For Quick Alerts
ALLOW NOTIFICATIONS  
For Daily Alerts

ರೆಸಿಪಿ: ಸಿಜ್ವಾನ್ ಚಿಕನ್ ನೂಡಲ್ಸ್ ನೀವೂ ಟ್ರೈ ಮಾಡಿ

Posted By:
|

ನೀವು ನೂಡಲ್ಸ್ ಪ್ರಿಯರೇ? ಹಾಗಾದರೆ ಸಿಜ್ವಾನ್ ನೂಡಲ್ಸ್ ಬಗ್ಗೆ ಪ್ರೀತಿ ತುಸು ಜಾಸ್ತಿನೇ ಇರಬೇಕು ಅಲ್ವಾ? ನೀವು ಮನಸ್ಸು ಮಾಡಿದರೆ ರೆಸ್ಟೋರೆಂಟ್‌ ರುಚಿಯ ಸಿಜ್ವಾನ್ ನೂಡಲ್ಸ್ ಮನೆಯಲ್ಲಿಯೇ ಮಾಡಿ ಸವಿಯಬಹುದು.

Schezwan Chicken Noodles Recipe

ಈ ಚಿಕನ್ ಸಿಜ್ವಾನ್ ನೂಡಲ್ಸ್‌ಗೆ ನೀವು ಟೊಮೆಟೊ ಸಾಸ್‌ಗಿಂತ ಹೆಚ್ಚು ಬಳಸಬೇಕಾಗಿರುವುದು ಗಾರ್ಲಿಕ್ ಸಾಸ್‌. ಈ ಸಂಜೆ ನೀವು ಸಿಜ್ವಾನ್ ನೂಡಲ್ಸ್ ಸವಿಯ ಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ:
Schezwan Chicken Noodles Recipe, ಸಿಜ್ವಾನ್ ಚಿಕನ್ ನೂಡಲ್ಸ್ ರೆಸಿಪಿ
Schezwan Chicken Noodles Recipe, ಸಿಜ್ವಾನ್ ಚಿಕನ್ ನೂಡಲ್ಸ್ ರೆಸಿಪಿ
Prep Time
20 Mins
Cook Time
10M
Total Time
30 Mins

Recipe By: Reena TK

Recipe Type: Noodles

Serves: 4

Ingredients
  • ಬೇಕಾಗುವ ಸಾಮಗ್ರಿ

    ಹಕ್ಕಾ ನೂಡಲ್ಸ್ 4 ಕಪ್ (ಬೇಯಿಸಿದ್ದು)

    ಚಿಕನ್ 500ಗ್ರಾಂ (ಬೇಯಿಸಿ, ಎಳೆ ಎಳೆಯಾಗಿ ಬಿಡಿಸಿ)

    ಬೆಳ್ಳುಳ್ಳಿ ಚಿಕ್ಕದಾಗಿ ಕತ್ತರಿಸಿ.

    ಸೆಲರಿ 1 ಚಮಚ

    ತರಕಾರಿಗಳು 3 ಕಪ್ (ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್ ಮತ್ತು ಕ್ಯಾಬೇಜ್)

    ಸಿಜ್ವಾನ್ ಸಾಸ್ 1/2 ಕಪ್

    ಮೊಳಕೆ ಕಾಳು 1/4

    ಟೋಫು 1/2 ಕಪ್

    ಎಣ್ಣೆ 2 ಚಮಚ

    ಚಿಲ್ಲಿ ಆಯಿಲ್ 1 ಚಮಚ (optional)

    ರುಚಿಗೆ ತಕ್ಕ ಉಪ್ಪು

Red Rice Kanda Poha
How to Prepare
  • ಮಾಡುವ ವಿಧಾನ:

    * ನೀವು ಎಣ್ಣೆಯನ್ನು ಬಿಸಿ ಮಾಡಿ, ನಂತರ ಚಿಲ್ಲಿ ಸೇರಿಸಿ, ಬೆಳ್ಳುಳ್ಳಿ ಹಾಕಿ ಸೌಟ್‌ನಿಂದ ಆಡಿಸಿ.

    (ಗ್ಯಾಸ್‌ ಅನ್ನು ಅಧಿಕ ಉರಿಯಲ್ಲಿ ಇಟ್ಟು ಬಳಸಿ)

    * ಈಗ ಸೆಲರಿ ಮತ್ತು ತರಕಾರಿ ಹಾಕಿ 4-5 ನಿಮಿಷ ಸೌಟ್‌ನಿಂದ ಆಡಿಸಿ.

    * ಈಗ ಚಿಕನ್ ತುಂಡುಗಳನ್ನು ಹಾಕಿ 5 ನಿಮಿಷ ಫ್ರೈ ಮಾಡಿ.

    * ಈಗ ಸಿಜ್ವಾನ್ ಸಾಸ್ ಸೇರಿಸಿ ಒಂದೆರಡು ನಿಮಿಷ ಬಿಸಿ ಮಾಡಿ, ಈಗ ಬೇಯಿಸಿದ ನೂಡಲ್ಸ್, ಮೊಳಕೆ ಕಾಳುಗಳು, ಟೋಫು ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.

    * ರೆಡಿಯಾದ ಚಿಕನ್ ಸಿಜ್ವಾನ್ ನೂಡಲ್ಸ್ ಅನ್ನು ಬಿಸಿ-ಬಿಸಿಯಾಗಿ ಸರ್ವ್ ಮಾಡಿ.

Instructions
  • ಚಿಲ್ಲಿ ಆಯಿಲ್ ಇಲ್ಲದಿದ್ದರೆ ಚಿಲ್ಲಿ ಸಾಸ್ ಬಳಸಿ, ಆದರೆ ಚಿಲ್ಲಿ ಆಯಿಲ್ ಯಾವುದೇ ಆಹಾರದ ಟೇಸ್ಟ್ ಹೆಚ್ಚಿಸುವುದು.
Nutritional Information
[ 4.5 of 5 - 67 Users]
X
Desktop Bottom Promotion