For Quick Alerts
ALLOW NOTIFICATIONS  
For Daily Alerts

ಅಜ್ಜಿ ಅಜ್ಜಿ ಮಾಡಿಕೊಡು ಬದನೆಕಾಯಿ ಬಜ್ಜಿ

By * ಕುಮುದಾ ಶಂಕರ್, ಸೌದಿ ಅರೇಬಿಯಾ
|
Hot brinjal bajji recipe
ಮುಂಗಾರು ಮಳೆ ಸುರಿಸಲು ಮೋಡಗಳು ಅಣಿಯಾಗುತ್ತಿವೆ. ಜೂನ್ ಮೊದಲನೇ ವಾರದಲ್ಲಿ ಹನಿಗಳ ಲೀಲೆ ಶುರುವಾಗಲಿದೆ. ಬೆಂಗಳೂರಿನಲ್ಲಂತೂ ಯಾವಾಗ ಮಳೆ ಸುರಿಯುವುದೋ, ಯಾವಾಗ ಬಿಸಿಲು ಸುರಿಯುವುದೋ ಬಲ್ಲವರೂ ಹೇಳಲು ಸಾಧ್ಯವಿಲ್ಲ. ಸದ್ಯಕ್ಕಂತೂ ಮೋಡ ಮುಸುಕಿದ ವಾತಾವರಣ. ಅಡ್ಡಾಡುವವರ ಕೈಯಲ್ಲೆಲ್ಲಾ ಸನ್ ಮಾರ್ಕಿನ ಛತ್ರಿಗಳು.

ಎಕ್ಸಾಕ್ಟಲಿ ಇಂಥದೇ ಸಮಯದಲ್ಲಿ ಬಿಸಿಬಿಸಿಯಾದ ಬಜ್ಜಿಯನ್ನು ಕಾಫಿಯ ಜೊತೆಗೆ ತಿನ್ನಲು ಮನಸಾಗುವುದು. ಹೊರಗಡೆ ತಿಂದರೆ ಕೆಮ್ಮು ಕಸಾರಿಕೆ ಗ್ಯಾರಂಟಿ ಎಂದು ಅಂದುಕೊಳ್ಳುವವರು ಅಜ್ಜಿಗೆ ಡಿಮ್ಯಾಂಡ್ ಮಾಡಿ ಬಜ್ಜಿ ಮಾಡಿ ತಿನ್ನಿರಿ. ಬೇಸಿಗೆ ರಜಕ್ಕೆಂದು ಅಜ್ಜಿ ಮನೆಗೆ ಹೋಗಿದ್ದರೆ, ಅಜ್ಜಿ ಅಜ್ಜಿ ಮಾಡಿಕೊಡು ಬದನೆಕಾಯಿ ಬಜ್ಜಿ ಅಂತ ಕಾಡಿಸಿ ಪೀಡಿಸಿ ಮಾಡಿಸಿ ತಿನ್ನಿರಿ. ಅಜ್ಜಿ ಇಲ್ಲಂತ ಖಂಡಿತ ಹೇಳಲ್ಲ.

ಬೇಕಾಗುವ ಸಾಮಗ್ರಿಗಳು:

ಬದನೆಕಾಯಿ

ಕಡ್ಲೆಹಿಟ್ಟು - ಒಂದು ಬಟ್ಟಲು

ಅಕ್ಕಿಹಿಟ್ಟು - ಎರಡು ಚಮಚ

ಅಚ್ಚಖಾರದ ಪುಡಿ

ಉಪ್ಪು

ಓಮ್ ಕಾಳು

ಕಾದ ಎಣ್ಣೆ - ಒಂದು ಚಮಚ

ಚಿಟಿಕೆ ಸೋಡ

ಕಲೆಸಲು ಬೇಕಾಗುವಷ್ಟು ನೀರು

ಕರಿಯಲು ಎಣ್ಣೆ

ತಯಾರಿಸುವ ವಿಧಾನ:

ಬದನೆಕಾಯಿಯನ್ನು ತೆಳುವಾಗಿ ಹೆಚ್ಚಿಕೊಂಡು ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಹಾಕಿಡಿ.

ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಓಮ್ ಕಾಳು, ಉಪ್ಪು, ಅಚ್ಚಖಾರದ ಪುಡಿ ಮತ್ತು ಸೋಡ ಹಾಕಿ ಚೆನ್ನಾಗಿ ಬೆರೆಸಿ, ಅದಕ್ಕೆ ಕಾದಿರುವ ಎಣ್ಣೆ ಹಾಕಿ, ಜೊತೆಯಲ್ಲಿ ನೀರು ಹಾಕಿ, ಕಲೆಸಿಕೊಳ್ಳಿ. ಎಲ್ಲವನ್ನು ಚೆನ್ನಾಗಿ ಬೆರೆಸಿ ದೋಸೆ ಹಿಟ್ಟಿನ/ಬಜ್ಜಿಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.

ಎಣ್ಣೆಯನ್ನು ಕಾಯಲು ಇಟ್ಟು, ಅದು ಕಾದ ನಂತರ, ಹೆಚ್ಚಿರುವ ಬದನೆಕಾಯಿಯನ್ನು ಕಲೆಸಿರುವ ಹಿಟ್ಟಿನಲ್ಲಿ ಅದ್ದಿ, ಕಾದಿರುವ ಎಣ್ಣೆಯಲ್ಲಿ ಅದನ್ನು ತೇಲಿಬಿಡಿ. ಅದು ಮೇಲೆ ಬಂದಾಗ ತಿರುವಿ ಹಾಕಿ, ಎರಡು ಬದಿಯೂ ಚೆನ್ನಾಗಿ ಬೇಯಿಸಿ.

ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ರುಚಿರುಚಿಯಾದ ಬದನೆಕಾಯಿ ಬಜ್ಜಿ ತಯಾರ್. ಇದನ್ನು ಬಿಸಿಯಾಗಿ ತಿಂದರೆ ತುಂಬಾ ಚೆನ್ನಾಗಿ ಇರುತ್ತದೆ. ಬೇಕಾದರೆ ಚಟ್ನಿಯೊಂದಿಗೆ ಸರ್ವ್ ಮಾಡಬಹುದು. [ಕೃಪೆ : ಅಡುಗೆ ಸವಿರುಚಿ]

English summary

Hot brinjal bajji recipe | Monsoon special brinjal bajji | ಬಿಸಿಬಿಸಿ ಬದನೆಕಾಯಿ ಬಜ್ಜಿ | ಅಜ್ಜಿ ಅಜ್ಜಿ ಮಾಡಿಕೊಡು ಬಜ್ಜಿ

Hot brinjal bajji recipe, perfect dish for a rainy evening. South west monsoon is ready to hit Karnataka in the first week of June. So, get ready with list of favorite dishes during rainy days. Recipe by Kumuda Shankar, Saudi Arabia.
Story first published: Friday, May 27, 2011, 17:56 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more