For Quick Alerts
ALLOW NOTIFICATIONS  
For Daily Alerts

ಕ್ರಿಸ್‌ಮಸ್ ಸ್ಪೆಷಲ್: ಬಾಯಲ್ಲಿ ನೀರೂರಿಸುವ ಪ್ಯಾನ್ ಕೇಕ್

Posted By: Jaya subramanya
|

ಕ್ರಿಸ್‌ಮಸ್ ಇನ್ನೇನು ಬಂದೇ ಬಿಟ್ಟಿದೆ. ಕ್ರಿಸ್‌ಮಸ್ ಎಂದಾಗ ನೆನೆಪಾಗುವುದೇ ಚುಮು ಚುಮು ಚಳಿ ಹಾಗೂ ಬಾಯಲ್ಲಿ ನೀರೂರಿಸುವ ಪೆಸ್ಟ್ರಿ, ಚಾಕಲೇಟ್, ಕೇಕ್‌ಗಳು. ಕ್ರಿಸ್‌ಮಸ್‌ನ ಬೆಳಗ್ಗಿನ ಉಪಹಾರಕ್ಕೆ ಪ್ರತ್ಯೇಕ ರುಚಿಯನ್ನು ತರುವುದಕ್ಕಾಗಿಯೇ ನಾವಿಂದಿನ ಲೇಖನದಲ್ಲಿ ಒಂದು ವಿಶೇಷ ಖಾದ್ಯವನ್ನು ನಿಮ್ಮ ಮುಂದೆ ಪ್ರಸ್ತುಪಡಿಸುತ್ತಿದ್ದೇವೆ. ಹಬ್ಬದ ಆಚರಣೆಗೆ ಮನೆಗೆ ಬಂದ ಅತಿಥಿಗಳಿಗೂ ಇದು ಉತ್ತಮ ಸತ್ಕಾರವೆನಿಸಲಿದೆ ಮತ್ತು ನಿಮ್ಮ ಮನೆಮಂದಿ ಕೂಡ ಇದನ್ನು ಇಷ್ಟಪಟ್ಟು ಸೇವಿಸಿ ನಿಮ್ಮ ಕೈಯಡುಗೆಯನ್ನು ಮನಸಾರೆ ಕೊಂಡಾಡುವುದು ಖಚಿತ.

ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ವಿಶೇಷ ಖಾದ್ಯ ಪ್ಯಾನ್ ಕೇಕ್ ಆಗಿದೆ. ಕೊಕಾ ಪೌಡರ್, ಸಕ್ಕರೆ, ಮಜ್ಜಿಗೆ, ಮತ್ತು ಆಹಾರ ಕಲರಿಂಗ್ ಅನ್ನು ಬಳಸಿಕೊಂಡು ಈ ಪ್ಯಾನ್ ಕೇಕ್ ತಯಾರಿಸಬಹುದಾಗಿದೆ. ನಿಮ್ಮ ಬ್ರಂಚ್ ಇಲ್ಲವೇ ಉಪಹಾರ ಸಮಯಕ್ಕೆ ಇದು ಸೂಕ್ತವಾಗಿದೆ. ಗುರ್‌ಗಾವ್‌ನ ಅಡುಗೆಯವರಾದ ಅನಿಲ್ ಧಹಿಯಾ ಈ ವಿಶೇಷ ಕೇಕ್ ರೆಸಿಪಿಯನ್ನು ನಿಮ್ಮ ಮುಂದೆ ತರುತ್ತಿದ್ದಾರೆ.

