಿಯಾಗಿ ತಯಾರು ಮಾಡಿ.

English summary

Festival recipes | Ambode recipe for varalakshmi festival | ಹಬ್ಬದ ಅಡುಗೆ | ವರಲಕ್ಷ್ಮಿ ಹಬ್ಬಕ್ಕೆ ಆಂಬೊಡೆ

Since the Varamahalakshmi festival is celebrated this Friday, it is time to make some tasty “Ambodes”. Ambodes are the tasty snacks prepared as one of the main items in the feast. Apart from the five types of sweets, women also offer the soaked gram dals as neivedhyam for the goddess and then prepare ambodes out of the prasad. Take a look to know how to make the spicy and crispy ambodes.
Story first published: Thursday, August 11, 2011, 12:26 [IST]
X
Desktop Bottom Promotion