For Quick Alerts
ALLOW NOTIFICATIONS  
For Daily Alerts

ಆರೋಗ್ಯಕಾರಕ ಜೋಳದ ಪಲಾವ್

By Super
|
Jowar Palav
*ನಿಸ್ಮಿತಾ

ಹೊಂದಿಸಿಕೊಳ್ಳ ಬೇಕಾದ ಸಾಮಗ್ರಿಗಳು:
ಉದ್ದುದ್ದ ಕಾಳಿನ ಅಕ್ಕಿ: 1 ಲೋಟ
ತೆಂಗಿನಕಾಯಿ ನೀರು : 2 ಲೋಟ
ಎಳೆಜೋಳದ ತೆನೆ: 3
ಎಣ್ಣೆ : 2 ' ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಪಲಾವ್ ಎಲೆ : 1 ಅಥವಾ 2
ದಾಲ್ಚಿನಿ ಮತ್ತು ಲವಂಗ

ರುಬ್ಬಿಟ್ಟುಕೊಳ್ಳಬೇಕಾದ ಪದಾರ್ಥಗಳು:
ಕೆಂಪು ಮೆಣಸಿನ ಕಾಯಿ: 4
ಹಸಿರು ಮೆಣಸಿನ ಕಾಯಿ: 5
ಗರಂ ಮಸಾಲೆ ಪುಡಿ: ¼ ಚಮಚ
ಪುದೀನ ಸೊಪ್ಪು: ' ಕಟ್ಟು
ಕೊತ್ತಂಬರಿ ಸೊಪ್ಪು: 1 ಸುಮಾರಾದ ಎಸಳು
ಬೆಳ್ಳುಳ್ಳಿ: 5 ತೊಳೆ
ಶುಂಠಿ: ' ಇಂಚಿನ ತುಂಡು
ತೆಂಗಿನಕಾಯಿ ತುರಿ: 2 ಚಮಚ

ತಯಾರಿಸುವ ವಿಧಾನ:
ಮೊದಲು ಅಕ್ಕಿಯನ್ನು ತೊಳೆದು 10 ನಿಮಿಷ ಬೇರ್ಪಡಿಸಿ. ಅಕ್ಕಿಯನ್ನು ' ಚಮಚ ತುಪ್ಪದಲ್ಲಿ ಒಂದೆರಡು ನಿಮಿಷ ಹುರಿಯಿರಿ.ಜೋಳದ ತೆನೆಗಳನ್ನು ಉಪ್ಪು ನೀರಿನಲ್ಲಿ 10 ರಿಂದ15 ನಿಮಿಷ ಬೇಯಿಸಿರಿ. ಅದು ತಣ್ಣಗಾದ ನಂತರ, ಬೀಜಗಳನ್ನು ಮಾತ್ರ ಬಿಡಿಸಿ ಪಕ್ಕಕ್ಕಿರಿಸಿ.

ನಂತರ ಪ್ರೆಜರ್ ಕುಕ್ಕರಿನಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ. ಅದಕ್ಕೆ ಪಲಾವ್ ಎಲೆ, ದಾಲ್ಚಿನಿ ಮತ್ತು ಲವಂಗ ಸೇರಿಸಿ ಹುರಿಯಿರಿ. ರುಬ್ಬಿಟ್ಟು ಕೊಂಡಿರುವ ಮಸಾಲೆ ಸೇರಿಸಿ, ಸುವಾಸನೆ ಬರುವವರೆಗೆ ಹುರಿಯಿರಿ. ಇದಕ್ಕೆ ಬೇಯಿಸಿದ ಜೋಳ ಮತ್ತು ತೆಂಗಿನ ಕಾಯಿ ನೀರನ್ನು ಮೃದುವಾಗಿ ಬೆರಸಿರಿ. ಅದು ಕುದಿಯಲು ಪ್ರಾರಂಭವಾದಾಗ ಉಪ್ಪು ಮತ್ತು ಅಕ್ಕಿಯನ್ನು ಸೇರಿಸಿರಿ. ಚೆನ್ನಾಗಿ ಕೆದಕಿ, ಕುಕ್ಕರಿನ ಮುಚ್ಚಳ ಹಾಕಿರಿ. ಸಣ್ಣ ಉರಿಯಲ್ಲಿ ಕುಕ್ಕರಿನಲ್ಲಿ 10 ನಿಮಿಷ ಬೇಯಿಸಿರಿ. ಹುರಿದ ಗೋಡಂಬಿಯಿಂದ ತಯಾರಾದ ಪಲಾವ್ ಅನ್ನು ಅಲಂಕರಿಸಿ, ಬಿಸಿಬಿಸಿಯಾಗಿ ಬಡಿಸಿರಿ.

English summary

Delicious Great Millet | Jowar Palav| rice recipe| healthy food | - ಆರೋಗ್ಯಕಾರಕ ಜೋಳದ ಪಲಾವ್

Delicious Great MilletJowar Palav preparation by Nismitha.ಆರೋಗ್ಯಕಾರಕ ಜೋಳದ ಪಲಾವ್
X
Desktop Bottom Promotion