red velvet cake
ರೆಡ್ ವೇಲ್ವೇಟ್ ಪ್ಯಾನ್ ಕೇಕ್| ರೆಡ್ ವೇಲ್ವೇಟ್ ಪ್ಯಾನ್ ಕೇಕ್ ಮಾಡುವುದು ಹೇಗೆ| ಮನೆಯಲ್ಲಿಯೇ ಮಾಡುವ ರೆಡ್ ವೇಲ್ವೇಟ್ ಪ್ಯಾನ್ ಕೇಕ್
ರೆಡ್ ವೇಲ್ವೇಟ್ ಪ್ಯಾನ್ ಕೇಕ್| ರೆಡ್ ವೇಲ್ವೇಟ್ ಪ್ಯಾನ್ ಕೇಕ್ ಮಾಡುವುದು ಹೇಗೆ| ಮನೆಯಲ್ಲಿಯೇ ಮಾಡುವ ರೆಡ್ ವೇಲ್ವೇಟ್ ಪ್ಯಾನ್ ಕೇಕ್
Prep Time
15 Mins
Cook Time
15M
Total Time
30 Mins

Recipe By: ಅನಿಲ್ ದಾಹಿಯಾ

Recipe Type: ಡೆಸರ್ಟ್

Serves: 10

Ingredients
  • ಸಾಮಾಗ್ರಿಗಳು

    ಮೈದಾ - 10 ಕಪ್‌ಗಳು

    ಸಕ್ಕರೆ - 1/4 ಕಪ್

    ಕೊಕಾ ಪೌಡರ್ - 2/3 ಕಪ್

    ಬೇಕಿಂಗ್ ಸೋಡಾ - 6 ಚಮಚ

    ಬೇಕಿಂಗ್ ಪೌಡರ್ - 4 ಚಮಚ

    ಉಪ್ಪು - 5 ಚಮಚ

    ಮಜ್ಜಿಗೆ - 2 ಕಪ್‌

    ಮೊಟ್ಟೆ - 2

    ರೆಡ್ ಫುಟ್ ಕಲರಿಂಗ್ - 2 ಚಮಚ

    ಬೆಣ್ಣೆ ಮತ್ತು ಮ್ಯಾಪಲ್ ಸಿರಪ್ - 1 ಚಮಚ

Red Rice Kanda Poha
How to Prepare
  • ಸಿದ್ಧಪಡಿಸುವುದು ಹೇಗೆ

    1. ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಮೈದಾ ಹುಡಿ ಮತ್ತು ಸಕ್ಕರೆಯನ್ನು ಹಾಕಿ.

    2. ಪಾತ್ರೆಯಲ್ಲಿ ಇವೆರಡನ್ನೂ ಮಿಶ್ರ ಮಾಡಿಕೊಳ್ಳಿ

    3.ಕೊಕೊ ಪೌಡರ್, ಬೇಕಿಂಗ್ ಸೋಡಾವನ್ನು ಹಾಕಿ

    4.ಅವನ್ನು ಮಿಶ್ರ ಮಾಡಿ

    5.ಅದಕ್ಕೆ ಉಪ್ಪು ಸೇರಿಸಿ

    6.ಬೌಲ್‌ನಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ

    7.ಐದರ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಅಥವಾ ಕಂಟೇನರ್‌ಗಳಲ್ಲಿ ಇದನ್ನು ಭರ್ತಿ ಮಾಡಿ

    8. 2 ಕಪ್‌ಗಳ ಮಿಶ್ರಣವನ್ನು ಪ್ಲಾಸ್ಟಿಕ್ ಬ್ಯಾಗ್ಸ್ ಅಥವಾ ಕಂಟೇನರ್‌ಗಳಲ್ಲಿ ತುಂಬಿ

    9. ಈಗ, ತಣ್ಣನೆಯ ಮತ್ತು ಒಣ ಸ್ಥಳದಲ್ಲಿ ಒಣಗಿಸಿ.

