For Quick Alerts
ALLOW NOTIFICATIONS  
For Daily Alerts

ಬಾಳೆಹಣ್ಣಿನ ಪಾಯಸ ರೆಸಿಪಿ: ಸಕತ್‌ ರುಚಿ, ಆರೋಗ್ಯಕ್ಕೂ ಒಳ್ಳೆಯದು

Posted By:
|

ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಮಕ್ಕಳಿಗೆ ಸಿಹಿ ತಿನ್ನಲು ಅನಿಸಿದಾಗ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಸಿಹಿಯೆಂದರೆ ಅದು ಪಾಯಸ. ಇಲ್ಲಿ ನಾವು ಬಾಳೆಹಣ್ಣಿನ ಪಾಯಸ ರೆಸಿಪಿ ನೀಡಿದ್ದೇವೆ.

ripe banana payasam recipe

ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಅಧಿಕವಿರುವುದರಿಂದ ಈ ಪಾಯಸ ಮಕ್ಕಳ ದೇಹಕ್ಕೆ ಅಗ್ಯತವಾದ ಪೋಷಕಾಂಶ ನೀಡುತ್ತದೆ. ಇದರಲ್ಲಿ ತೆಂಗಿನ ಹಾಲು, ಬೆಲ್ಲ, ತುಪ್ಪ ಈ ರೀತಿಯ ಪೋಷಕಾಂಶಗಳುಳ್ಳ ವಸ್ತುಗಳನ್ನೇ ಬಳಸಿರುವುದರಿಂದ ರುಚಿಯ ಜೊತೆಗೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಬನ್ನಿ ಈ ಪಾಯಸ ಮಾಡುವುದು ಹೇಗೆ ಎಂದು ನೋಡೋಣ:
ಬಾಳೆಹಣ್ಣಿನ ಪಾಯಸ ರೆಸಿಪಿ, Ripe Banana Payasam Recipe
ಬಾಳೆಹಣ್ಣಿನ ಪಾಯಸ ರೆಸಿಪಿ, Ripe Banana Payasam Recipe
Prep Time
20 Mins
Cook Time
30M
Total Time
50 Mins

Recipe By: Reena T.K

Recipe Type: Sweet

Serves: 4

Ingredients
  • ಬೇಕಾಗುವ ಸಾಮಗ್ರಿ

    ಬಾಳೆಹಣ್ಣು 1ಕೆಜಿ

    ಬೆಲ್ಲ 1 ಕಪ್

    ತೆಂಗಿನಕಾಯಿ 1 ಕಪ್

    ತುಪ್ಪ 3 ಚಮಚ

    ಏಲಕ್ಕಿ 1-2

    ಸ್ವಲ್ಪ ಗೋಡಂಬಿ

    ಸ್ವಲ್ಪ ದ್ರಾಕ್ಷಿ

Red Rice Kanda Poha
How to Prepare
  • ಮಾಡುವ ವಿಧಾನ:

    * ಮೊದಲಿಗೆ ಬಾಳೆಹಣ್ಣನ್ನು ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.

    * ಬಾಳೆಹಣ್ಣಿನ ಒಳಗಡೆ ಇರುವ ಕಪ್ಪು ಬೀಜದ ನೂಲನ್ನು ತೆಗೆಯಬೇಕು, ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.

    * ಈಗ ತೆಂಗಿನಕಾಯಿ ತುರಿದು ಅದರಿಂದ ಒಂದು ಕಪ್ ಹಾಲು ತೆಗೆಯಿರಿ. ಮೊದಲಿಗೆ ಗಟ್ಟಿ ಹಾಲು ತೆಗೆದಿಡಿ. ತೆಂಗಿನಕಾಯಿ ಮತ್ತೊಮ್ಮೆ ರುಬ್ಬಿದಾಗ ತೆಳು ಹಾಲು ಬರುತ್ತದೆ, ಅದನ್ನು ಪ್ರತ್ಯೇಕವಾಗಿ ತೆಗೆದಿಡಿ.

    * ಸ್ವಲ್ಪ ನೀರಿಗೆ ಬೆಲ್ಲ ಹಾಕಿ, ಪಾಕ ಮಾಡಿ ತೆಗೆದಿಡಿ

    * ಈಗ ದಪ್ಪ ತಳವಿರುವ ಪಾತ್ರೆಯನ್ನು ಬಿಸಿ ಮಾಡಿ (ಹುರುಳಿ ಪಾತ್ರೆ ಆದರೆ ಒಳ್ಳೆಯದು)

    * ಪಾತ್ರೆ ಬಿಸಿಯಾದ ಬಳಿಕ ಅದಕ್ಕೆ ತೆಳು ತೆಂಗಿನಕಾಯಿ ಹಾಲು ಹಾಕಿ ಕುದಿಸಿ. ಒಂದು ಲೋಟ ಹಾಲು ಹಾಕಿದ್ದರೆ ಅದು ಅರ್ಧ ಲೋಟ ಆಗುವಷ್ಟು ಕುದಿಸಿ.

    * ಅದಕ್ಕೆ ರುಬ್ಬಿದ ಬಾಳೆ ಹಣ್ಣು ಹಾಕಿ.

    * ಈಗ ಗಟ್ಟಿ ಹಾಲಿಗೆ ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿ ಅದನ್ನು ಹುರುಳಿಗೆ ಹಾಕಿ, ಇದನ್ನು ಕುದಿಯಲು ಬಿಡಬೇಡಿ, ಸ್ಟೌವ್ ಉರಿ ಕಡಿಮೆ ಮಾಡಿ.

    * ಈಗ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಪಾಯಸಕ್ಕೆ ಹಾಕಿ ಮಿಕ್ಸ್ ಮಾಡಿ ಬಾಳೆಹಣ್ಣಿನ ಪಾಯಸ ರೆಡಿ.

    ನಿಮಗೆ ಪಾಯಸ ಸ್ವಲ್ಪ ತೆಳುವಾಗಿ ಬೇಕಿದ್ದರೆ ಹಾಲನ್ನು ಕೂಡ ಸೇರಿಸಬಹುದು.

Instructions
  • ಸೂಚನೆ: * ಇದು ಕೇರಳ ಸ್ಟೈಲ್ ರೆಸಿಪಿಯಾಗಿದೆ * ಮನೆಯಲ್ಲಿ ಬಾಳೆಹಣ್ಣುತುಂಬಾ ಹಣ್ಣಾಗಿದ್ದರೆ ಈ ರೀತಿ ಪಾಯಸ ಮಾಡಿ ಸವಿಯಿರಿ. * ಸಿಹಿ ನಿಮ್ಮ ಟೇಸ್ಟ್‌ಗೆ ತಕ್ಕಂತೆ ಬಳಸಿ, ಬಾಳೆಹಣ್ಣು ಸಿಹಿ ಇರುವುದರಿಂದ ಹೆಚ್ಚಿನ ಸಿಹಿ ಬೇಕಾಗಿಲ್ಲ.
Nutritional Information
  • ಸರ್ವ್ - 1 ಗ್ಲಾಸ್
  • ಕ್ಯಾಲೋರಿ - 438ಕ್ಯಾ
  • ಕೊಬ್ಬು - 19.76ಗ್ರಾಂ
  • ಪ್ರೊಟೀನ್ - 3.44ಗ್ರಾಂ
  • ಕಾರ್ಬ್ಸ್ - 61.73ಗ್ರಾಂ
[ 5 of 5 - 12 Users]
X
Desktop Bottom Promotion