For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಮಾಡಬಹುದು ಶುಚಿರುಚಿ ಪಾನಿಪುರಿ

By Super
|
Tasty Pani Puri Recipe
ಸಾಯಾಂಕಾಲ ಪಾನಿಪುರಿ ತಿನ್ನುವುದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಡುತ್ತಾರೆ. ಆದರೆ ತಳ್ಳುಗಾಡಿಯಲ್ಲಿರುವ ಪಾನಿಪುರಿಯನ್ನು ಹೆಚ್ಚಿನ ಜನರು ಇಷ್ಟಪಡುವುದಿಲ್ಲ. ತಳ್ಳುಗಾಡಿಯಲ್ಲಿ ಸಿಗುವ ಪಾನಿಪುರಿ ಶುದ್ಧತೆ ಕುರಿತು ಕೇಳಿಬರುವ ಊಹಾಪೋಹಗಳಿಂದಾಗಿ ತಿನ್ನಲು ಮನಸ್ಸುಒಪ್ಪುವುದಿಲ್ಲ. ಈ ಕಡೆ ಪಾನಿಪುರಿ ತಿನ್ನುವುದನ್ನು ಬಿಡಲು ಮನಸ್ಸು ಬರುವುದಿಲ್ಲ. ಅಷ್ಟೆಲ್ಲ ಧರ್ಮ ಸಂಕಟ ಏಕೆ? ಪಾನಿಪುರಿಯನ್ನು ಮನೆಯಲ್ಲಿಯೆ ತಯಾರಿಸಬಹುದಲ್ಲವೆ?

ಪಾನಿಪುರಿಯನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ಅದರ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಪಾನಿತಯಾರಿಸಲು

ಕೊತ್ತಂಬರಿ ಸೊಪ್ಪು - 1 ಕಟ್ಟು

ಪುದೀನಾ ಸೊಪ್ಪು - 1 ಕಟ್ಟು

ಹಸಿಮೆಣಸಿನಕಾಯಿ - 2 ರಿಂದ 3

ಹುಣಸೆಹಣ್ಣು - ದೊಡ್ಡ ನಿಂಬೆಗಾತ್ರದಷ್ಟು

ನಿಂಬೆಹಣ್ಣು - 1

ಕಾಳುಮೆಣಸು - 2 ಟೀ ಚಮಚ

ಜೀರಿಗೆ - 2 ಟೀ ಚಮಚ

ಉಪ್ಪು - ರುಚಿಗೆ ತಕ್ಕಷ್ಟು

ಕುದಿಸಿ ಆರಿಸಿದ ನೀರು - ಸುಮಾರು ಒಂದೂವರೆ ಲೀಟರ್

ಆಲೂ ಪಲ್ಯ ತಯಾರಿಸಲು:

1 ದೊಡ್ಡ ಆಲೂಗಡ್ಡೆ

ಕೆಂಪು ಮೆಣಸಿನ ಪುಡಿ - 1 / 2 ಚಮಚ

ಕಾಳುಮೆಣಸಿನ ಪುಡಿ - 1 / 4 ಚಮಚ

ಉಪ್ಪು - ರುಚಿಗೆ ತಕ್ಕಷ್ಟು

ಮಾವಿನ ಹಣ್ಣಿನ ಪುಡಿ ( ಆಮ್ ಚ್ಯೂರ್) - 1 / 4 ಚಮಚ ಅಥವಾ ನಾಲ್ಕಾರು ಹನಿ ನಿಂಬೆರಸ

ಮಧ್ಯಮಗಾತ್ರದ ಈರುಳ್ಳಿ - 1

ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಚಮಚ

ತಯಾರಿಸುವ ವಿಧಾನ:

1. ಕರಿಮೆಣಸು, ಜೀರಿಗೆಯನ್ನು ಹುರಿದು ಪುಡಿಮಾಡಿಕೊಳ್ಳಿ. ಹರಳು ಉಪ್ಪನ್ನು ಸೇರಿಸುವುದಾದರೆ ಅದನ್ನೂ ಸ್ವಲ್ಪ ಹುರಿದುಕೊಳ್ಳಬೇಕು.

2. ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹುಣಸೆಹಣ್ಣು, ಹಸಿಮೆಣಸು ಇಷ್ಟನ್ನೂ ಸ್ವಲ್ಪ ನೀರು ಸೇರಿಸಿ ರುಬ್ಬಿ, ಚೆನ್ನಾಗಿ ಸೋಸಿ ಇಟ್ಟುಕೊಳ್ಳಬೇಕು.

3. ಸೋಸಿಕೊಂಡ ರಸಕ್ಕೆ ಬೇಕಾದಷ್ಟು ನೀರನ್ನು ಸೇರಿಸಿ, ಪುಡಿಮಾಡಿದ ಜೀರಿಗೆ, ಕರಿಮೆಣಸನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ನಿಂಬೆರಸವನ್ನು ಸೇರಿಸಿ ಕಲಸಬೇಕು. ಇದರ ರುಚಿ ಉಪ್ಪು, ಹುಳಿ, ಖಾರ ಹದವಾಗಿರಲಿ.

ಆಲೂ ಪಲ್ಯ

1.ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.

2. ಆಲೂಗಡ್ಡೆಯನ್ನು ಬೇಯಿಸಿ, ಕೈಗಳಿಂದ ಹಿಸುಕಿ ಮೆತ್ತಗೆ ಹಿಟ್ಟಿನಂತೆ ಮಾಡಿಕೊಳ್ಳಬೇಕು.

3. ಇದಕ್ಕೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ, ಪುಡಿಮಾಡಿದ ಕಾಳುಮೆಣಸು, ಉಪ್ಪು, ಹುಳಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು.

ಈಗ ಗೋಲ್ ಗಪ್ಪಾ ಅಥವಾ ಪೂರಿಯನ್ನು ತೆಗೆದುಕೊಂಡು ಕೈಯಿಂದ ಒತ್ತಿ ಒಂದು ಮೇಲ್ಮೈಯಲ್ಲಿ ತೂತು ಮಾಡಿಕೊಂಡು ಪೂರಿಯ ಅರ್ಧಭಾಗದವರೆಗೆ ಪಲ್ಯವನ್ನು ತುಂಬಿ, ನಂತರ ಉಳಿದರ್ಧಕ್ಕೆ ಪಾನಿಯನ್ನು ತುಂಬಿಸಿದರೆ ರುಚಿಕರವಾದ ಪಾನಿಪುರಿ ರೆಡಿ.

English summary

Tasty Pani Puri Recipe | Tasty Snacks Recipe | ರುಚಿಕರವಾದ ಪಾನಿಪುರಿ ರೆಸಿಪಿ | ರುಚಿಕರವಾದ ತಿಂಡಿಯ ರೆಸಿಪಿ

Every one would like to eat panipuri. But for most of the people the main problem is hygiene of the panipuri. You don't worry, here is a panipuri recipe. So that you can easily prepare panipuri at home itself.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more