    ಪ್ಯಾನ್‌ಕೇಕ್ ಸಿದ್ಧಪಡಿಸಲು

    1. ಒಂದು ತಾಜಾ ದೊಡ್ಡ ಬೌಲ್ ತೆಗೆದುಕೊಳ್ಳಿ

    2.ಈ ಪಾತ್ರೆಗೆ ಮಿಶ್ರ ಮಾಡಿದ ಸಾಮಾಗ್ರಿಗಳನ್ನು ಹಾಕಿ

    3.ಸಣ್ಣ ಪಾತ್ರೆಯನ್ನು ತೆಗೆದುಕೊಳ್ಳಿ

    4.ಇದಕ್ಕೆ ಮಜ್ಜಿಗೆ ಮತ್ತು ಮೊಟ್ಟೆಯನ್ನು ಹಾಕಿ

    5.ಬೌಲ್‌ನಲ್ಲಿ ಮಜ್ಜಿಗೆ ಮತ್ತು ಮೊಟ್ಟೆಯನ್ನು ವಿಸ್ಕ್ ಮಾಡಿ

    6.ಇದಕ್ಕೆ ಫುಡ್ ಕಲರ್ ಸೇರಿಸಿ

    7.ಈಗ ಎಲ್ಲವನ್ನೂ ಮಿಶ್ರ ಮಾಡಿ

    8.ಮಿಶ್ರಣಕ್ಕೆ ಒಣ ಸಾಮಾಗ್ರಿಗಳನ್ನು ಹಾಕಿ

    9.ಇದು ಮಾಯಿಶ್ಚ್ ಆಗುವವರೆಗೆ ಕಲಸುತ್ತಿರಿ

    10.ಗ್ರಿಡ್ಡಲ್ ತೆಗೆದುಕೊಂಡು ಇದು ಬಿಸಿಯಾಗುವವರೆಗೆ ಕಾಯಿಸಿ

    11.ಬೆಣ್ಣೆ ಬಳಸಿಕೊಂಡು ಗ್ರಿಡ್ಡಲ್‌ಗೆ ಸವರಿ

    12.ಬೆಣ್ಣೆ ಸವರಿದ ಬಿಸಿ ಗ್ರಿಡ್ಡಲ್‌ಗೆ ಮಿಶ್ರಣವನ್ನು 1/4 ಕಪ್‌ನಂತೆ ಹಾಕಿ

    13.ಮೇಲ್ಭಾಗದಲ್ಲಿ ಉಬ್ಬಿದಾಗ ತಿರುಗಿಸಿ

    14.ಇನ್ನೊಂದು ಬದಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಬೇಯಿಸಿ

    15.ಇದು ಪೂರ್ಣವಾಗಿ ಬೆಂದಾಗ, ಪ್ಯಾನ್ ಕೇಕ್ ಅನ್ನು ಹೊರತೆಗೆದು ಸರ್ವಿಂಗ್ ಪ್ಲೇಟ್‌ಗೆ ಹಾಕಿ.

    16.ಬೆಣ್ಣೆ ಮತ್ತು ಸಿರಪ್ ಬಳಸಿಕೊಂಡು ಕೇಕ್‌ಗೆ ಸವರಿ

    17.ಬಿಸಿಯಾಗಿ ಬಡಿಸಿ

Instructions
  • ಡೆಸರ್ಟ್‌ನಂತೆ ಬಡಿಸುವಾಗ ರೆಡ್ ವೆಲ್ವೇಟ್ ಕೇಕ್ ಅನ್ನು ಬೇಕ್ ಮಾಡಿ
Nutritional Information
  • ಬಡಿಸುವ ಗಾತ್ರ - 170 ಗ್ರಾಮ್
  • ಕ್ಯಾಲೊರಿಗಳು - 597 ಕ್ಯಾಲ್
  • ಫ್ಯಾಟ್ - 25 ಗ್ರಾಮ್
  • ಪ್ರೊಟೀನ್ - 13 ಗ್ರಾಮ್
  • ಕಾರ್ಬೊಹೈಡ್ರೇಟ್ಸ್ - 80 ಗ್ರಾಮ್
[ 4 of 5 - 39 Users]
X
Desktop Bottom Promotion