Just In
- 1 hr ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 1 hr ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 3 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 7 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- News Voter Guide: ಮತದಾನ ಮಾಡುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವರಾತ್ರಿ ಸ್ಪೆಷಲ್: ಬಂಗಾಳಿ ಸಂದೇಶ್ ಸ್ವೀಟ್ ರೆಸಿಪಿ
ಹಬ್ಬ ಹಾಗೂ ಉತ್ಸವದ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುವ ಬೆಂಗಾಲಿಯ ಸಿಹಿ ತಿನಿಸು ಸಂದೇಶ್/ಸಂಡೇಶ್. ಪನ್ನೀರು, ಸಕ್ಕರೆ ಪುಡಿ ಮತ್ತು ಗುಲಾಬಿ ನೀರಿನ ಮಿಶ್ರಣದಿಂದ ತಯಾರಿಸಲಾಗುವ ಸರಳ ಹಾಗೂ ರುಚಿಕರವಾದ ತಿನಿಸು ಇದು. ಇದನ್ನು ಫ್ರಿಜ್ನಲ್ಲಿಟ್ಟು ತಂಪುಗೊಳಿಸಿ ಸವಿದರೆ ನಾಲಿಗೆಗೆ ಹೆಚ್ಚು ಆಹ್ಲಾದ ಸಿಗುವುದು.
ಇದು ಬೆಂಗಾಲಿಯ ಸಾಂಪ್ರದಾಯಿಕ ಸಿಹಿ ತಿನಿಸಾಗಿದ್ದರೂ ಭಾರತದಾದ್ಯಂತ ಜನಪ್ರಿಯಗೊಂಡಿದೆ. ಮೃದುವಾದ ಹಾಗೂ ಸಿಹಿ ಭರಿತವಾದ ಈ ತಿನಿಸನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕೆಂದು ಮನ ಹಂಬಲಿಸುತ್ತದೆ. ಈ ವಿಶೇಷ ಸಿಹಿ ತಿಂಡಿಯನ್ನು ನವರಾತ್ರಿ ಸಮಯದಲ್ಲಿ ತಯಾರಿಸಬೇಕೆಂದುಕೊಂಡಿದ್ದರೆ, ನಾವಿಲ್ಲಿ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯ ಮೊರೆ ಹೋಗಬಹುದು.
Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 7-8 ಸಂದೇಶ್/ಸಂಡೇಶ್
-
ಹಾಲು - 1 ಲೀಟರ್
ಐಸ್ ಕ್ಯೂಬ್ಗಳು -1 ಕಪ್
ಹೆಚ್ಚಿಕೊಂಡ ಪಿಸ್ತಾ - 1/4 ಕಪ್
ಸಿಟ್ರಿಕ್ ಆಸಿಡ್ ಹರಳು (ನಿಂಬುವಿನ ಜೊತೆ) -1/4 ಟೀ ಚಮಚ
ಸಕ್ಕರೆ ಪುಡಿ - 3/4 ಕಪ್
ಗುಲಾಬಿ ನೀರು - 2 ಟೇಬಲ್ ಚಮಚ.
-
1. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.
2. ಇದಕ್ಕೆ ಮುಚ್ಚಳವನ್ನು ಮುಚ್ಚಿ, ದೊಡ್ಡ ಉರಿಯಲ್ಲಿ ಬಿಸಿಮಾಡಿ.
3. ಹಾಲು ಕುದಿಯಲಾರಂಭಿಸಿದ ನಂತರ ಉರಿಯನ್ನು ಆರಿಸಿ.
4. ನಂತರ ಸಿಟ್ರಿಕ್ ಆಸಿಡ್ ಹರಳನ್ನು ಸೇರಿಸಿ.
5. ಹಾಲು ಮೊಸರಾಗಿ ಒಡೆಯುವವರೆಗೂ ಸುಮಾರು 2-3 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಲೇ ಇರಿ.
6. ಮೊಸರಾಗಿ ಒಡೆದ ತಕ್ಷಣ ಐಸ್ ಕ್ಯೂಬ್ಗಳನ್ನು ಸೇರಿಸಿ ಮತ್ತು ಅದು ಸಂಪೂರ್ಣವಾಗಿ ಕರಗುವವರೆಗೂ ಒಂದೆಡೆ ಇಡಿ.
7. ಒಂದು ಬೌಲ್ಅನ್ನು ತೆಗೆದುಕೊಂಡು, ಅದರ ಮೇಲ್ಭಾಗದಲ್ಲಿ ಕಿಚನ್ ಟವೆಲ್ಅನ್ನು ಹಾಸಿ.
8. ಇದರ ಮೇಲೆ ಮೊಸರೊಡೆದ ಹಾಲನ್ನು ಸುರಿಯಿರಿ.
9. ಟವೆಲ್ನ ತುದಿಯ ಭಾಗವನ್ನು ಹಿಡಿದು ಎತ್ತಿ, ನೀರನ್ನು ಬಳಿಸಿ.
