For Quick Alerts
ALLOW NOTIFICATIONS  
For Daily Alerts

ಭಾನುವಾರದ ಸ್ಪೆಷಲ್- ರುಚಿರುಚಿಯಾದ ಮೊಟ್ಟೆ ಪಲಾವ್

|

ಬಾಯಲ್ಲಿ ನೀರೂರಿಸುವ ಖಾದ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಫಟಾಫಟ್ ಎಂದು ತಯಾರಿಸಲಾಗುವ ಖಾದ್ಯಗಳು ನಮ್ಮ ಜಂಜಾಟಗಳಿಂದ ಕೂಡಿದ ಜೀವನ ಶೈಲಿಗೆ ಅತ್ಯಂತ ಸಹಕಾರಿ. ಏಕೆಂದರೆ ಈ ಬ್ಯುಸಿ ಜೀವನದಲ್ಲಿ ನಿಧಾನವಾಗಿ, ಅಧಿಕ ಸಮಯ ಅಡುಗೆಗೆ ಮೀಸಲಿಡಲು ಯಾರ ಬಳಿ ತಾನೇ ಸಮಯ ಇದೆ, ಅಲ್ಲವೇ?

ಅದರಲ್ಲೂ ಬೆಳಗಿನ ಹೊತ್ತು ಎಲ್ಲರಿಗೂ ಧಾವಂತವಿರುತ್ತದೆ. ಇನ್ನು ಉದ್ಯೋಗಸ್ಥ ಮಹಿಳೆಯರಿಗೆ ಈ ಧಾವಂತ ಅತ್ಯಂತ ಹೆಚ್ಚು. ಇತ್ತ ತಾವೂ ಉದ್ಯೋಗಕ್ಕೆ ತಲುಪಲು ತಯಾರಾಗಬೇಕು, ಮನೆಯವರು ಮತ್ತು ಮಕ್ಕಳನ್ನೂ ತಯಾರು ಮಾಡಿ ಅವರಿಗೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನಕ್ಕೆ ಬುತ್ತಿಯನ್ನು ಕಟ್ಟಿಕೊಡಬೇಕು. ಈ ಧಾವಂತದಲ್ಲಿ ಬೆಳಗಿನ ಉಪಾಹಾರಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲದೇ ಹೆಚ್ಚಿನ ದಿನಗಳು ಬ್ರೆಡ್ ಜಾಮ್‌ನಲ್ಲಿಯೇ ಕಳೆದುಹೋಗುತ್ತವೆ...!

 

ಅದಕ್ಕೆಂದೇ ಬೋಲ್ಡ್ ಸ್ಕೈ ತಂಡ ನಿಮ್ಮ ಸಹಾಯಕ್ಕೆ ನಿಲ್ಲುತ್ತಿದೆ, ದಿನವಿಡೀ ವ್ಯಸ್ತರಿದ್ದರೂ ಕೆಲವೇ ನಿಮಿಷಗಳಲ್ಲಿ ಸ್ವಾದಿಷ್ಟಕರವಾದ ಮೊಟ್ಟೆ ಪಲಾವ್ ರೆಸಿಪಿ ತಯಾರಿಯ ಸವಿವರವನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ...ಇನ್ನೇಕೆ ತಡ? ಮೊಟ್ಟೆ ಪಲಾವ್ ತಯಾರಿಸಲು ಹೊರಡೋಣವೇ?

Mouthwatering Egg pulao recipe

ಮೂವರಿಗೆ ಬಡಿಸಬಹುದು

ತಯಾರಿಕೆಗೆ ತಗುಲುವ ಸಮಯ:15 ನಿಮಿಷಗಳು

ಅಡುಗೆ ಮಾಡಲು ತಗುಲುವ ಸಮಯ:15 ನಿಮಿಷಗಳು ಅಪ್ಪಟ ಗ್ರಾಮೀಣ ಶೈಲಿಯ ಮೊಟ್ಟೆ ಮಸಾಲ ರೆಸಿಪಿ

ಬೇಕಾದ ಪದಾರ್ಥಗಳು

*ಅನ್ನ - 2 ಕಪ್

*ಮೊಟ್ಟೆ- 2

*ಈರುಳ್ಳಿ- 2 (ಕತ್ತರಿಸಿದಂತಹುದು)

*ಬೆಳ್ಳುಳ್ಳಿ- 4 ತುಂಡುಗಳು (ಕತ್ತರಿಸಿದಂತಹುದು)

*ಟೊಮೇಟೊ - 2 (ಕತ್ತರಿಸಿದಂತಹುದು)

*ಹಸಿ ಮೆಣಸಿನಕಾಯಿ- 2 (ಕತ್ತರಿಸಿದಂತಹುದು)

*ತಾಜಾ ಅವರೆ ಕಾಳು - 1/4 ಕಪ್*ಅರಿಶಿನ ಪುಡಿ- 1/2

*ಖಾರದ ಪುಡಿ- 1 ಟೀ.ಚಮಚ

 

*ಕರಿ ಮೆಣಸಿನ ಪುಡಿ - 1 ಟೀ.ಚಮಚ

*ಗರಂ ಮಸಾಲ ಪುಡಿ- 1 ಟೀ.ಚಮಚ

*ಉರಿದ ಎಳ್ಳಿನ ಪುಡಿ - 1 ಟೀ.ಚಮಚ

*ಉಪ್ಪು- ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

*ಬಾಣಲೆಯ ಮೇಲೆ ಎಣ್ಣೆಯನ್ನು ಹಾಕಿ, ಅದರಲ್ಲಿ ಈರುಳ್ಳಿಗಳನ್ನು ಹಾಕಿಕೊಂಡು ಹೊಂಬಣ್ಣ ಬರುವವರೆಗೆ ಉರಿಯಿರಿ.

