For Quick Alerts
ALLOW NOTIFICATIONS  
For Daily Alerts

ರುಚಿಯಾದ ಮಾವಿನ ಹಣ್ಣಿನ ಸಾರಿನ ಸರಳ ರೆಸಿಪಿ

Posted By:
|

ಮಾವಿನ ಹಣ್ಣಿನ ಸಮಯದಲ್ಲಿ ಅದರಿಂದ ತರಾವರಿ ಅಡುಗೆ ಮಾಡುವ ಖುಷಿಯೇ ಬೇರೆ. ಮಾವಿನ ಹಣ್ಣಿನ ಸಾರು ಅನ್ನದ ಜೊತೆ ಸವಿಯಲು ತುಂಬಾನೇ ರುಚಿಯಾಗಿರುತ್ತೆ.

Ripe Mango Curry In Kannada | How To Prepare ripe mango curry

ಮಾವಿನ ಹಣ್ಣನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಡುತ್ತಾರೆ, ನಾವಿಲ್ಲಿ ತುಂಬಾ ರುಚಿಕರವಾಗಿ ಮಾವಿನ ಹಣ್ಣಿನ ಸಾರು ಮಾಡುವ ಸರಳ ರೆಸಿಪಿ ನೀಡಿದ್ದೇವೆ ನೋಡಿ:

ರುಚಿಯಾದ ಮಾವಿನ ಹಣ್ಣಿನ ಸಾರಿನ ಸರಳ ರೆಸಿಪಿ
ರುಚಿಯಾದ ಮಾವಿನ ಹಣ್ಣಿನ ಸಾರಿನ ಸರಳ ರೆಸಿಪಿ
Prep Time
10 Mins
Cook Time
15M
Total Time
25 Mins

Recipe By: Reena

Recipe Type: Vegetarian

Serves: 3

Ingredients
  • ಬೇಕಾಗುವ ಸಾಮಗ್ರಿ

    5-6 ಮಾವಿನ ಹಣ್ಣು

    (ಕಾಡು ಮಾವಿನ ಹಣ್ಣಾದರೆ ಇನ್ನೂ ರುಚಿಯಾಗಿರುತ್ತೆ)

    1/ 2 ಚಮಚ ಜೀರಿಗೆ ಪುಡಿ

    1 ಚಮಚ ಖಾರದ ಪುಡಿ

    1/2 ಚಮಚ ಕೊತ್ತಂಬರಿ ಪುಡಿ

    ಸ್ವಲ್ಪ ಬೆಲ್ಲದ ತುಂಡು ಅಥವಾ 1 ಚಮಚ ಸಕ್ಕರೆ

    ಎಣ್ಣೆ 4 ಚಮಚ

    ಸಾಸಿವೆ 1/2 ಚಮಚ

    1/2 ಚಮಚ ಅರಿಶಿಣ ಪುಡಿ

    ಕಾಳು ಮೆಣಸಿನ ಪುಡಿ 1 ಚಮಚ

    ಸ್ವಲ್ಪ ಕರಿಬೇವಿನ ಎಲೆ

    ಬೆಳ್ಳುಳ್ಳಿ 8-10 ಎಸಳು

Red Rice Kanda Poha
How to Prepare
  • ಮಾಡುವ ವಿಧಾನ:

    * ಮಾವಿನ ಹಣ್ಣು ತೊಳೆದು ಸಿಪ್ಪೆ ಸಹಿತ ಅದನ್ನು ಎರಡು ಡೊಡ್ಡ ಭಾಗ ಮಾಡಿ, ಗೊರಟೆ ಕೂಡ ಇರಲಿ.

    * ತವಾಗೆ ಖಾರದ ಪುಡಿ, ಕೊತ್ತಂಬರಿ ಪುಡಿ , ಜೀರಿಗೆ ಪುಡಿ ಹಾಕಿ ಹುರಿಯಿರಿ. ಬಣ್ಣ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.

    * ಈಗ ಸಾರು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್‌ ಶಬ್ದ ಮಾಡುವಾಗ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ, ನಂತರ ಕರಿಬೇವು ಹಾಕಿ, ಮಾವಿನ ಹಣ್ಣು ಹಾಕಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ ಹಾಕಿ.

    * ಮಾವಿನ ಹಣ್ಣು ಎಣ್ಣೆಯಲ್ಲೇ ಬೇಯಲಿ, ಬೇಯುವಾಗ ರೋಸ್ಟ್‌ ಮಾಡಿಟ್ಟ ಮಸಾಲೆ ಪುಡಿ ಹಾಕಿ 5 ನಿಮಿಷ ಬೇಯಿಸಿ, ನಂತರ ಬೆಲ್ಲದ ಚೂರು ಅಥವಾ ಸಕ್ಕರೆ ಹಾಕಿ ಮಿಕ್ಸ್ ಮಾಡಿ 2-3 ನಿಮಿಷ ಬೇಯಿಸಿ ಉರಿಯಿಂದ ಇಳಿಸಿ.

    ಇಷ್ಟು ಮಾಡಿದರೆ ಬಿಸಿ ಬಿಸಿ ಅನ್ನದ ಜೊತೆ ಸವಿಯಲು ರುಚಿಯಾದ ಮಾವಿನ ಹಣ್ಣಿನ ಸಾರು ರೆಡಿ.

    ಮಾವಿನ ಹಣ್ಣಿನ ಸಾರನ್ನು ಸ್ವಲ್ಪ ನೀರಾಗಿ ಮಾಡ ಬಯಸುವುದಾದರೆ ಸ್ವಲ್ಪ ನೀರು ಸೇರಿಸಿ.

Instructions
Nutritional Information
  • People - 3
  • Calories - 99 calories
  • Fat - 0.63g
  • Protein - 1.35 g
  • Carbohydrate - 24.7 g
  • Sugar - 22.5 g
  • Fiber - 2.64 g
[ 4.5 of 5 - 47 Users]
X
Desktop Bottom Promotion