For Quick Alerts
ALLOW NOTIFICATIONS  
For Daily Alerts

ವಿಭಿನ್ನ ರುಚಿಯ ಬೆಳ್ಳ್ಳುಳ್ಳಿ ರೈಸ್ ಬಾತ್

By *ಕಲ್ಪನಾ, ಬೆಂಗಳೂರು
|
Garlic recipe
ವಿಭಿನ್ನ ರುಚಿಯ ತಿಂಡಿ ಬಯಸುವರಿಗೆ ದಿಢೀರ್ ಎಂದು ಮಾಡಲು ತರಹೇವಾರಿ ಅಡುಗೆಗಳಿವೆ. ಬಿಸಿ ಅನ್ನ ಅಥವಾ ಅನ್ನ ಮಿಕ್ಕಿದ್ದರೆ ಬೆಳ್ಳುಳ್ಳಿ ರೈಸ್ ಬಾತ್ ಮಾಡಿ ಸವಿಯಬಹುದು.

ಬೇಕಾದ ಪದಾರ್ಥಗಳು:
ಅನ್ನ: 1 ಡೊಡ್ಡ ಬಟ್ಟಲು
ಬೆಳ್ಳುಳ್ಳಿ: 10 ಎಸಳುಗಳು, ಸಣ್ಣಗೆ ಹೆಚ್ಚಿಕೊಳ್ಳಬೇಕು
ಎಣ್ಣೆ: 2-3 ಟೇಬಲ್ ಚಮಚ
ಮೆಣಸಿನ ಪುಡಿ: 1 ಟೀ ಚಮಚ
ಕೊಬ್ಬರಿ ತುರಿ: 1 ಟೀ ಚಮಚ
ಒಣ ಮೆಣಸಿನಕಾಯಿ: 4
ಕರಿಬೇವು: 1 ಎಳೆ
ಕಡಲೆ ಬೇಳೆ, ಉದ್ದಿನ ಬೇಳೆ: ತಲಾ 1 ಟೀ ಚಮಚ
ಸಾಸಿವೆ, ಜೀರಿಗೆ: 1 ಟೀ ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ದಪ್ಪ ತಳದ ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ ಸಿಡಿಸಿ. ಈಗ ಕಡಲೆ ಬೇಳೆ, ಉದ್ದಿನ ಬೇಳೆಯನ್ನು ಹಾಕಿ 30 ನಿಮಿಷಗಳ ಕಾಲ ಬಿಡಿ. ನಂತರ ಸಣ್ಣಗೆ ಹೆಚ್ಚಿಕೊಂಡ ಬೆಳ್ಳುಳ್ಳಿ ಎಸಳುಗಳನ್ನು ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಜೀರಿಗೆ, ಮೆಣಸಿನಕಾಯಿ, ಕರಿಬೇವು ಹಾಕಿ ಬಾಣಲೆಯನ್ನು ಒಲೆಯ ಮೇಲಿಂದ ಇಳಿಸಿ. ಮೆಣಸಿನ ಪುಡಿ ಮತ್ತು ಉಪ್ಪ್ಪನ್ನು ಹಾಕಿ ಚೆನ್ನ್ನಾಗಿ ಕಲಸಿ.

ಈಗ ಈ ಮಿಶ್ರಣವನ್ನು ಬಿಸಿಬಿಸಿ ಅನ್ನಕ್ಕೆ ಹಾಕಿ ಚೆನ್ನಾಗಿ ಕಲಸಬೇಕು. ಕೊಬ್ಬರಿ ತುರಿಯನ್ನು ಉದುರಿಸಿ ಮತ್ತೊಮ್ಮೆ ಕಲಸಿಕೊಂಡರೆ ಬೆಳ್ಳುಳ್ಳಿ ರೈಸ್ ಬಾತ್ ಸಿದ್ಧವಾದಂತೆ. ಬೆಳ್ಳುಳ್ಳಿ ರೈಸ್ ಬಾತನ್ನು ಹಾಗೆ ಸವಿಯಬಹುದು ಅಥವಾ ಜೊತೆಗೆ ಉಪ್ಪಿನ ಕಾಯಿ ವಗೈರಾ ವಗೈರಾ ಇದ್ದರೆ ಮತ್ತಷ್ಟು ರುಚಿಯಾಗಿರುತ್ತದೆ.

Story first published: Tuesday, May 26, 2009, 14:08 [IST]
X
Desktop Bottom Promotion