*ನಂತರ ಕತ್ತರಿಸಿದ ಬೆಳ್ಳುಳ್ಳಿಗಳನ್ನು ಸೇರಿಸಿ, ಕೆಲವು ಕ್ಷಣಗಳವರೆಗೆ ಉರಿಯಿರಿ.

*ಮೊಟ್ಟೆಗಳನ್ನು ಹುಷಾರಾಗಿ ಒಡೆದು, ಬಾಣಲೆಗೆ ಹಾಕಿ. ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡುತ್ತ ಬೇಯಿಸಿ.

*ಈಗ ಉಪ್ಪು, ಕರಿ ಮೆಣಸು, ಅರಿಶಿನ ಪುಡಿ, ಖಾರದ ಪುಡಿ, ಹಸಿ ಮೆಣಸಿನ ಕಾಯಿ, ಟೊಮೇಟೊಗಳನ್ನೆಲ್ಲಾ ಹಾಕಿ 3-4 ನಿಮಿಷಗಳ ಕಾಲ ಬೇಯಿಸಿ.

*ಇನ್ನು ಈ ಮಿಶ್ರಣಕ್ಕೆ ಅನ್ನವನ್ನು ಹಾಕಿ ಚೆನ್ನಾಗಿ ಬೆರೆಸಿ. ನಂತರ ಗರಂ ಮಸಾಲ ಪುಡಿಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ.

*ಇದೆಲ್ಲ ಮುಗಿದ ಮೇಲೆ, ಒಲೆಯನ್ನು ಆರಿಸಿ. ಈ ಖಾದ್ಯದ ಮೇಲೆ ಎಳ್ಳು ಪುಡಿಯನ್ನು ಚಿಮುಕಿಸಿ. ಬಿಸಿಯಾಗಿರುವಾಗಲೆ ಬಡಿಸಿ. ಈಗ ನೋಡಿ ರುಚಿ ರುಚಿಯಾದ ಮೊಟ್ಟೆ ಪುಲಾವ್ ನಿಮ್ಮ ಮುಂದೆ ಸಿದ್ಧವಾಗಿರುತ್ತದೆ. ಇದನ್ನು ಸಾರಿನ ಜೊತೆಗೆ ಅಥವಾ ಸಾರಿಲ್ಲದೆ ಬೇಕಾದರು ಸೇವಿಸಬಹುದು.

ಪೋಷಕಾಂಶಗಳ ಪ್ರಮಾಣ

*ಈ ಎಗ್ ಪುಲಾವ್ ಆರೋಗ್ಯಕಾರಿಯಾಗಿರುತ್ತದೆ. ಇದರಲ್ಲಿ ಕ್ಯಾಲೊರಿಗಳ ಪ್ರಮಾಣ ಅಧಿಕವಾಗಿರುವುದಿಲ್ಲ. ಕಬ್ಬಿಣಾಂಶ, ಪ್ರೋಟೀನ್ ಮತ್ತು ಇನ್ನಿತರ ಪೋಷಕಾಂಶಗಳನ್ನು ಹೊಂದಿರುವ ಈ ಖಾದ್ಯವು ಊಟದ ಸಮಯದಲ್ಲಿ ಸೇವಿಸಲು ಹೇಳಿ ಮಾಡಿಸಿದಂತಿರುತ್ತದೆ. ಒಂದು ಪ್ಲೇಟ್ ರುಚಿಕರ ಎಗ್ ಪುಲಾವ್‍ನಲ್ಲಿ ವಿಟಮಿನ್ ಎ ಮತ್ತು ಸಿ ಗಳು ಸಮೃದ್ಧವಾಗಿರುತ್ತದೆ.

ಸಲಹೆಗಳು

*ಈ ಪುಲಾವ್ ಮಾಡಲು ನಿಮ್ಮ ರೆಫ್ರಿಜಿರೇಟರಿನಲ್ಲಿರುವ ಉಳಿಕೆ ಅನ್ನವನ್ನು ಬಳಸಿಕೊಳ್ಳಬಹುದು. ಇದನ್ನು ಮತ್ತಷ್ಟು ಪೋಷಕಾಂಶ ಭರಿತ ಮಾಡಲು ಕೆಲವೊಂದು ತರಕಾರಿಗಳನ್ನು ಬಳಸಿಕೊಳ್ಳಿ. ನಿಮಗೆ ಅವಶ್ಯಕವಿದ್ದಲ್ಲಿ ಕೋಳಿ ಮಾಂಸದ ತುಣುಕುಗಳನ್ನು ಸಹ ಬಳಸಿಕೊಳ್ಳಬಹುದು.

English summary

Mouthwatering Egg pulao recipe

Today we have instant rice recipe that will serve all your purposes of a meal or a lunchbox item. You may use leftover rice from your refrigerator as well to prepare this amazing egg pulao recipe.
Story first published: Sunday, October 25, 2015, 6:16 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more