For Quick Alerts
ALLOW NOTIFICATIONS  
For Daily Alerts

ಆಹಾ ಎಂಥಾ ಸ್ವಾದ, ಕಟ್ಟಂಬಲಿ ಜೊತೆ ಪಳದ್ಯ

By * ನಿವೇದಿತಾ ಪ್ರಭಾಕರ್, ಬೆಂಗಳೂರು
|
Kattambali rice recipe along with paladya
ಕಟ್ಟಂಬಲಿಯಂಥಾ ಸ್ವಾದಿಷ್ಟಕರವಾದ ಖಾದ್ಯವನ್ನು ನಾನು ಇತ್ತೀಚಿನ ದಿನಗಳಲ್ಲಿ ತಿಂದಿರಲಿಲ್ಲ. ಮೊದಲ ಬಾರಿ ತಿಂದಿದ್ದಕ್ಕೋ, ಆ ಸಮಯದಲ್ಲಿ ವಿಪರೀತ ಹಸಿವೆಯಾಗಿದ್ದಕ್ಕೋ, ಅದನ್ನು ಮಾಡಿದ ಅಮ್ಮನ ಕೈಚಳಕದಿಂದಾಗಿಯೋ ಕಟ್ಟಂಬಲಿ ಅದ್ಭುತವಾಗಿತ್ತು.

ಈ ಸ್ವಾದಿಷ್ಟ ರೆಸಿಪಿಯನ್ನು ನಮ್ಮ ಮನೆಯಲ್ಲಿ ಶ್ರಾವಣ ಮಾಸದ ಕಡೆಯ ಶನಿವಾರದಂದು ತಪ್ಪದೆ ಮಾಡುತ್ತಾರೆ. ಈ ಖಾದ್ಯವೇ ಅಂದಿನ ವಿಶೇಷವಂತೆ. ಹಾಗಾಗಿ ಕಡೆಯ ಶ್ರಾವಣ ಶನಿವಾರದಂದು ಮನೆಯಲ್ಲಿ ಮಾಡಿದ್ದರು. ಅಮ್ಮನ ಕೈಯಡಿಗೆಯ ರುಚಿಯನ್ನಂತೂ ಕೇಳುವುದೇ ಬೇಡ.

ಇದನ್ನು ತಯಾರಿಸಲು ಕೂಡ ಹೆಚ್ಚು ಸಮಯ ಬೇಕಾಗಿಲ್ಲ. ತಯಾರಿಸುವುದು ಕೂಡ ಅತ್ಯಂತ ಸುಲಭ. ಜೊತೆಗೆ ಪಳದ್ಯ ಅಥವಾ ಮಜ್ಜಿಗೆ ಹುಳಿ ಇದ್ದರಂತೂ ಬಿಸಿಬಿಸಿ ಕಟ್ಟಂಬಲಿ ಹೊಟ್ಟೆಗಿಳಿಸಿದಷ್ಟು ಹಸಿವು ಹೆಚ್ಚುತ್ತಲೇ ಇರುತ್ತದೆ. ಹಲ್ಲಿಲ್ಲದ ಹಿರಿಯರಿಗೆ ಇದು ಹೇಳಿ ಮಾಡಿಸಿದ ತಿನಿಸು. ಕಟ್ಟಂಬಲಿಯನ್ನು ಮಾಡುವ ವಿಧಾನ ತಿಳಿಸುತ್ತೇನೆ.

ಬೇಕಾಗುವ ಪದಾರ್ಥಗಳು

ಅಕ್ಕಿ 1 ದೊಡ್ಡ ಲೋಟ
ಹಸಿ ಕೊಬ್ಬರಿ 1 ಬಟ್ಟಲು
ಹಸಿಮೆಣಸಿನಕಾಯಿ ನಾಲ್ಕು
ಒಗ್ಗರಣೆಗೆ ಎಣ್ಣೆ, ಸಾಸಿವೆ, ಅರಿಷಿಣ
ಉಪ್ಪು

ತಯಾರಿಸುವ ವಿಧಾನ

* ಅಕ್ಕಿಯನ್ನು ನುಚ್ಚಿನಂತೆ ಮಿಕ್ಸಿಯಲ್ಲಿ ಎರಡೇ ಎರಡು ನಿಮಿಷ ಗಿರಿಗಿಟ್ಟಿಸಿಕೊಂಡು ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು.

* ಕುಕ್ಕರನ್ನು ಆರಲು ಬಿಟ್ಟು, ಒಂದು ದೊಡ್ಡ ಪಾತ್ರೆಯಲ್ಲಿ ತುಸುವೇ ಎಣ್ಣೆ ಹಾಕಿಕೊಂಡು ಸಾಸಿವೆ ಚಟಪಡಿಸಿ, ಅರಿಷಿಣ, ಹಸಿಮೆಣಸಿನಕಾಯಿ ಹಾಕಿ ತಾಳಿಸಿ.

* ಒಗ್ಗರಣೆಗೆ ಬೇಯಿಸಿಟ್ಟುಕೊಂಡ ಅನ್ನವನ್ನು ಸುರಿಯಿರಿ. ಅದಕ್ಕೆ ಹಸಿಕೊಬ್ಬರಿ ಸುರುವಿರಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇನ್ನಷ್ಟು ನೀರು ಹಾಕಿ ಹತ್ತು ನಿಮಿಷಗಳ ಕಾಲ ಬೇಯಿಸಿ.

* ಇದೇ ಕಟ್ಟಂಬಲಿ. ಇದನ್ನು ಶ್ರಾವಣ ಶನಿವಾರದಂತೆ ಬನಶಂಕರಿ ದೇವಿಗೆ ನೈವೇದ್ಯವಾಗಿಯೂ ಇಡುತ್ತಾರೆ. ಪೂಜೆ ಮುಗಿಯುವ ಹೊತ್ತಿಗೆ ಹೊಟ್ಟೆ ಚುರುಗುಟ್ಟಲೂ ಪ್ರಾರಂಭಿಸಿರುತ್ತದೆ.

* ಊಟದ ಸಮಯ ಹರಡಿದ ಬಾಳೆ ಎಲೆಯಲ್ಲಿ ಇನ್ನಿತರ ಮಾಮೂಲಿ ಐಟಂಗಳನ್ನು ಹೆಚ್ಚು ತಿನ್ನದೆ, ಕಟ್ಟಂಬಲಿಯನ್ನೇ ತುಪ್ಪ ಮತ್ತು ಪಳದ್ಯದ ಜೊತೆ ಹೆಚ್ಚು ಜಮಾಯಿಸಿ. ಮಜ್ಜಿಗೆ ಹುಳಿ ಅಥವಾ ಪಳದ್ಯ ಮಾಡುವುದು ಹೇಗೆ ಅಂತ ಗೊತ್ತು ತಾನೆ?

English summary

Kattambali rice recipe | Majjige huli or Paladya | Shravana last Saturday | ಕಟ್ಟಂಬಲಿ ಮತ್ತು ಪಳದ್ಯ ರೆಸಿಪಿ | ಶ್ರಾವಣ ಕೊನೆಯ ಶನಿವಾರ

Kattambali rice recipe along with paladya or majjige huli is a fantastic dish on a festival day. This is specially prepared on last Saturday of Shravana masa.
Story first published: Monday, August 29, 2011, 16:18 [IST]
X
Desktop Bottom Promotion