10. ನಂತರ 10 ನಿಮಿಷಗಳ ಕಾಲ ಮಿಶ್ರಣವನ್ನು ಟವೆಲ್ನಲ್ಲಿಟ್ಟು ತೂಗುಹಾಕಿರಿ. ನೀರು ಸಂಪೂರ್ಣವಾಗಿ ಬಳಿದು ಹೋಗುವುದು.
11. ಟವೆಲ್ಅನ್ನು ಬಿಚ್ಚಿ, ನೀರಿನಿಂದ ಬೇರ್ಪಟ್ಟ ಹೂರಣವನ್ನು ತೆಗೆಯಿರಿ.
12. ಹೂರಣವನ್ನು ಮಿಕ್ಸರ್ ಪಾತೆಗೆ ವರ್ಗಾಯಿಸಿ, ರುಬ್ಬಿಕೊಳ್ಳಿ.
13. ಕಾಳುಕಾಳಾಗಿರುವ ಮಿಶ್ರಣದಂತೆ ಮಾಡಿಕೊಳ್ಳಿ.
14. ಒಂದು ಪ್ಲೇಟ್ಗೆ ವರ್ಗಾಯಿಸಿ.
15. ಗಂಟುಗಳಿರದಂತೆ ಅಂಗೈನಲ್ಲಿ ಚೆನ್ನಾಗಿ ನಾದಿ/ಮಿಶ್ರಗೊಳಿಸಿ.
16. ಸಕ್ಕರೆ ಪುಡಿ ಮತ್ತು ಗುಲಾಬಿ ನೀರನ್ನು ಸೇರಿಸಿ.
17. ಒಂದು ಮೃದುವಾದ ಹಿಟ್ಟಿನ ಮುದ್ದೆಯಾಗುವವರೆಗೆ ಚೆನ್ನಾಗಿ ನಾದಬೇಕು.
18. 15-20 ನಿಮಿಷಗಳ ಕಾಲ ಫ್ರಿಜ್ನಲ್ಲಿ ಇಡಿ.
19. ಸಮ ಪ್ರಮಾಣದಲ್ಲಿ ಮುದ್ದೆ/ಮಿಶ್ರಣವನ್ನು ತೆಗೆದುಕೊಂಡು, ಅಂಗೈನಲ್ಲಿ ಪೇಡೆಯ ಆಕಾರಕ್ಕೆ ತನ್ನಿ.
20. ಇದರ ಮೇಲ್ಭಾಗದಲ್ಲಿ ಹೆಚ್ಚಿಕೊಂಡ ಪಿಸ್ತವನ್ನು ಹಾಕಿ ಅಲಂಕಾರಗೊಳಿಸಿ.
21. ಫ್ರಿಜ್ನಲ್ಲಿಟ್ಟು ತಣ್ಣಗಾಗಿಸಿ, ನಂತರ ಸವಿಯಲು ನೀಡಿ.
- 1. ಹಾಲನ್ನು ಮೊಸರಾಗಿ ಒಡೆಯಲು ನಿಂಬು, ಮೊಸರು ಅಥವಾ ಬಿಳಿ ವಿನೆಗರ್ಅನ್ನು ಬಳಸಬಹುದು.
- 2. ಮೊಸರೊಡೆದ ತಕ್ಷಣವೇ ಐಸ್ ಕ್ಯೂಬ್ಗಳನ್ನು ಸೇರಿಸಬೇಕು. ಆಗ ಮಿಶ್ರಣವು ಹೆಚ್ಚು ಗಟ್ಟಿಯಾಗುವುದನ್ನು ತಡೆಯಬಹುದು.
- 3. ಸಂದೇಶ್/ಸಂಡೇಶ್ ಮಾಡುವಾಗ ಯಾವುದೇ ಬಿರುಕುಗಳಿಲ್ಲದಂತೆ ನೋಡಿಕೊಳ್ಳಬೇಕು.
- 4. ನೀವು ಸಕ್ಕರೆಯ ಬದಲಿಗೆ ಪಾಮ್ ಸಕ್ಕರೆಯನ್ನು ಬಳಸಬಹುದು.
- ಸರ್ವಿಂಗ್ ಸೈಜ್ - 1 ಸಂದೇಶ್
- ಕ್ಯಾಲೋರಿ - 147 ಕ್ಯಾಲ್
- ಫ್ಯಾಟ್ - 7 ಗ್ರಾಂ.
- ಪ್ರೋಟೀನ್ - 3 ಗ್ರಾಂ.
- ಕಾರ್ಬೋಹೈಡ್ರೇಟ್ - 17 ಗ್ರಾಂ.
- ಸಕ್ಕರೆ - 15 ಗ್ರಾಂ.
ಹಂತ ಹಂತವಾದ ಚಿತ್ರವಿವರಣೆ: